janadhvani

Kannada Online News Paper

ಕತಾರ್‌ನ ಹೊಸ ಪ್ರವಾಸಿ ತಾಣ ‘ರಾಸ್ ಅಬ್ರೂಖ್’: ಜನವರಿ 18 ರವರೆಗೆ ಪ್ರವೇಶಾನುಮತಿ

ಪ್ರವೇಶ ಶುಲ್ಕ 10 ರಿಯಾಲ್. ರಾತ್ರಿ 8.30ರವರೆಗೆ ಪ್ರವೇಶಕ್ಕೆ ಅವಕಾಶವಿರುತ್ತದೆ.

ದೋಹಾ: ರಾಸ್ ಅಬ್ರೂಖ್ ಖತಾರ್‌ನ ಹೊಸ ಪ್ರವಾಸಿ ತಾಣವಾಗಿದೆ. ವಿಸಿಟ್ ಕತಾರ್ ಅಡಿಯಲ್ಲಿ ಜನವರಿ 18 ರವರೆಗೆ ಪ್ರವೇಶವನ್ನು ಅನುಮತಿಸಲಾಗಿದೆ.

ದೋಹಾದಿಂದ 100 ಕಿ.ಮೀ ಪ್ರಯಾಣಿಸಿದರೆ ರಾಸ್ ಅಬ್ರೂಖ್ ತಲುಪಲಿದೆ. ಅಲ್ಲಿ, ಪ್ರಕೃತಿ, ಪರಂಪರೆ ಮತ್ತು ಮನರಂಜನೆ ಪ್ರವಾಸಿಗರನ್ನು ಕಾಯುತ್ತಿದೆ. ಈ ಪ್ರವಾಸಿ ಕೇಂದ್ರವು ಯುನೆಸ್ಕೋ-ಮಾನ್ಯತೆ ಪಡೆದ ಅಲ್ ರೀಮ್ ಬಯೋಸ್ಫಿಯರ್ ರಿಸರ್ವ್ ಬಳಿ ಇದೆ. ಪ್ರವೇಶ ಶುಲ್ಕ 10 ರಿಯಾಲ್. ರಾತ್ರಿ 8.30ರವರೆಗೆ ಪ್ರವೇಶಕ್ಕೆ ಅವಕಾಶವಿರುತ್ತದೆ.

ಉಚಿತ ಚಟುವಟಿಕೆಗಳಲ್ಲದೆ, ಪಾವತಿಸಿದ ಚಟುವಟಿಕೆಗಳೂ ಇವೆ. ಫಿಲ್ಮ್ ಸಿಟಿ ಮತ್ತು ಡೆಸರ್ಟ್ ಎಸ್ಕೇಪ್ ಪ್ರವೇಶವನ್ನು ಸಾಮಾನ್ಯ ಪ್ರವೇಶ ಶುಲ್ಕದಲ್ಲಿ ಸೇರಿಸಲಾಗಿದೆ. ಆದರೆ ಬಲೂನ್ ಸವಾರಿ, ಒಂಟೆ ಸವಾರಿ, ಕುದುರೆ ಸವಾರಿ ಇತ್ಯಾದಿಗಳಿಗೆ ಪಾವತಿಸಬೇಕಾಗುತ್ತದೆ. ಬಲೂನಿನಲ್ಲಿ ವೈಮಾನಿಕ ವೀಕ್ಷೆಣೆಗೆ 20 ನಿಮಿಷಕ್ಕೆ 50 ರಿಯಾಲ್ ಶುಲ್ಕವಿದೆ.