ಮಂಗಳೂರು: ಜನವರಿ 8 ರಂದು ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ಮಂಗಳೂರು ಪುರಭವವನದಲ್ಲಿ ಆಯೋಜಿಸಲ್ಪಡುವ ದ.ಕ.ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಇಂದು ಮಂಗಳೂರು ಖಾಝಿ ಹೌಸ್ ನಲ್ಲಿ ದ.ಕ.ಜಿಲ್ಲಾ ಸಂಯುಕ್ತ ಖಾಝಿಯವರಾದ ಅಲ್ ಹಾಜ್ ಅಹ್ಮದ್ ಮುಸ್ಲಿಯಾರ್ ತ್ವಾಖ ರವರು ಬಿಡುಗಡೆ ಮಾಡಿದರು.
ಬ್ಯಾರಿ ಮಹಾಸಭಾದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ,ಸೆಂಟ್ರಲ್ ಮುಸ್ಲಿಮ್ ಕಮಿಟಿಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಹಾಜಿ, ಬ್ಯಾರಿ ಮಹಾ ಸಭಾದ ಸಂಚಾಲಕರಾದ ಮೊಹಮ್ಮದ್ ಶಾಕಿರ್ ಹಾಜಿ, ಕಾರ್ಯದರ್ಶಿ ಮೊಹಮ್ಮದ್ ಹನೀಫ್.ಯು, ಹಮೀದ್ ಕಿನ್ಯ, ಮೊಹಮ್ಮದ್ ಮೋನು, ಅಬ್ದುಲ್ ಖಾದರ್ ಇಡ್ಮ, ಇಬ್ರಾಹಿಮ್ ಬಾವ ಬಜಾಲ್, ಇ.ಕೆ.ಹುಸೈನ್, ಅಬ್ದುಲ್ ರಹೀಂ ಕೋಡಿಜಾಲ್, ಝಕರಿಯ ಮಲಾರ್, ಇಕ್ಬಾಲ್ ಮುಲ್ಕಿ ಉಪಸ್ಥಿತರಿದ್ದರು.