janadhvani

Kannada Online News Paper

ಸೌದಿ ಅರೇಬಿಯಾದಲ್ಲಿ 174 ಉದ್ಯೋಗಗಳಿಗೆ ಪರೀಕ್ಷೆ ಕಡ್ಡಾಯ

ಆಯಾ ದೇಶಗಳಲ್ಲಿ ಪರೀಕ್ಷಾ ಸೌಲಭ್ಯವನ್ನು ಒದಗಿಸಲಾಗುವುದು.

ರಿಯಾದ್: ಸೌದಿಯಲ್ಲಿ ಹೆಚ್ಚಿನ ಉದ್ಯೋಗಗಳಿಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಭಾರತದಿಂದ ಸಹಿತವಿರುವ ವಿದೇಶೀ ಕಾರ್ಮಿಕರಿಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ 174 ಉದ್ಯೋಗಗಳಿಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

ಕೃಷಿ ಸಲಕರಣೆ ಮೆಕ್ಯಾನಿಕ್, ಆಟೋ ಮೆಕ್ಯಾನಿಕ್, ಕಮ್ಮಾರ, ಬಿಲ್ಡರ್, ಬಸ್ ಮೆಕ್ಯಾನಿಕ್, ಬಾರ್ಬರ್, ಕಾರ್ ಡ್ರೈವರ್, ಕಾರ್ ಎಲೆಕ್ಟ್ರಿಷಿಯನ್, ಕಾರ್ಪೆಂಟರ್,ಚೆಫ್, ಮೇಸನ್, ಕುಶಲಕರ್ಮಿ, ಕ್ರಷರ್ ಆಪರೇಟರ್ ಮುಂತಾದ 174 ಉದ್ಯೋಗಗಳಿಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.ಆಯಾ ದೇಶಗಳಲ್ಲಿ ಪರೀಕ್ಷಾ ಸೌಲಭ್ಯವನ್ನು ಒದಗಿಸಲಾಗುವುದು.

ಏತನ್ಮಧ್ಯೆ, ಹೌಸ್ ಡ್ರೈವರ್ ಮತ್ತು ಲೇಬರ್ ಪ್ರೊಫಷನಲ್ ಗಳು ಸೌದಿಯಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಆಟೋ ಎಲೆಕ್ಟ್ರಿಷಿಯನ್, ಎಲೆಕ್ಟ್ರಿಕಲ್ ಡಿವೈಸ್ ಮೈಂಟೆನೆನ್ಸ್ ಟೆಕ್ನಿಷಿಯನ್, ಆಟೋಮೆಕಾನಿಕ್, ಎಚ್‌ವಿಎಸಿ, ಆಟೋಮೋಟಿವ್ ಮೆಕ್ಯಾನಿಕ್, ಪ್ಲಂಬಿಂಗ್, ವೆಲ್ಡಿಂಗ್ ಬಿಲ್ಡಿಂಗ್ ಎಲೆಕ್ಟ್ರಿಷಿಯನ್ , ಪೈಪ್ ಇನ್‌ಸ್ಟಾಲರ್, ಎಲೆಕ್ಟ್ರಿಷಿಯನ್, ಕಮ್ಮಾರ ಮುಂತಾದ ಹುದ್ದೆಗಳಿಗೆ ಪರೀಕ್ಷಾ ಸೌಲಭ್ಯ ಭಾರತದಲ್ಲಿ ಲಭ್ಯವಿದೆ.

error: Content is protected !! Not allowed copy content from janadhvani.com