- ದುಬೈ: ಅನಿವಾಸಿಗಳ ಬಹುದೊಡ್ಡ ಸಂಘ ಶಕ್ತಿಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕರ್ನಾಟಕದ ಎಲ್ಲಾ ಸಂಘ ಸಂಸ್ಥೆಗಳಿಗೆ ಸ್ಪೂರ್ತಿಯಾಗಿದೆ. ವಿದೇಶದಲ್ಲಿದ್ದುಕೊಂಡು ಉತ್ತರ ಕರ್ನಾಟಕದ ವಿಧ್ಯಾಭ್ಯಾಸಕ್ಕೂ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಿಗೂ ಬಹು ದೊಡ್ಡ ಸಹಕಾರ ನೀಡುವ ಕೆಸಿಎಫ್ ನಮಗೆ ಹೆಮ್ಮೆ ಎಂದು ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿಗಳಾದ ಬಹು|ಕೆ. ಪಿ ಹುಸೈನ್ ಸಅದಿ ಕೇಸಿರೋಡ್ ತಿಳಿಸಿದರು. ದುಬೈ ಕರ್ಲಟನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಕೆಸಿಎಫ್ ಅಂತರ್ರಾಷ್ಟ್ರೀಯ ಮಂಡಳಿಯ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಯುವ ಜನತೆಯ ಬಿಡುವು ಸಮಯವನ್ನು ಸಾಮಾಜಿಕ ಸೇವೆಗೆ ಮೀಸಲಿಡುವುದು ಇತರರಿಗೆ ಮಾರ್ಗದರ್ಶನವಾಗಿದೆ ಎಂದರು.
- 2025-26 ನೇ ಸಾಲಿನ ಕೆಸಿಎಫ್ ನ ನೂತನ ಸಮಿತಿಯನ್ನು ಆರಿಸಲಾಯಿತು. ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ಅಧ್ಯಕ್ಷರಾಗಿ ಇಕ್ಬಾಲ್ ಬರಕ ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಹಾಜಿ ರೈಸ್ಕೋ ಕೋಶಾಧಿಕಾರಿಯಾಗಿ ವಿವಿಧ ಇಲಾಖಾವಾರು ಪದಾಧಿಕಾರಿಗಳಾಗಿ ಅಬ್ದುಲ್ ಜಲೀಲ್ ನಿಝಾಮಿ, ಸಯ್ಯಿದ್ ಆಬಿದ್ ತಂಙಳ್ ಸಂಘಟನೆ, ಹಾಫಿಳ್ ಫಾರೂಖ್ ಸಖಾಫಿ, ಖಲಂದರ್ ಕಕ್ಕೆಪದವು ಶಿಕ್ಷಣ ಇಲಾಖೆ, ಇಕ್ಬಾಲ್ ಕಾಜೂರ್, ಝಕರಿಯಾ ಆನೆಕಲ್ಲು, ಸಾಂತ್ವನ ಇಲಾಖೆ, ಫಾರೂಖ್ ಕಾಟಿಪಳ್ಳ, ಅಬ್ದುಲ್ ಕರೀಂ ಮುಸ್ಲಿಯಾರ್, ಪ್ರಕಾಶನ ಇಲಾಖೆ, ಹುಸೈನ್ ಮುಸ್ಲಿಯಾರ್ ಎಮ್ಮೆಮಾಡು, ಫೈಝಲ್ ಕೃಷ್ಣಾಪುರ, ಆಡಳಿತ ಸಂಪರ್ಕ ಇಲಾಖೆ, ಅಯ್ಯೂಬ್ ಕೋಡಿ, ಸ್ವಾಲಿಹ ಬೆಳ್ಳಾರೆ, ಇಹ್ಸಾನ್ ಇಲಾಖೆ, ಖಮರುದ್ದೀನ್ ಗೂಡಿನಬಳಿ, ಫೈರೋಝ್ ಕಬಕ, ಪ್ರೊಫೆಶನಲ್ ಇಲಾಖೆ,ಮತ್ತು ಪ್ಲಾನಿಂಗ್ ಬೋರ್ಡ್ ಚೆರ್ಮೇನ್ ಡಿಪಿ ಯೂಸುಫ್ ಸಖಾಫಿ ಬೈತಾರ್, ಕನ್ವೀನರ್, ಅಬ್ದುಲ್ ಹಮೀದ್ ಈಶ್ವರಮಂಗಳ ಆಯ್ಕೆಯಾದರು.
- ಡಿಪಿ ಯೂಸುಫ್ ಸಖಾಫಿ ಬೈತಾರ್ ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕೇರಳ ಮುಸ್ಲಿಂ ಜಮಾಅತ್ ಕಾರ್ಯದರ್ಶಿಗಳಾದ ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲ್ ತಂಙಳ್ ಉಧ್ಘಾಟಿಸಿದರು. ಅಬ್ದುಲ್ ಹಮೀದ್ ಈಶ್ವರಮಂಗಳ ಸ್ವಾಗತಿಸಿದರು.
Kannada Online News Paper