janadhvani

Kannada Online News Paper

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)- ಇಂಟರ್ನ್ಯಾಷನಲ್ ಕೌನ್ಸಿಲ್ ಗೆ ನೂತನ ನಾಯಕತ್ವ

ಅಬ್ದುಲ್ ಹಮೀದ್ ಸಅದಿ, ಇಖ್‌ಬಾಲ್ ಬರಕ, ರೈಸ್ಟೋ ಅಬೂಬಕ‌ರ್ ಹಾಜಿ ಸಾರಥಿಗಳು

ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಅಂತಾರಾಷ್ಟ್ರೀಯ ಸಮಿತಿಯಾದ KCF IC ಇದರ ಮಹಾ ಸಭೆಯು ಫೆ.8-2025 ರಂದು ದುಬೈ ಕಾರ್ಲ್ಟನ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಅಂತಾರಾಷ್ಟ್ರೀಯ ಕೌನ್ಸಿಲ್ ಅಧ್ಯಕ್ಷರಾದ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೇರಳ ಮುಸ್ಲಿಂ ಜಮಾಅತ್ ಪ್ರ.ಕಾರ್ಯದರ್ಶಿ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ ಉದ್ಘಾಟಿಸಿದರು. ಸಮಾರಂಭದಲ್ಲಿ RO ಆಗಿ ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಪ್ರ.ಕಾರ್ಯದರ್ಶಿ ಕೆ.ಪಿ.ಹುಸೈನ್ ಸಅದಿ ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಸಮಿತಿಯ ನೂತನ ಸಾರಥಿಗಳು

ಅಧ್ಯಕ್ಷರು: ಅಬ್ದುಲ್ ಹಮೀದ್ ಸಅದಿ(ಯುಎಇ)

ಪ್ರ.ಕಾರ್ಯದರ್ಶಿ: ಇಖ್‌ಬಾಲ್ ಬರಕ(ಒಮಾನ್)

ಕೋಶಾಧಿಕಾರಿ: ರೈಸ್ಟೋ ಅಬೂಬಕ‌ರ್ ಹಾಜಿ(ಕೆಎಸ್ಎ)

ಆರ್ಗನೈಝೇಶನ್ : ಅಬ್ದುಲ್ ಜಲೀಲ್ ನಿಝಾಮಿ, ಆಬಿದ್ ತಂಙಳ್

ನೋಲೇಜ್ : ಹಾಫಿಲ್ ಫಾರೂಖ್ ಸಖಾಫಿ, ಖಲಂದರ್ ಬಹರೈನ್

ವೆಲ್ಫೇರ್ : ಇಖ್ಬಾಲ್ ಕಾಜೂರು, ಝಕರಿಯ್ಯಾ ಆನೆಕಲ್

ಪಬ್ಲಿಕೇಶನ್ : ಫಾರೂಖ್ ಕಾಟಿಪಳ್ಳ, ಕರೀಮ್ ಮುಸ್ಲಿಯಾರ್

ಅಡ್ಡಿನ್ & ಪಿ.ಆರ್ : ಹುಸೈನ್ ಎರುಮಾಡ್, ಫೈಝಲ್ ಕೃಷ್ಣಾಪುರ

ಇಹ್ಸಾನ್ : ಅಯ್ಯೂಬ್ ಕೋಡಿ, ಸ್ವಾಲಿಹ್ ಬೆಳ್ಳಾರೆ

ಪ್ರೊಫೆಶನಲ್ : ಖಮರುದ್ದೀನ್ ಗೂಡಿನಬಳಿ, ಫೈರೋಝ್ ಯು.ಕೆ

ಪ್ಲಾನಿಂಗ್ ಬೋರ್ಡ್:

ಚಯರ್ಮೇನ್: ಡಿ.ಪಿ ಯೂಸುಫ್ ಸಖಾಫಿ ಬೈತಾರ್

ಕನ್ವೀನರ್: ಪಿ.ಎಂ. ಅಬ್ದುಲ್ ಹಮೀದ್

ಸದಸ್ಯರು: ಅಲಿ ಮುಸ್ಲಿಯಾರ್ ಬಹರೈನ್, ಎನ್. ಎಸ್. ಅಬ್ದುಲ್ಲಾಹ್, ನಝೀರ್ ಹಾಜಿ ಕಾಶಿಪಟ್ನ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

ವಿದೇಶ ರಾಷ್ಟ್ರಗಳಲ್ಲಿರವ ಕನ್ನಡಿಗ ಉದ್ಯಮಿಗಳು ಹಾಗೂ ಉದ್ಯೋಗಿಗಳಾದ ಸುನ್ನೀ ಕಾರ್ಯಕರ್ತರಿಂದ ಕಾರ್ಯಾಚರಿಸಲ್ಪಡುವ ಕೆಸಿಎಫ್ ತನ್ನ ದಶವಾರ್ಷಿಕ ಪೊರೈಸಿರುವ ಸಂದರ್ಭದಲ್ಲಿ ಹತ್ತು ರಾಷ್ಟ್ರಗಳಲ್ಲಿ ರಾಷ್ಟ್ರೀಯ ಸಮಿತಿಯನ್ನು ಅಸ್ತಿತ್ವಕ್ಕೆ ತಂದು ಕರ್ನಾಟಕದಲ್ಲಿ ವೈಜ್ಞಾನಿಕ ಮತ್ತು ಸಾಮಾಜಿಕ ರಂಗದಲ್ಲಿ ಸಂಚಲನವನ್ನು ಉಂಟು ಮಾಡಿದೆ.

ವಿವಿಧ ಜನಪರ ಯೋಜನೆಗಳನ್ನು ಹಮ್ಮಿಕೊಂಡು, ಬಡವರಿಗೆ ಮನೆ ನಿರ್ಮಾಣ, ಬಾವಿ, ಕೊಳವೆಬಾವಿ ನಿರ್ಮಿಸಿ ಕುಡಿಯುವ ನೀರಿನ ಯೋಜನೆ, ಪ್ರಮುಖವಾಗಿ, ಧಾರ್ಮಿಕ ವಿದ್ಯೆಯಲ್ಲಿ ತೀರಾ ಹಿಂದುಳಿದಿರುವಂತಹಾ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇಹ್ಸಾನ್ ಮೂಲಕ ಧಾರ್ಮಿಕ ಕ್ರಾಂತಿಯನ್ನೇ ಸೃಷ್ಟಿಸಿದೆ.