ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 6 ಝೋನ್ ಗಳ ಅದೀನದ ಸಾಂತ್ವನ ಇಸಾಬಾ ತಂಡಗಳನ್ನು ಒಗ್ಗೂಡಿಸಿ ಮಾನವತೆಯ ನೆರಳಾಗೋಣ ಎಂಬ ಧ್ಯೇಯ ವಾಕ್ಯ ದೊಂದಿಗೆ ಇಸಾಬಾ ಕ್ಯಾಂಪ್ ಬೆಳ್ಳಾರೆ ದಾರುಲ್ ಹುದಾ ಕ್ಯಾಂಪಸ್ಸಿನಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಸಯ್ಯಿದ್ ಪೂಕೋಯ ಮಿಸ್ಬಾಹಿ ತಂಙಳ್ ದಾರುಲ್ ಹುದಾ ರವರು ಬೆಳ್ಳಾರೆ ದರ್ಗಾ ಝಿಯಾರತ್ ನಾಯಕತ್ವ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ಸ್ವಾಗತ ಸಮಿತಿಯ ಚೇರ್ಮನ್ ಹಸನ್ ಸಖಾಫಿ ಬೆಳ್ಳಾರೆ ರವರು ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ರವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಂಪ್ ಅಸ್ಸಯ್ಯದ್ ಹಾಮಿದ್ ಅಹ್ದಲ್ ತಂಙಳ್ ಮುಹಿಮ್ಮಾತ್ ರವರು ಉದ್ಘಾಟಿಸಿ ಮಾತನಾಡಿದರು.
ಡಾಕ್ಟರ್ ಅಬ್ದುಲ್ ರಶೀದ್ ಝೈನಿ ಕಾಮಿಲ್ ರವರು ಕುಟುಂಬ ಸಂಬಂಧ ಎಂಬ ವಿಷಯವನ್ನು ಮಂಡನೆ ಮಾಡಿದರು. ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗು ರವರು ನಾಯಕತ್ವ ದ ಅನುಸರಣೆ ಎಂಬ ವಿಷಯದ ಕುರಿತು ಮಾತನಾಡಿದರು. ರಾಜ್ಯ ಇಸಾಬಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ಇಸಾಬ ಸದಸ್ಯರು ನಿರ್ವಹಿಸಬೇಕಾದ ಕಾರ್ಯಾಚರಣೆಯ ವಿವರ ನೀಡಿದರು ಜಿಲ್ಲಾ ಇಸಾಬ ಕಾರ್ಯದರ್ಶಿ ಉಸ್ಮಾನ್ ಸೋಕಿಲ ಮತ್ತು ಜಬ್ಬಾರ್ ಕಣ್ಣೂರುರವರು ಅಸೆಂಬ್ಲಿಗೆ ನಾಯಕತ್ವ ನೀಡಿದರು , ರಾಜ್ಯ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು ರವರು ಸಾಂಘಿಕ ತರಬೇತಿಯನ್ನು ನೀಡಿದರು.
ಖ್ಯಾತ ವಾಗ್ಮಿ ಚಿಂತಕರೂ ಆಗಿರುವ ಮರ್ಝೂಕ್ ಸಅದಿ ಪಾಪಿನಶ್ಶೇರಿ ರವರು ಸಮಸ್ತ ಕ್ರಮಿಸಿದ ಹಾದಿ ಎಂಬುದರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಅಶ್ರಫ್ ಸಖಾಫಿ ಮಾಡಾವು,ಹಂಝ ಮದನಿ ಬೆಳ್ತಂಗಡಿ KMJ ಈಸ್ಟ್ ಜಿಲ್ಲಾ ಕೋಶಾದಿಕಾರಿ ಇಸ್ಮಾಯಿಲ್ ಹಾಜಿ ಬೈತಡ್ಕ ,ಸ್ಥಳೀಯ ದಾರುಲ್ ಹುದಾ ಮೆನೇಜರ್ ಖಲೀಲ್ ಹಿಮಮಿ, ದಾರುಲ್ ಹಿಕ್ಮ ಮುದರ್ರೀಸ್ ಹಾಫಿಳ್ ರಂಶೀದ್ ಸಖಾಫಿ , ಹಮೀದ್ ಬೀಜಕೊಚ್ಚಿ, ಹಮೀದ್ ಸುಣ್ಣಮೂಲೆ, ಹನೀಫ್ ಹಾಜಿ ಇಂದ್ರಾಜೆ, ವೈಕೆ ಸುಲೈಮಾನ್ ಹಾಜಿ , ಸಿದ್ದೀಖ್ ಹಿಮಮಿ , ಜಿಲ್ಲಾ ಕಾರ್ಯಕಾರಿ ಸಮಿತಿ ನಾಯಕರು ಮೊದಲಾದವರು ಉಪಸ್ಥಿತರಿದ್ದರು.
ಕ್ಯಾಂಪ್ ನಲ್ಲಿ ಸ್ನೇಹ ಚಹಾ ಕೂಟಕ್ಕೆ ವಿವಿಧ ರೀತಿಯ ತಿಂಡಿ ತಿನಿಸುಗಳು, ಪಾನೀಯ , ರಾತ್ರಿಯ ಭೋಜನದ ವ್ಯವಸ್ಥೆಯನ್ನು SჄS ಸುಳ್ಯ ಝೋನ್ ಸಮಿತಿ ಹಾಗೂ ಸ್ಥಳೀಯ ಸ್ವಾಗತ ಸಮಿತಿ ಮಾಡಿರುತ್ತಾರೆ. ಸ್ವಯಂ ಸೇವಕರಾಗಿ ದಾರುಲ್ ಹುದಾ ವಿದ್ಯಾರ್ಥಿಗಳು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ ಸ್ವಾಗತಿಸಿ ಜಿಲ್ಲಾ ಕೋಶಾಧಿಕಾರಿ ಸಂಶುದ್ದೀನ್ ಝಮ್ ಝಮ್ ವಂದಿಸಿರು.