janadhvani

Kannada Online News Paper

ಅಕ್ರಮ ನಿವಾಸಿಗಳಿಗೆ ದೇಶವನ್ನು ತೊರೆಯಲು ಅವಕಾಶ- ಕತಾರ್ ನಲ್ಲಿ ಕ್ಷಮಾದಾನ ಘೋಷಣೆ

ರೆಸಿಡೆನ್ಸಿಗೆ ಸಂಬಂಧಿಸಿದ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಿದವರು ಅಥವಾ ಪ್ರವೇಶ ವೀಸಾದ ಅಡಿಯಲ್ಲಿ ದೇಶದಲ್ಲಿ ತಮ್ಮ ಅಧಿಕೃತ ಅವಧಿಯನ್ನು ಮೀರಿದವರು ಈ ಕ್ಷಮಾದಾನವನ್ನು ಪಡೆಯಬಹುದು.

ದೋಹಾ: ವೀಸಾ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ನಿವಾಸಿಗಳು ದೇಶವನ್ನು ತೊರೆಯಲು ಅವಕಾಶ ನೀಡಲು ಖತಾರ್ ಕ್ಷಮಾದಾನವನ್ನು ಘೋಷಿಸಿದೆ. ನಾಳೆಯಿಂದ ಮೇ 9ರವರೆಗೆ ಮೂರು ತಿಂಗಳ ಕಾಲಾವಧಿಯನ್ನು ನೀಡಲಾಗಿದೆ.

ದೇಶದಲ್ಲಿ ಸಾಕಷ್ಟು ರೆಸಿಡೆನ್ಸಿ ದಾಖಲೆಗಳಿಲ್ಲದೆ ವಾಸಿಸುವವರಿಗೆ ದಂಡ ಅಥವಾ ಜೈಲು ಶಿಕ್ಷೆಯಿಲ್ಲದೆ ಸ್ವದೇಶಕ್ಕೆ ಮರಳಲು ಒಂದು ಅವಕಾಶವಾಗಿದೆ ಗ್ರೇಸ್ ಪಿರಿಯೇಡ್ ಅಥವಾ ಸಾಮಾನ್ಯ ಕ್ಷಮಾದಾನ. ಅಂತಹವರು ನಾಳೆಯಿಂದ ಮೂರು ತಿಂಗಳೊಳಗೆ ದೇಶ ತೊರೆಯಬೇಕು. ರೆಸಿಡೆನ್ಸಿಗೆ ಸಂಬಂಧಿಸಿದ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಿದವರು ಅಥವಾ ಪ್ರವೇಶ ವೀಸಾದ ಅಡಿಯಲ್ಲಿ ದೇಶದಲ್ಲಿ ತಮ್ಮ ಅಧಿಕೃತ ಅವಧಿಯನ್ನು ಮೀರಿದವರು ಈ ಕ್ಷಮಾದಾನವನ್ನು ಪಡೆಯಬಹುದು.

ದೇಶದಲ್ಲಿ ಅಕ್ರಮವಾಗಿ ನೆಲೆಸಿರುವವರು ಪಾಸ್‌ಪೋರ್ಟ್‌ ಮತ್ತು ಪ್ರಯಾಣದ ಟಿಕೆಟ್‌ಗಳು ಸೇರಿದಂತೆ ದಾಖಲೆಗಳೊಂದಿಗೆ ಹಮದ್ ಇಂಟರ್‌ನ್ಯಾಷನಲ್ ವಿಮಾನದಲ್ಲಿ ಖುದ್ದಾಗಿ ಹಾಜರಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಮೂಲಕ ದೇಶಕ್ಕೆ ತೆರಳಬಹುದು.

ಆಂತರಿಕ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಚ್ ಆಂಡ್ ಫಾಲೋಅಪ್ ಕೇಂದ್ರಕ್ಕೆ ಭೇಟಿ ನೀಡಿ ಕಾನೂನು ಪ್ರಕ್ರಿಯೆಗಳನ್ನು ಪೂರ್ತೀಕರಿಸುವ ಮೂಲಕವೂ ಸಾಮಾನ್ಯ ಕ್ಷಮಾದಾನ ಅವಧಿಯೊಳಗೆ ದೇಶವನ್ನು ತೊರೆಯಬಹುದು ಎಂದು ಕತಾರ್ ಆಂತರಿಕ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಕ್ಷಮಾದಾನವನ್ನು ಬಳಸಲು ಬಯಸುವವರು ಪ್ರಯಾಣಿಸಲು ಇತರ ಕಾನೂನು ಅಡೆತಡೆಗಳಿಲ್ಲದಿದ್ದರೆ ಮಾತ್ರ ದೇಶವನ್ನು ತೊರೆಯಬಹುದು. ಅಂದರೆ ಅಕ್ರಮ ವಾಸ್ತವ್ಯದ ಕಾನೂನನ್ನು ಉಲ್ಲಂಘಿಸಿದವರು ಮಾತ್ರ ಈ ಅವಕಾಶವನ್ನು ಬಳಸಬಹುದು.ಅವರು ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ,ಅದರ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರವೇ ಅವರಿಗೆ ದೇಶವನ್ನು ತೊರೆಯಲು ಸಾಧ್ಯವಾಗಲಿದೆ.