ಮಂಗಳೂರು: ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯ ಭಾಗವಾಗಿ 2024ರ ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ತೀವ್ರ ವಿರೋಧದ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಲಾಗಿತ್ತು.
ಆದರೆ ಪ್ರಸ್ತುತ ಸಮಿತಿಯು ವಿರೋಧ ಪಕ್ಷಗಳ ಪ್ರತಿನಿಧಿಗಳು ಸೂಚಿಸಿದ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ಮೊದಲಿಗಿಂತಲೂ ಅಪಾಯಕಾರಿ ಅಂಶಗಳನ್ನು ಸೇರಿಸಿ ಮಂಡಿಸಿದ್ದು, ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರಲ್ಲಿ ಅಸುರಕ್ಷತೆಯನ್ನು ಮೂಡಿಸುವ ಮತ್ತು ಅವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸಿರುವ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ.
ಈ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರವು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ಮಾರ್ಚ್ 9 ಭಾನುವಾರ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ಮಂಗಳೂರಿನಲ್ಲಿ ಕಾಲ್ನಡಿಗೆ ಜಾಥಾ ನಡೆಯಲಿದೆ.
ಬೆಳಗ್ಗೆ ಒಂಬತ್ತು ಮೂವತಕ್ಕೆ ಕಾಲ್ನಡಿಗೆ ಜಾಥಾವು ಹಂಪನ ಕಟ್ಟೆ ಮಿಲಾಗ್ರಿಸ್ ನಿಂದ ಹೊರಟು ಕ್ಲಾಕ್ ಟವರ್ ನಲ್ಲಿ ಸಮಾರೋಪ ಗೊಳ್ಳಲಿದೆ.
ಜಾಥಾದ ಪ್ರಾರಂಭದಲ್ಲಿ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ಪ್ರಾರ್ಥನೆ ನಡೆಸಲಿದ್ದು ಖಾಝಿ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟನೆ ಮಾಡಲಿದ್ದಾರೆ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಸ್ವಾಗತಿಸಲಿದ್ದಾರೆ.
ಕ್ಲಾಕ್ ಟವರ್ ನಲ್ಲಿ ನಡೆಯುವ ಜಾಥಾ ಸಮಾರೋಪದಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಲಿದ್ದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ ಎಂ ಉಸ್ಮಾನುಲ್ ಫೈಝಿ ಉದ್ಘಾಟನೆ ಮಾಡಲಿದ್ದಾರೆ.
ಕರ್ನಾಟಕ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಶಾಫಿ ಸಅದಿ ಪ್ರಾಸ್ತವಿಕ ಭಾಷಣ ಮಾಡಲಿದ್ದು ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಝೖನೀ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಸಂದೇಶ ಭಾಷಣ ಮಾಡಲಿದ್ದಾರೆ.ರಫೀಕ್ ಅಹ್ಮದ್ ಹುದವಿ ಕೋಲಾರ ಸ್ವಾಗತ ಮಾಡಲಿದ್ದು ಸಿದ್ದೀಖ್ ಕೆ ಎಂ ಮೊಂಟುಗೋಳಿ ಧನ್ಯವಾದ ಸಲ್ಲಿಸಲಿದ್ದಾರೆ.
ಉಲಮಾ ಒಕ್ಕೂಟದ ನಾಯಕರಾದ
* ಯು.ಕೆ ಮುಹಮ್ಮದ್ ಸ ಅದಿ ವಳವೂರು
* ಎಸ್ ಪಿ ಹಂಝ ಸಖಾಫಿ ಬಂಟ್ವಾಳ
* ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ
* ಸಯ್ಯಿದ್ ಅಮೀರ್ ತಂಙಳ್
* ಅಬ್ದುಲ್ ಹಮೀದ್ ದಾರಿಮಿ ಸಂಪ್ಯ
* ಕೆ ಪಿ ಎಂ ಷರೀಫ್ ಪೈಝಿ ಕಡಬ
* ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ
* ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ
* ಟಿ ಎಂ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ
* ಷರೀಫ್ ಫೈಝಿ ಕಡಬ
* ಉಮರ್ ದಾರಿಮಿ ಸಾಲ್ಮಾರ
* ಖಾಸಿಂ ದಾರಿಮಿ ಸವಣೂರು
* ಎಂ ವೈ ಅಬ್ದುಲ್ ಹಫೀಳ್ ಸಅದಿ ಕೊಡಗು
* ಅಬೂಬಕ್ಕರ್ ಸಿದ್ದೀಖ್ ದಾರಿಮಿ ಕಡಬ
* ಎನ್ ಎಮ್ ಅಬ್ದುರ್ರಹ್ಮಾನ್ ಮದನಿ ಜೆಪ್ಪು
* ಕೆಕೆಎಂ ಕಾಮಿಲ್ ಸಖಾಫಿ ಸುರಿಬೈಲ್
* ಎಂಪಿಎಂ ಅಶ್ರಫ್ ಸಅದಿ ಮಲ್ಲೂರು
* ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ
* ಅಬೂಸಾಲಿಹ್ ಫೈಝಿ ತುಂಬೆ
* ಮುಹಮ್ಮದ್ ಮುಸ್ಲಿಯಾರ್ ಮುಂಡೋಲ
* ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ
ಮುಂತಾದವರು ಪಾಲ್ಗೊಳ್ಳಲಿರಿದ್ದಾರೆ.