janadhvani

Kannada Online News Paper

ಸೌದಿ -ಯುಎಇ ಸಮನ್ವಯ ಸಮಿತಿಯ ಐತಿಹಾಸಿಕ ಸಭೆ

ಅಬುಧಾಬಿ: ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಮನ್ವಯ ಸಮಿತಿಯ ಐತಿಹಾಸಿಕ ಸಭೆಯು ಜಿದ್ದಾದಲ್ಲಿ ಜರುಗಿತು.

ಅಬುಧಾಬಿ ಆಡಳಿತಾಧಿಕಾರಿ ಯುಎಇ ಸಶಸ್ತ್ರ ಉಪ ಸೇನಾಧಿಕಾರಿ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್, ಸೌದಿ ಯುವರಾಜ, ಉಪಪ್ರಧಾನಿ, ರಕ್ಷಣಾ ಮಂತ್ರಿ, ಸೌದಿ ಕೌನ್ಸಿಲ್ ಆಫ್ ಎಕಾನಾಮಿಕ್ ಆ್ಯಂಡ್ ಡೆವಲಪ್ಮೆಂಟ್ ಅಫೇರ್ಸ್ ನ ಅಧ್ಯಕ್ಷರಾದ ಮುಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಆಲ್ ಸ‌ಊದ್ ಅವರ ನಾಯಕತ್ವದಲ್ಲಿ ಈ ಪ್ರಥಮ ಸಭೆಯು ಜರುಗಿತು.

ಎರಡು ದೇಶಗಳ ನಡುವೆ ಆಯೋಜಿಸಲಾದ ಜಂಟಿ ಯೋಜನೆಗಳನ್ನು ಮತ್ತು  ಕಾರ್ಯಕ್ರಮಗಳನ್ನು ತ್ವರಿತಗತಿಯಲ್ಲಿ ಜಂಟಿ ಸಹಯೋಗದಲ್ಲಿ ಅನುಷ್ಠಾನಗೊಳಿಸಲು ಈ ಸಭೆಯನ್ನು ಕರೆಯಲಾಗಿದೆ.

ಆರ್ಥಿಕ, ಮಾನವ ಅಭಿವೃದ್ಧಿ, ರಾಜಕೀಯ, ಭದ್ರತೆ ಮತ್ತು ಸೇನಾ ಏಕೀಕರಣ, ಜಾಗತಿಕ ಮಟ್ಟದಲ್ಲಿ  ಎರಡು ದೇಶಗಳ ಜನರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ  ಗುರಿಯನ್ನು ಸಮಿತಿ  ಹೊಂದಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಧ್ಯಕ್ಷ ಶೈಖ್ ಖಲೀಫಾ ಬಿನ್ ಝಾಯಿದ್ ಅಲ್ ನಹ್ಯಾನ್ ಹೇಳಿದರು.

ಸೌದಿ ಅರೇಬಿಯಾದ ಸಲ್ಮಾನ್ ಬಿನ್ ಅಬ್ದುಲ್ ಅಝೀ ಝ್  ಆಲ್ ಸ‌ಊದ್ ರ ನಿರ್ದೇಶನ ಪ್ರಕಾರ ಮೇ 2016 ರಲ್ಲಿ ದ್ವಿಪಕ್ಷೀಯ ಒಪ್ಪಂದ ಅನುಷ್ಠಾನಕ್ಕೆ ಬಂದಿದ್ದವು.ಜಾಗತಿಕ ದೇಶಗಳ ನಡುವಿನ ಸಹಕಾರಕ್ಕೆ ಕೌನ್ಸಿಲ್ ಉತ್ತಮ ಮಾದರಿಯಾಗಿದೆ.ಮಾತ್ರವಲ್ಲದೆ GCC ದೇಶಗಳ ಮಧ್ಯೆ ಜಂಟಿ ಕಾರ್ಯಚಟುವಟಿಕೆಗಳನ್ನು ಕೌನ್ಸಿಲ್ ಬಲಪಡಿಸಲಿದೆ. ಹೂಡಿಕೆ, ಬೆಳವಣಿಗೆ, ಪರಿಷ್ಕರಣೆ, ಶೈಕ್ಷಣಿಕ ಮತ್ತು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ದ್ವಿಪಕ್ಷೀಯ ಹೂಡಿಕೆಯನ್ನು ಬಲಪಡಿಸಲು  ಪ್ರಯತ್ನಿಸಲಾಗುತ್ತದೆ ಎಂದು ದ್ವಿಪಕ್ಷೀಯ ನಾಯಕರು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಶೈಖ್ ತಹ್ನೂನ್ ಬಿನ್ ಝಾಯಿದ್ ಅಲ್ ನಹ್ಯಾನ್, ಡೆಪ್ಯುಟಿ ಪ್ರಧಾನಮಂತ್ರಿ ಶೈಖ್ ಮನ್ಸೂರ್ ಬಿನ್ ಝಾಯಿದ್ ಅಲ್ ನಹ್ಯಾನ್, ಫಾರಿನ್ ಅಫೇರ್ಸ್, ಅಂತರರಾಷ್ಟ್ರೀಯ ಸಹಕಾರ ಸಚಿವ ಶೈಖ್ ಅಬ್ದುಲ್ಲಾ ಬಿನ್ ಝಾಯಿದ್ಅಲ್ ನಹ್ಯಾನ್, ಶೈಖ್ ಝಾಯಿದ್ ಬಿನ್ ಹಮ್ದಾನ್ ಬಿನ್ ಝಾಯಿದ್ ಅಲ್ ನಹ್ಯಾನ್, ಶೈಖ್ ಶಖ್ಬೂತ್ ಬಿನ್ ನಹ್ಯಾನ್ ಅಲ್ ನಹ್ಯಾನ್, ಸೌದಿ ಅರೇಬಿಯಾದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಯಭಾರಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com