janadhvani

Kannada Online News Paper

ಹಾಜಿ ಬಿ.ಎಮ್ ಮಮ್ತಾಜ್ ಅಲಿ ಅವರ ಮರಣ ಸಮುದಾಯಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟ

ಹಾಜಿ ಜಿ.ಎಂ. ಹಸನ್ ಕುಂಙಿ ಗಂಗರಮಜಲ್, (ವ್ಯವಸ್ಥಾಪಕರು, ಮಸ್ಜಿದು ತಕ್ವಾ, ತಕ್ವಾ ಅಕಾಡೆಮಿ ಆಫ್ ಇಸ್ಲಾಮಿಕ್ ಎಜುಕೇಶನ್ ಪಂಪ್ ವೆಲ್)

ಮಂಗಳೂರು. ಹಾಜಿ ಬಿ.ಎಮ್ ಮಮ್ತಾಜ್ ಅಲಿ ಅವರು ಸಮಾಜಕ್ಕೆ ಮತ್ತು ಸಮುದಾಯಕ್ಕೆ ಸಮರ್ಪಿಸಿದ ಸೇವೆ ಅನನ್ಯ. ಹಾಜಿ ಬಿ.ಎಮ್ ಮಮ್ತಾಜ್ ಅವರ ಸ್ಥಾನಕ್ಕೆ ಇನ್ನೊಂದು ಮಮ್ತಾಜ್ ಅಲಿ ಅವರು ಹುಟ್ಟಿ ಬರಲು ಸಾಧ್ಯವೇ ಇಲ್ಲ.

ಇವರು ನನ್ನ 26 ವರ್ಷದ ಪರಿಚಿತರು ಸಣ್ಣಪ್ರಾಯದಲ್ಲೇ ಸಮಾಜಕ್ಕೆ ಮತ್ತು ಸಮುದಾಯದ ಏಳಿಗೆಗಾಗಿ ಧುಮುಕಿ ಉನ್ನತ ಸ್ಥಾನಮಾನವನ್ನು ಅಲಂಕರಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಸಮುದಾಯದ ಗೌರವದ ವ್ಯಕ್ತಿಯಾಗಿ ಶೈಕ್ಷಣಿಕ,ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಗ್ರಗಣ್ಯ ನೇತಾರರಾಗಿ ಹಸಿದವರಿಗೆ ಮತ್ತು ರೋಗಿಗಳಿಗೆ ತಮ್ಮ ನಗು ಮುಖದೊಂದಿಗೆ ಸಹಾಯ ಹಸ್ತ ನೀಡಿ ನೆರವಾದ ನಿಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಾಗದ ದುಃಖ ಮರೆಯಲು ಸಾಧ್ಯವೇ ಇಲ್ಲ.

ನೀವು ಉನ್ನತ ಸಂಸ್ಥೆಯ ಗೌರವಾನ್ವಿತ ಹುದ್ದೆಯನ್ನು ಅಲಂಕರಿಸಿ ಅದರಲ್ಲೂ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಮಸ್ಜಿದ್ ತಕ್ವಾ ಪಂಪ್ ವೆಲ್ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿಯಾಗಿ ನೀಡಿದ ಸೇವೆಯನ್ನು ನೀವು ಮಸೀದಿಗೆ ಆಗಮಿಸುತ್ತಿದ್ದ ಗಾಂಭೀರ್ಯತೆಯನ್ನು ನೆನೆಸಿ ನಾವೆಲ್ಲರೂ ಕಣ್ಣೀರ ದುಃಖದಲ್ಲಿ ಮುಳುಗಿದ್ದೇವೆ. ಸಮುದಾಯಕ್ಕೆ ಮತ್ತು ಸಮಾಜಕ್ಕೆ ನಿಮ್ಮಿಂದ ಸಲ್ಲಬೇಕಾದ ಹತ್ತು ಹಲವು ಕಾರ್ಯಗಳು ಇನ್ನೂ ಬಾಕಿ ಇದೆ ಆದರೆ ವಿಧಿಯ ಆಟ ಬೇರೆಯಾಗಿತ್ತು. ಬಡವರ ಮತ್ತು ಶೋಷಿತರ ಪಾಲಿಗೆ ನೀವು ಆಧಾರ ಸ್ತಂಭವಾಗಿದ್ದೀರಿ.

ನಿಮಗೆ ಮಘ್ಫಿರತ್ ಮತ್ತು ಮರಹಮತ್ ನೀಡಿ ಅಲ್ಲಾಹು ಅನುಗ್ರಹಿಸಲಿ. ನಿಮ್ಮನ್ನು ಅಗಲಿದ ದುಃಖವನ್ನು ಸಹಿಸುವ ಶಕ್ತಿ ನಿಮ್ಮ ಕುಟುಂಬದವರಿಗೂ ಮತ್ತು ನಮಗೆಲ್ಲರಿಗೂ ನೀಡಲಿ. ಆಮೀನ್