janadhvani

Kannada Online News Paper

ಪಾರ್ಕಿಂಗ್ ಸ್ಥಳದ ಕಾನೂನು ಉಲ್ಲಂಘನೆಗೆ 50 ಸಾವಿರ ದಿರ್ಹಂ ದಂಡ

ಅಬುಧಾಬಿ: ಪಾರ್ಕಿಂಗ್ ಸ್ಥಳದ ಕಾನೂನು ಉಲ್ಲಂಘನೆಗೆ ಅಬುಧಾಬಿ ಪುರಸಭೆಯು 50,000 ದಿರ್ಹಂ ದಂಡ ನಿಗದಿಪಡಿಸಿದೆ. ವಿಶೇಷ ಪಾರ್ಕಿಂಗ್ ಗಾಗಿ ಕೊಡೆ ಆಕಾರದ ಮೇಲ್ಛಾವಣಿ ಇರುವ ಪಾರ್ಕಿಂಗ್ ವಲಯದಲ್ಲಿ ಕಾನೂನು ಕಟ್ಟುನಿಟ್ಟುಗೊಳಿಸಲಾಗಿದೆ. ಇದನ್ನು ಗಟ್ಟಿಮುಟ್ಟಾದ ಮತ್ತು ಹಗುರವಾದ ವಸ್ತುಗಳಿಂದ ನಿರ್ಮಿಸಬೇಕಾಗಿದೆ. ಪುರಸಭೆಯ ಮಾನದಂಡಗಳ ಅನುಸಾರ ಇದನ್ನು ಶುಚಿತ್ವದಿಂದ ಕಾಪಾಡಬೇಕು.

ಪಾರ್ಕಿಂಗ್ ‌ಗೆ ಅನುಮತಿಸುವ ಸ್ಥಳದ ಹೊರಗೆ ಕೊಡೆಯನ್ನು ತರುವಂತಿಲ್ಲ. ರಸ್ತೆ ನಿರ್ಮಾಣ ಮತ್ತು ಇತರ ಸಾರ್ವಜನಿಕ ಉದ್ದೇಶಗಳಿಗಾಗಿ ಇದನ್ನು ಪುರಸಭೆಯ ಒಪ್ಪಿಗೆಯೊಂದಿಗೆ ಸ್ಥಳಾಂತರಿಸ ಬೇಕು. ಅನುಮತಿ ನವೀಕರಿಸಲು ಮತ್ತು ಹೊಸ ಅನುಮತಿಗೆ ಪುರಸಭೆಯ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬೇಕು. ಪಾರ್ಕಿಂಗ್ ಸಂಖ್ಯೆಗಳ  ಪ್ರಕಾರ ಪ್ರತಿಯೊಂದಕ್ಕೆ 2000 ದಿರ್ಹಂ ಪ್ರಥಮ ಪೀಸ್ ಆಗಿ ಪಾವತಿಸಬೇಕು. ನಂತರ ಪ್ರತಿ ವರ್ಷ ನವೀಕರಿಸಲು 500 ದಿರ್ಹಂ ಪಾವತಿಸಬೇಕು.