janadhvani

Kannada Online News Paper

ಯುಎಇ : ಬೇಸಿಗೆ ತಾಪ ಹೆಚ್ಚಳ- ಎಚ್ಚರಿಕೆ ವಹಿಸುವಂತೆ ಆರೋಗ್ಯ ತಜ್ಞರು

ಅಬುಧಾಬಿ: ಹೊರಗಡೆ ಕೆಲಸ ಮಾಡುವ ಕಾರ್ಮಿಕರು ಬೇಸಿಗೆಯ ಶಾಖವನ್ನು ಗಮನಿಸುವಂತೆ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಮುಂಬರುವ ದಿನಗಳಲ್ಲಿ ತಾಪಮಾನವು ಏರಲಿದೆ ಮತ್ತು ಸೆಖೆ ಮತ್ತು ತೇವಾಂಶ ವಾತಾವರಣವು ಒಂದು ವಾರದವರೆಗೆ ಇರಲಿದೆ ಎಂದು ವರದಿಯಾಗಿದೆ.

ಯುಎಇಯಲ್ಲಿನ ಕೆಲವು ಎಮಿರೇಟ್ಸ್ ಗಳಲ್ಲಿ 44 ಡಿಗ್ರಿ ತಾಪಮಾನ ದಾಖಲಾಗಿದೆ. ಮುಂಬರುವ ದಿನಗಳಲ್ಲಿ ಇದು 49 ದಾಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದುಬೈನಲ್ಲಿ ತಾಪಮಾನ 42 ಡಿಗ್ರಿ, ಶಾರ್ಜಾದಲ್ಲಿ 44 ಡಿಗ್ರಿ ಮತ್ತು ಅಬುಧಾಬಿಯಲ್ಲಿ 46 ಡಿಗ್ರಿ ಸೆಲ್ಸಿಯಸ್ ಇರಲಿದೆ. ಈ ದಿನಗಳಲ್ಲಿ ವಾತಾವರಣದ ತೇವಾಂಶವು ಸುಮಾರು 80% ನಷ್ಟು ಹೆಚ್ಚಾಗಲಿದೆ.

ಮಧ್ಯಾಹ್ನ 12 ರಿಂದ 3 ರವರೆಗೆ ಹೆಚ್ಚಿನ ತಾಪ ಅನುಭವಕ್ಕೆ ಬರಲಿದೆ. ಆದ್ದರಿಂದ, ಅಧಿಕಾರಿಗಳು ಈ ಸಮಯ ಹೊರಗಡೆ ಹೋಗದಂತೆ ಸಲಹೆ ನೀಡಿದ್ದಾರೆ. ತೆರೆದ ಸ್ಥಳಗಳಲ್ಲಿ ಕೆಲಸ ಮಾಡುವವರು ಬಿಸಿಲು ಮತ್ತು ಧೂಳು ಗಾಳಿಯಿಂದ ರಕ್ಷಣೆ ಪಡೆಯುವಂತೆ ಆರೋಗ್ಯ ತಜ್ಞರು ಸೂಚಿಸಿದ್ದಾರೆ. ಆರೋಗ್ಯ ಸಮಸ್ಯೆಗಳು ಹೆಚ್ಚಾದ ವರದಿಯ ಮೇಲೆ ಈ ಎಚ್ಚರಿಕೆಯನ್ನು ನೀಡಲಾಗಿದೆ.

ಸೂರ್ಯಾಘಾತ ತಗುಲದಂತಹ ಬಟ್ಟೆಗಳನ್ನು ಧರಿಸಬೇಕು, ಆಹಾರದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಬೇಕು, ನಿಯಮಿತವಾದ ನೀರು ಕುಡಿಯಬೇಕು ಎಂದು ಆರೋಗ್ಯ ವಲಯದಲ್ಲಿನ ತಜ್ಞರು ಹೇಳಿದ್ದಾರೆ.ಬೆಂಕಿ ತಗುಲಬಹುದಾದ ಅಪಾಯಕಾರಿ ವಸ್ತುಗಳನ್ನು ವಾಹನದ ಒಳಗಿಟ್ಟು ಬಿಸಿಲಲ್ಲಿ ನಿಲ್ಲಿಸುವುದು ಅಪಾಯಕಾರಿ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

error: Content is protected !! Not allowed copy content from janadhvani.com