ರಿಯಾದ್: ಧಾರ್ಮಿಕ ಪಂಡಿತ ಆಯತ್ ಅಲ್ ಖರ್ನಿಯ ಖುರ್ ಆನ್ ವ್ಯಾಖ್ಯಾನ ಗ್ರಂಥವನ್ನು (ಅತ್ತಫ್ಸೀರುಲ್ ಮುಯಸ್ಸರ್) ಸೌದಿಯಲ್ಲಿ ನಿಷೇಧಿಸಲಾಗಿದೆ.
ಸೌದಿಯ ಎಲ್ಲಾ ಮಸೀದಿಗಳಿಂದ ಗ್ರಂಥವನ್ನು ಹಿಂತೆಗೆದುಕೊಳ್ಳುವಂತೆ ಸೌದಿಯ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ನಿರ್ದೇಶಿಸಿದೆ.ಎಲ್ಲಾ ಮಸೀದಿಗಳಿಗೂ ಈ ಕುರಿತ ಸುತ್ತೋಲೆಗಳನ್ನು ಕಳುಹಿಸಲಾಗಿದೆ.ಹೊಸ ಪ್ರತಿಗಳ ವಿತರಣೆಯನ್ನೂ ನಿಷೇಧಿಸಲಾಗಿದೆ.
ಆಯತ್ ಅಲ್ ಖರ್ನಿಯ ಖುರ್ ಆನ್ ವ್ಯಾಖ್ಯಾನ ಅತ್ತಫ್ಸೀರುಲ್ ಮುಯಸ್ಸರ್ ನಲ್ಲಿ ಕೆಲವು ಲೋಪದೋಷಗಳು ಕಂಡು ಬಂದ ಹಿನ್ನಲೆಯಲ್ಲಿ ನಿಷೇಧ ಹೇರಲಾಗಿದೆ.
ದೇಶದಾದ್ಯಂತ ಎಲ್ಲಾ ಮಸೀದಿಗಳಲ್ಲೂ,ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಕಾರ್ಯಾಚರಿಸುವ ಗೈಡನ್ಸ್ ಸೆಂಟರ್ (ಮಾರ್ಗದರ್ಶನ ಕೇಂದ್ರ) ಗಳಲ್ಲೂ ಗ್ರಂಥಕ್ಕೆ ನಿಷೇಧವಿದೆ.