ಪುತ್ತೂರು (ಜನಧ್ವನಿ ವಾರ್ತೆ):ಕುಂಬ್ರ ಬದ್ರೀಯಾ ನಗರ ಬದ್ರೀಯಾ ಜುಮಾ ಮಸೀದಿಯ ಮದ್ರಸಾದಲ್ಲಿ ಜೂನ್ 25 ಸೋಮವಾರ ಬೆಳಿಗ್ಗೆ ಹೊಸತಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಸ್ವಾಗತ ಕೋರುವ ಮೂಲಕ ಪ್ರಾರಂಭಿಸಲಾಯಿತು.
ಜಮಾಅತ್ ಕಮಿಟಿ ಅಧ್ಯಕ್ಷರಾದ ಮೂಸ ಮುಸ್ಲಿಯಾರ್ ಶಾಂತಿಯಡಿ ಉದ್ಘಾಟನಾ ಭಾಷಣ ಮಾಡಿದರು. ಮದ್ರಸಾ ಅಧ್ಯಾಪಕರಾದ ಅನ್ಸಾರ್ ಸಅದಿ ಬಳಂದೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಸದರ್ ಉಸ್ತಾದರಾದ ಹಸನ್ ಅಹ್ಸನಿ ಯವರು ಮುಖ್ಯ ಪ್ರಭಾಷಣಗೈದು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಹಾಗೂ ಇಲ್ಮಿನ ಪ್ರಾಮುಖ್ಯತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ಜಮಾಅತ್ ಕಮಿಟಿ ಸದಸ್ಯರು ಭಾಗವಹಿಸಿದ್ದರು.ಜಮಾಅತ್ ಸಮಿತಿ ಕಾರ್ಯದರ್ಶಿಯಾದ ಮುಹಮ್ಮದ್ ಮಗಿರೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ವರದಿ : ಆಸೀಫ್ ಅಜಿಲಮೊಗರು.