ಕಾರ್ಕಳ : ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ SMA ಕಾರ್ಕಳ ರೀಜನಲ್ ಇದರ ವಾರ್ಷಿಕ ಮಹಾಸಭೆಯು ನೂರುಲ್ ಹುದ ಜುಮಾ ಮಸೀದಿಯ ಮದ್ರಸ ಹಾಲಿನಲ್ಲಿ ಜನಾಬ್ ಸುಲೈಮಾನ್ ಹಾಜಿ ಯವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಹುಲ್ ಹಮೀದ್ ರಶೀದ್ ಸಹದಿ ಖಿರಾಅತ್ ಪಠಿಸಿದ ನಂತರ ಎಸ್ ಎಂ ಎ ರೀಜನಲ್ ಪ್ರದಾನ ಕಾರ್ಯದರ್ಶಿ ಹಾಗೂ ಸಾಣೂರು ಖತೀಬರಾದ ಖಲಂದರ್ ಸಅದಿ ಸಾಣೂರು ಬಂದ ಅತಿಥಿಗಳಿಗೆ ಸ್ವಾಗತ ಕೋರಿದರು.
ಎಸ್ ಜೆ ಯು ಕಾರ್ಕಳ ಮೂಡಬಿದ್ರೆ ಜಂಟಿ ಅಧ್ಯಕ್ಷರಾದ ಸುಲೈಮಾನ್ ಸಅದಿ ಅಲ್ ಅಫ್ಲಲಿ ಉದ್ಘಾಟಿಸಿ ಮಾತನಾಡಿದರು. ನಂತರ ಸಂಘಟನಾ ಕಾರ್ಯದರ್ಶಿ ಮುನೀಬ್ ಬೊಲ್ಲೊಟ್ಟು ವರದಿ ವಾಚಿಸಿದರು. ಜಿಲ್ಲಾ ಸಮಿತಿ ಯ ಉಸ್ತುವಾರಿ ಕಲ್ಕಟ್ಟ ರಝ್ವಿ ಎಸ್ ಎಂ ಎ ಬಗ್ಗೆ ಮಾಹಿತಿ ನೀಡಿದರು.
ಬಳಿಕ, ಹಲವು ಚರ್ಚಾ ವಿಷಯಗಳು ಸಮರ್ಪಕವಾಗಿ ಚರ್ಚಿಸಿ ಹಳೆಯ ಕಮೀಟಿ ಬರ್ಕಸ್ ಮಾಡಿ ಹೊಸ ಕಮೀಟಿ ಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.
ನಿರ್ದೇಶಕ ಸುಲೈಮಾನ್ ಹಾಜಿ ಬಜಗೋಳಿ
ಅಧ್ಯಕ್ಷರಾಗಿ ಲತೀಪಾಕ ಸಾಣೂರು
ಪ್ರದಾನ ಕಾರ್ಯದರ್ಶಿ ಯಾಗಿ ಮುಹಮ್ಮದ್ ಶರೀಫ್ ಮದನಿ ಬೊಲ್ಲೊಟ್ಟು
ಕೋಶಾಧಿಕಾರಿಯಾಗಿ ಖಲಂದರ್ ಸಅದಿ ಸಾಣೂರು, ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಹುಮೈದಿ ಬಜಗೋಳಿ, ಪುತ್ತಾಕ ಬಜಗೋಳಿ ಹಾಗೂ ಸಿದ್ದೀಕ್ ಹೊಸ್ಮರ್ ಜೊತೆ ಕಾರ್ಯದರ್ಶಿಗಳಾಗಿ ಮುನೀಬ್ ಬೊಲ್ಲೂಟ್ಟು, NC ರಹೀಮ್ ಹೊಸ್ಮರ್ ಹಾಗೂ ಸ್ವಾದಿಕ್ ಬಜಗೋಳಿ. ಸದಸ್ಯರುಗಳಾಗಿ ಜಮಾಲ್ ಹೊಸ್ಮಾರ್, ಖಾಸಿಂ ಹೊಸ್ಮರ್, ಸುಲೈಮಾನ್ ಸಅದಿ ಹೊಸ್ಮಾರ್ ಹಾಗೂ ಸುಲೈಮಾನ್ ಹಾಜಿ ಬಜಗೋಳಿ ರವರನ್ನು ಆಯ್ಕೆ ಮಾಡಲಾಯಿತು.
ಇದೆ ವೇಳೆ ಸಭೆಗೆ ವೀಕ್ಷಕರಾಗಿ ಆಗಮಿಸಿದ ಕಲ್ಕಟ್ಟ ರಝ್ವಿ ಉಸ್ತಾದ್ ರನ್ನು ನೂತನ ಸಮಿತಿಯಿಂದ ಸನ್ಮಾನಿಸಲಾಯಿತು.