ಶೈಕ್ಷಣಿಕವಾಗಿ ಹಿಂದುಳಿದಿರುವ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಭ್ಯಾಸ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ‘ಇಹ್ಸಾನ್’, ಅಧೀನ ಸಂಸ್ಥೆಗಳ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕಾಗಿ ಹಮ್ಮಿಕೊಂಡಿರುವ ‘ಇಹ್ಸಾನೋತ್ಸವ ಗ್ರಾಂಡ್ ಅಸೆಂಬ್ಲೇಜ್’ ಅನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಕರೆ ನೀಡಿದೆ. ಸುಸಂಸ್ಕೃತ ಸಮಾಜಕ್ಕೆ ಸುಶಿಕ್ಷಿತ ಪ್ರತಿಭೆಗಳು ಎನ್ನುವ ಧ್ಯೇಯ ವಾಕ್ಯದೊಂದಿಗೆ ಜನವರಿ 19,20ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರಸ್ತುತ ಕಾರ್ಯಕ್ರಮ ನಡೆಯಲಿದೆ.
ಇದರ ಪ್ರಚಾರಾರ್ಥ ಜನವರಿ 13 14 15 ರಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ನಡೆಯುವ ಪ್ರಚಾರ ಜಾಥಾದಲ್ಲೂ ಎಲ್ಲಾ ಸುನ್ನೀ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕೆಂದು ಎಸ್ ವೈ ಎಸ್ ವಿನಂತಿಸಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಎಂ ವೈ ಹಫೀಳ್ ಸಅದಿ ಅಧ್ಯಕ್ಷತೆ ವಹಿಸಿದ್ದರು.
ಸಯ್ಯಿದ್ ಹಾಮೀಂ ತಂಙಳ್ ಬಾಳೆಹೊನ್ನೂರು, ಸಯ್ಯಿದ್ ಶಾಫೀ ನಈಮಿ ತಂಙಳ್ ಸಕ್ಲೇಶಪುರ, ಕೆ ಎಂ ಅಬೂಬಕರ್ ಸಿದ್ದೀಖ್, ಇಬ್ರಾಹಿಂ ಖಲೀಲ್ ಮಾಲಿಕಿ, ಅಬ್ದುರ್ರಹ್ಮಾನ್ ರಝ್ವಿ, ಶಾಹುಲ್ ಹಮೀದ್ ಮದೀನಿ ಶಿವಮೊಗ್ಗ, ಹಸೈನಾರ್ ಹಾಸನ ಮತ್ತಿತರರು ಉಪಸ್ಥಿತರಿದ್ದರು. ಎಂಬಿಎಂ ಸಾದಿಕ್ ಸ್ವಾಗತಿಸಿ, ಮನ್ಸೂರ್ ಅಲೀ ತೀರ್ಥಹಳ್ಳಿ ಧನ್ಯವಾದವಿತ್ತರು.