ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಮ್ ಝೋನ್ ಅಧೀನದ ಡಿಕೆಯಸ್ಸಿ ದಮ್ಮಾಮ್ ಘಟಕದ 30 ನೇ ವಾರ್ಷಿಕ ಮಹಾಸಭೆ ದಿನಾಂಕ 30, ಜನವರಿ 2025 ಗುರುವಾರ ಅಸ್ತ ಶುಕ್ರವಾರ ರಾತ್ರಿ 10.30 ಗಂಟೆಗೆ ಸರಿಯಾಗಿ ದಮ್ಮಾಮ್ ಅಡಿಟೋರಿಯಂನಲ್ಲಿ ಜರಗಿತು.
ದಮ್ಮಾಮ್ ಘಟಕದ ಅಧ್ಯಕ್ಷರಾದ ಸಯ್ಯದ್ ಬಾವಾ ಬಜ್ಪೆರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಡಿಕೆಯಸ್ಸಿ ಖಾದಿಂಇಸ್ಮಾಯೀಲ್ ಕಾಟಿಪಳ್ಳ ದುಆ ನೆರವೇರಿಸಿದರು. ಅಬೂಬಕ್ಕರ್ ಅಜಿಲಮೊಗರು ಸೂರ ಅಲ್ ಕೌಸರ್ ಪಾರಾಯಣ ಗೈದರು.ಜನಾಬ್ ಅಬ್ದುಲ್ ಅಝೀಝ್ ಮೂಡುತೋಟ ಸಭೆಗೆ ಆಗಮಿಸಿದ ದಮ್ಮಾಮ್, ಅಲ್ ಖೋಬರ್, ತುಖ್ಬಾ ಹಾಗೂ ಜುಬೈಲ್ ನ ಡಿಕೆಯಸ್ಸಿ ಯ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಜನಾಬ್ ಅಬ್ದುಲ್ ಹಮೀದ್ ಉಳ್ಳಾಲ ಸಮಾರಂಭ ವನ್ನು ಉದ್ಘಾಟಿಸಿದರು.ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ವಾರ್ಷಿಕ ವರದಿ ಹಾಗೂ ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.
ಅಧ್ಯಕ್ಷರಾದ ಸಯ್ಯದ್ ಬಾವಾ ಬಜ್ಪೆ ಮಾತನಾಡುತ್ತಾ ನಮ್ಮ ಅಧಿಕಾರವಧಿಯಲ್ಲಿ ಡಿಕೆಯಸ್ಸಿ ಗಾಗಿ ನಮ್ಮೊಂದಿಗೆ ಸಹಕರಿಸಿ ಯಶಸ್ವಿಗೊಳಿಸಿದ ಸರ್ವರಿಗೂ ತಕ್ಕುದಾದ ಪ್ರತಿಫಲ ಅಲ್ಲಾಹು ದ್ವಿಲೋಕದಲ್ಲೂ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು. ಮ್ಯಾನ್ ಆಫ಼್ ದಿ ಇಯರ್ ಅವಾರ್ಡ್ 2024 ಮುಹಮ್ಮದ್ ಹಸನ್ ಮೂಡುತೋಟ ರವರಿಗೆ ನೀಡಿ ಗೌರವಿಸಲಾಯಿತು.
ಡಿಕೆಯಸ್ಸಿ ಗಾಗಿ 30 ವರ್ಷಗಳ ಕಾಲ ಅವಿರತ ಶ್ರಮಗೈದ ಸದಸ್ಯ ರಾದ ಮುಹಮ್ಮದ್ ಹಸನ್ ಮೂಡುತೋಟ, ಸಿದ್ದೀಖ್ ಕೊಂಚಾರ್, ಅಬ್ದುಲ್ ಕರೀಂ ಮೂಳೂರು, ಅಬ್ದುರ್ರಶೀದ್ ವಿಟ್ಲ, ಅಬ್ದುಲ್ ಅಬ್ದುಲ್ ಅಝೀಝ್ ಮೂಡುತೋಟ , ಅಬೂಬಕ್ಕರ್ ಅಜಿಲಮೊಗರು ಮತ್ತು ಅಬ್ದುಲ್ ಹಮೀದ್ ಕೊಂಚಾರ್ ರವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಎರಡು ವರ್ಷಗಳ ಕಾಲ ಅಧ್ಯಕ್ಷ ಸ್ಥಾನ ವಹಿಸಿ ಅಮೋಘ ಸೇವೆ ಸಲ್ಲಿಸಿದ ಸಯ್ಯದ್ ಬಾವಾ ಬಜ್ಪೆ ರವರಿಗೆ ಪ್ರೆಸಿಡೆನ್ಶಿಯಲ್ ಅವಾರ್ಡ್ 2024 ನೀಡಿ ಆದರಿಸಲಾಯಿತು.
2025 ನೇ ಸಾಲಿಗೆ ನೂತನ ಸಮಿತಿಯನ್ನು ಡಿಕೆಯಸ್ಸಿ ದಮ್ಮಾಮ್ ಝೋನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ರಚಿಸಿದರು.
ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಕೊಂಚಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಲ್ತಾಫ್ ಚೊಕ್ಕಬೆಟ್ಟು, ಹಣಕಾಸು ಕಾರ್ಯದರ್ಶಿಯಾಗಿ ಅಬೂಬಕ್ಕರ್ ಅಜಿಲಮೊಗರು, ಜಂಟಿ ಕಾರ್ಯದರ್ಶಿಯಾಗಿ ಅಶ್ರಫ್ ಉಜಿರೆ, ಸಂವಹನ ಕಾರ್ಯದರ್ಶಿಯಾಗಿ ಇಸ್ಮಾಯೀಲ್ ಕಾಟಿಪಳ್ಳ ಹಾಗೂ ಡೆವಲಪ್ಮೆಂಟ್ ಚೆಯರ್ಮ್ಯಾನ್ ಆಗಿ ಸಯ್ಯದ್ ಬಾವಾ ಬಜ್ಪೆ ಆಯ್ಕೆಗೊಂಡರು.
ಉಪಾಧ್ಯಕ್ಷರುಗಳಾಗಿ ಹೈದರ್ ಅಡ್ಡೂರು, ಫೈಸಲ್ ಕೆಪುರ, ಹಾಗೂ ಮುಹಮ್ಮದ್ ಕೊಂಚಾರ್ ಕಾರ್ಯದರ್ಶಿಗಳಾಗಿ ಶೌಕತ್ ಅಲೀ ತೀರ್ಥಹಳ್ಳಿ, ಸಿನಾನ್ ಕಾನ, ಸಫ್ವಾನ್ ಕೊಂಚಾರ್ ಮತ್ತು ಅಬ್ದುಲ್ ಹಮೀದ್ ಕೊಲ್ನಾಡ್ ರವರನ್ನು ನೇಮಿಸಲಾಯಿತು.
ಮುಖ್ಯ ಸಲಹೆಗಾರರಾಗಿ ಮುಹಮ್ಮದ್ ಹಸನ್ ಮೂಡುತೋಟ, ಲೆಕ್ಕ ಪರಿಶೋಧಕರಾಗಿ ಇಸ್ಮಾಯೀಲ್ ಮೂಳೂರು ರವರನ್ನು ಆರಿಸಲಾಯಿತು.
ಅಬ್ದುಲ್ ಅಝೀಝ್ ಮೂಡುತೋಟ, ಅಬ್ದುಲ್ ಕರೀಮ್ ಮೂಳೂರು, ಹಸನ್ ಬಾವ ಕುಪ್ಪೆಪದವು, ಉಮರಬ್ಬ ಮರವೂರು, ಅಬ್ದುಲ್ ರಶೀದ್ ವಿಟ್ಲ , ತಸ್ಲೀಂ ಉಪ್ಪಿನಂಗಡಿ, ನಝೀರ್ ಕಾನ, ಇಮ್ತಿಯಾಝ್ ಕೂಳೂರು ಹಾಗೂ ಜಮಾಲ್ ಉಚ್ಚಿಲ, ಸ್ವಾದಿಖ್ ಕೊಂಚಾರ್, ರಾಶಿದ್ ಮುಲರಪಟ್ನ, ಸ್ವದಖತುಲ್ಲಾ:, ಮುಸ್ತಫ ಕಾಟಿಪಳ್ಳ, ಫ಼ಾರೂಖ್ ಜೋಕಟ್ಟೆ, ಅಬ್ದುಲ್ ಕರೀಮ್ ವಿಟ್ಲ ರವರನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ದಮ್ಮಾಮ್ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಕಾಪು, ಡಿಕೆಯಸ್ಸಿ ವಿಶನ್ 30 ಚೆಯರ್ಮ್ಯಾನ್ ಹಾಗೂ ದಮಾಮ್ ಘಟಕ ಉಸ್ತುವಾರಿ ಹಾತಿಂ ಕೂಳೂರು, ಡಿಕೆಯಸ್ಸಿ ಕೇಂದ್ರ ಸಮಿತಿ ಹಣಕಾಸು ಕಾರ್ಯದರ್ಶಿ ದಾವೂದ್ ಕಜೆಮಾರ್ , ಮಾಜಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿಂಜೆ, ಫ್ಯಾಮಿಲಿ ಮುಲಾಖಾತ್ ಚೆಯರ್ಮ್ಯಾನ್ ಅಬ್ದುಲ್ ಅಝೀಝ್ ಮೂಳೂರು ,ಅಲ್ ಖೋಬರ್ ಘಟಕದ ಅಧ್ಯಕ್ಷ ಅಶ್ರಫ್ ಚಿಕ್ಕಮಗಳೂರು ಆಗಮಿಸಿದ್ದರು.
ಶುಭಾಶoಸೆಗೈದವರು:
ಡಿಕೆಯಸ್ಸಿ ದಮ್ಮಾಂ ಘಟಕದ ಮಾಜಿ ಅಧ್ಯಕ್ಷರುಗಳಾದ ಹಸನ್ ಬಾವ ಬೆಂಗಳೂರು,ಜಮಾಲ್ ಉಚ್ಚಿಲ , ಡಿಕೆಯಸ್ಸಿ ಮಾಜಿ ಕಾರ್ಯದರ್ಶಿಗಳಾದ ಎಸ್. ಎಚ್.ಅನ್ಸಾರಿ ಸುರತ್ಕಲ್, ಇಬ್ರಾಹೀಮ್ ಬೈಕಂಪಾಡಿ, ಶೌಕತ್ ತೀರ್ಥಹಳ್ಳಿ, ಇಮ್ತಿಯಾಝ್ ಕೂಳೂರು ಹಾಗೂ ಕೋಶಾಧಿಕಾರಿ ಉಮರಬ್ಬ ಮರವೂರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಅಬ್ದುಲ್ ಹಮೀದ್ ಕೊಂಚಾರ್ ಮಾತನಾಡುತ್ತಾ ತಾವುಗಳೆಲ್ಲರೂ ಡಿಕೆಯಸ್ಸಿ ಗಾಗಿ ಹೆಚ್ಚಿನ ಮುತುವರ್ಜಿಯಿಂದ ಪ್ರವರ್ತನೆಗೈದು ಡಿಕೆಯಸ್ಸಿಯ ಅಭಿವೃದ್ಧಿಗೆ ನಮ್ಮೊಂದಿಗೆ ಕೈ ಜೋಡಿಸಬೇಕೆoದು ವಿನಂತಿಸಿದರು.
ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು ಹಾಗೂ ಸಭೆಯ ಕೊನೆಯಲ್ಲಿ ಧನ್ಯವಾದ ಗೈದರು.