ಎಸ್‌ವೈಎಸ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿಯಿಂದ ಘಟಕಗಳನ್ನು ಸಕ್ರಿಯಗೊಳಿಸುವುದರ ಭಾಗವಾಗಿ ‘ಸರ್ಕಲ್ ರಿಹ್‌ಲ’ ಎಂಬ ಹೆಸರಿನಲ್ಲಿ ಜಿಲ್ಲಾ ನಾಯಕರಿಂದ ಜಿಲ್ಲಾ ವ್ಯಾಪ್ತಿಯ ಸರ್ಕಲ್ ಗಳಿಗಿರುವ ಮೊದಲ ಹಂತದ ಪಯಣವು ಸಂಪೂರ್ಣವಾಗಿ ಯಶಸ್ವಿಯಾಗಿದೆ.
ಎರಡನೇ ಹಂತದ ಪಯಣವು ಎಸ್.ವೈ.ಎಸ್ ಜಿಲ್ಲಾಧ್ಯಕ್ಷರಾದ ವಿ.ಯು.ಇಸ್ಹಾಖ್ ಝುಹ್ರಿರವರ ನೇತೃತ್ವದಲ್ಲಿ ಡಿಸೆಂಬರ್ 8 ರಂದು ಮಂಗಳೂರು, ಉಳ್ಳಾಲ, ತಲಪಾಡಿ, ಕೋಟೆಕಾರ್, ಪರಂಗಿಪೇಟೆ, ಕಣ್ಣೂರು, ಮುಡಬಿದ್ರೆ, ಬಜ್ಪೆ, ಬೆಳ್ಮ, ನಾಟೆಕಲ್ ತೌಡುಗೋಳಿ, ಮೋಂಟುಗೋಳಿ, ಸುರಿಬೈಲ್, ಮಂಚಿ, ಸಾಲೆತ್ತೂರು, ಬೋಳಂತೂರು ಕಾವೂರು ಎಂಬೀ ಸರ್ಕಲ್ ಗಳಲ್ಲಿ ನಡೆಯಲಿದೆ ಎಂದು ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.