ಮಂಜನಾಡಿ: ಕೋಝಿಕ್ಕೋಡು ಜಿಲ್ಲೆಯ ಮಡೂವೂರಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಖುತುಬುಲ್ ಆಲಂ ಶೈಖ್ ಸಿಎಂ ವಲಿಯುಲ್ಲಾಹಿ (ಖ.ಸಿ )ರವರ ಸ್ಮರಣಾರ್ಥ, ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ನೇತೃತ್ವದಲ್ಲಿ ಮಡವೂರಿನಲ್ಲಿ ಕಳೆದ 35 ವರ್ಷಗಳಿಂದ ಕಾರ್ಯಾಚರಣೆ ಮಾಡುತ್ತಿರುವ ಸಿಎಂ ಸೆಂಟರ್ ವಿದ್ಯಾ ಸಂಸ್ಥೆಯ 35ನೇ ವಾರ್ಷಿಕ ಸಮ್ಮೇಳನದ ಕರ್ನಾಟಕ ರಾಜ್ಯದ ಪ್ರಚಾರ ಉದ್ಘಾಟನಾ ಸಮಾವೇಶವು ಜನವರಿ 31 ಶುಕ್ರವಾರ ಅಪರಾಹ್ನ 3 ಗಂಟೆಗೆ ಮಂಜನಾಡಿ ಅಲ್ ಮದಿನಾ ಕ್ಯಾಂಪಸ್ ನಲ್ಲಿರುವ ಶರಫುಲ್ ಉಲಮಾ ಆಡಿಟೋರಿಯಂ ನಲ್ಲಿ ನಡೆಯಿತು.
ಪ್ರಾರಂಭದಲ್ಲಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮಖ್ ಬರ ಝಿಯಾರತ್ ಗೆ ಸಯ್ಯಿದ್ ಶಫೀಕ್ ಅಲ್ ಹಾದಿ ಸಅದಿ ನೇತೃತ್ವ ಕೊಟ್ಟರು. ಶರಫುಲ್ ಉಲಮಾ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪ್ರಚಾರ ಉ ಕಾರ್ಯಕ್ರಮ
ಕರ್ನಾಟಕ ರಾಜ್ಯ ಪ್ರಚಾರ ಉದ್ಘಾಟನೆ ಗೆ ಮಡವುರ್ ಸಿ ಎಂ ಸೆಂಟರ್ ಪ್ರಧಾನ ಕಾರ್ಯದರ್ಶಿ ಟಿ ಕೆ ಅಬ್ದುಲ್ ರಹ್ಮಾನ್ ಬಾಖವಿ ನೇತೃತ್ವ ಕೊಟ್ಟರು.
ಸಮಿತಿಯ ಅಧ್ಯಕ್ಷ ಅಶ್ ಅರಿಯ ಮುಹಮ್ಮದ್ ಅಲಿ ಸಖಾಫಿ ಅಧ್ಯಕ್ಷ ತೆ ವಹಿಸಿ ಮಂಜನಾಡಿ ಅಲ್ ಮದೀನಾ ಕಾಂಪ್ಲೆಕ್ಸ್ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಿದರು .
ಮುಖ್ಯ ಅತಿಥಿಗಳಾಗಿ ಮಡವೂರು ಸಿಎಂ ಸೆಂಟರ್ ಕಾರ್ಯದರ್ಶಿ , ಸಯ್ಯಿದ್ ಖಲೀಲ್ ಬಾಅಲವಿ ತಂಗಳ್ ಮಡವೂರು, ಡಾ ಎಮ್ಮೆಸ್ಸೆಮ್ ಅಬ್ದುಲ್ ರಶೀದ್ ಝೖನೀ, ಮುಹಿಮ್ಮತ್ ಮುದರ್ರಿಸ್ ಮೂಸ ಸಖಾಫಿ ಕಳತೂರ್, ಸಂದೇಶ ಭಾಷಣ ಮಾಡಲಿದರು.
ಸಯ್ಯಿದ್ ಉವೈಸ್ ತಂಙಳ್, ಉಮರ್ ಮಾಸ್ಟರ್ ಎನ್ನೆಸ್, ಇಸ್ಮಾಯಿಲ್ ಸಅದಿ ಊರುಮನೆ, ಅಬ್ದುಲ್ ರಹ್ಮಾನ್ ರಝ್ವೀ ಕಲ್ಕಟ್ಟ, ವಖ್ಫ್ ಸಲಹಾ ಮಂಡಳಿ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಮೊಗರ್ಪಣೆ, ಮುಹಮ್ಮದ್ ಕುಂಞಿ ಅಮ್ಜದಿ, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಹಾಗೂ
ಸುನ್ನಿ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು ಭಾಗವಹಿಸಿದರು.
ಕರ್ನಾಟಕ ರಾಜ್ಯ ಪ್ರಚಾರ ಸಮಿತಿ ಕಾರ್ಯದರ್ಶಿ ಸಲೀಮ್ ಕನ್ಯಾಡಿ ಸ್ವಾಗತಿಸಿ ಹಂಝ ಮದನಿ ಬೆಳ್ತಂಗಡಿ ಧನ್ಯವಾದ ಹೇಳಿದರು.