ಸ್ವಸ್ಥ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ಶಿಕ್ಷಣ ಅತ್ಯಗತ್ಯ- ಹಾಜಿ ಹಮೀದ್ ಕೊಡಂಗಾಯಿ
ವಿಟ್ಲ : ಕಲುಷಿತಗೊಂಡ ವಾತಾವರಣಕ್ಕೆ ಹೊಂದಿಕೊಂಡಿರುವ ನಮ್ಮ ಜನತೆಯು ಕೆಡುಕಿನ ದಾಸರಾಗಿ ಬದುಕುತ್ತಿದ್ದಾರೆ.ಸುಶಿಕ್ಷಿತರು ಕೂಡ ಒಳಿತಿನ ಹಾದಿಯಿಂದ ದೂರ ಸರಿದು ನಿಂತಿರುವುದರಿಂದ ನಮ್ಮ ಸಮಾಜವು ಅಸ್ವಸ್ಥತೆಯಿಂದ ಬಳಲುತ್ತಿದೆ ಎಂದು ಸುನ್ನೀ ಸೆಂಟರ್ ಕೊಡಂಗಾಯಿ ಇದರ ಅಧ್ಯಕ್ಷರೂ ಎಸ್.ಎಂ.ಎ ರಾಜ್ಯ ಉಪಾಧ್ಯಕ್ಷರೂ ಆದ ಹಾಜಿ ಕೆ.ಎ ಹಮೀದ್ ಕೊಡಂಗಾಯಿಯವರು ಹೇಳಿದರು.
ಧಾರ್ಮಿಕ ಶಿಕ್ಷಣದಿಂದ ಮಾತ್ರವೇ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಜಗತ್ತಿನಲ್ಲಿ ಅತೀ ಹೆಚ್ಚು ಶೈಕ್ಷಣಿಕ ಕ್ರಾಂತಿಯನ್ನು ಸೃಷ್ಟಿಸಿದ ಇಸ್ಲಾಮಿಕ್ ಎಜುಕೇಷನ್ ಬೋರ್ಡ್ ಆಫ್ ಇಂಡಿಯಾದ ಪಠ್ಯ ಪದ್ಧತಿಯು ಅತ್ಯಂತ ಸೂಕ್ತವಾದುದು ಹಾಗೂ ಅಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಬಹಳಷ್ಟು ಸುಲಭ ರೂಪದಲ್ಲಿ ಮನದಟ್ಟು ಮಾಡಲು ಸಾಧ್ಯವಾಗುವುದರಿಂದ ಎಲ್ಲಾ ಮೊಹಲ್ಲಾಗಳು ಇದನ್ನೇ ಅನುಸರಿಸುವುದು ಉತ್ತಮವೆಂದು
ಅವರು ಕೊಡಂಗಾಯಿ ಸುನ್ನೀ ಸೆಂಟರ್ ಅಧೀನದಲ್ಲಿರುವ ಅಲ್ ಮದ್ರಸತುಲ್ ಖಳ್’ರಿಯ್ಯಾದ ಫತ್’ಹೇ ಮುಬಾರಕ್ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾತನಾಡುತ್ತಾ ಹೇಳಿದರು.
ದಾರುನ್ನಜಾತ್ ಎಜುಕೇಷನ್ ಸೆಂಟರ್ ಇದರ ಅಧ್ಯಕ್ಷರೂ ಸೂಫಿವರ್ಯರೂ ಆದ ಪಿಕೆ ಅಬೂಬಕರ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು, ಸ್ಥಳೀಯ ಸದರ್ ಉಸ್ತಾದ್ ಅಬ್ಬಾಸ್ ಮದನಿರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸುನ್ನೀ ಸೆಂಟರ್ ಸಮಿತಿಯ ಪ್ರ.ಕಾರ್ಯದರ್ಶಿಯಾದ ಸಿ.ಹೆಚ್. ಮಹ್ಮೂದ್ ಮುಸ್ಲಿಯಾರ್, SYS ಕೊಡಂಗಾಯಿ ಅಧ್ಯಕ್ಷರಾದ ಹುಸೈನ್ ಪಿ.ಜಾರ, ಉಪಾಧ್ಯಕ್ಷರಾದ ಸಿ.ಹೆಚ್.ಉಮರ್ ಮುಸ್ಲಿಯಾರ್, ಸುಲೈಮಾನ್ ಹಾಜಿ ಜಾರ, ಸುನ್ನೀ ಯುವಜನ ಸಂಘ ಬ್ರಾಂಚ್ ಕೋಶಾಧಿಕಾರಿ ಬಿ.ಎ.ಖಾದರ್ ಬಿಕ್ನಾಜೆ, ಎಸ್ಸೆಸ್ಸೆಫ್ ವಿಟ್ಲ ಸೌತ್ ಸೆಕ್ಟರ್ ಅಧ್ಯಕ್ಷರಾದ ಸಿ.ಎಚ್ ಅಬ್ದುಲ್ ಖಾದರ್, ಯೂನಿಟ್ ಅಧ್ಯಕ್ಷರಾದ ಲತೀಫ್ ಎಂ, ಕೆಸಿಎಫ್ ಕಾರ್ಯಕರ್ತ ಎಂಕೆ ಅಬ್ದುಲ್ ರಝ್ಝಾಕ್ ಸಹಿತ ಹಲವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಎಸ್ಸೆಸ್ಸೆಫ್ ಕೊಡಂಗಾಯಿ ಯೂನಿಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತಮೀಮ್ ಸ್ವಾಗತಿಸಿ,ಕೊನೆಯಲ್ಲಿ ವಂದಿಸಿದರು.