ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ದುಬೈ ನಾರ್ತ್ ಝೋನ್ ಆಶ್ರಯದಲ್ಲಿ “ಜಗತ್ತಿಗೆ ಕಮಾನವಜಾತಿಗೆ ಮಾರ್ಗದರ್ಶಕನಾದ ಪ್ರವಾದಿ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಎಂಬ ಶೀರ್ಷಿಕೆಯಡಿಯಲ್ಲಿ ಕೆಸಿಎಫ್ ದುಬೈ ನಾರ್ತ್ ಝೋನ್ ಗ್ರಾಂಡ್ ಮೀಲಾದ್ ಸಮಾವೇಶ 2024 ಸೆಪ್ಟೆಂಬರ್ 15 ರಂದು, ದುಬೈ ಅಲ್ ನಹ್ದಾದಲ್ಲಿ ಇರುವ ಕ್ರೆಸೆಂಟ್ ಇಂಗ್ಲಿಷ್ ಶಾಲೆಯಲ್ಲಿ ನಡೆಯಿತು .
ಮೀಲಾದ್ ಸ್ವಾಗತ ಸಮಿತಿ ಛೇರ್ಮನ್ ಖಾದರ್ ಸಾಲೆತೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯಿದ್ ಮಸ್ಊದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಕೂರತ್ ದುಆ ನೇತೃತ್ವವನ್ನು ವಹಿಸಿ, ಖ್ಯಾತ ವಾಗ್ಮಿ ಹಂಝ ಮಿಸ್ಬಾಹಿ ಓಟಪದವು ಮುಖ್ಯಭಾಷಣ ಮಾಡಿದರು.
ಕರ್ನಾಟಕ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಕೆಸಿಎಫ್ ಯುಎಇ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಕೆದುಂಬಾಡಿ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸಂಘಟನಾ ಅಧ್ಯಕ್ಷರಾದ ಜಲೀಲ್ ನಿಝಾಮಿ ಎಮ್ಮೆಮಾಡು, ಸಮಾರಂಭವನ್ನು ಶುಭಹಾರೈಸಿ ಮಾತನಾಡಿದರು. ಸ್ವಾಗತ ಸಮಿತಿ ಕನ್ವೀನರ್ ಅಬ್ದುಲ್ ರಹೀಂ ಕೋಡಿ ಸ್ವಾಗತವನ್ನು ಕೋರಿದರು.
ಸಯ್ಯದ್ ತ್ವಾಹಾ ಬಾಫಖಿ ತಂಙಳ್, ಸಯ್ಯದ್ ತ್ವಾಹಾ ಜಮಲುಲ್ಲೈಲಿ ತಂಙಳ್, ಇಬ್ರಾಹಿಂ ಮುಸ್ಲಿಯಾರ್, ಖಾನ್ ಝಮಾನ್ (ಇಬ್ರಾಹಿಮಿ ಗ್ರೂಪ್), ಫಾಯಿಝ್ ಅಹ್ಮದ್, ಮುಹಮ್ಮದ್ ಅಶ್ರಫ್, ಇಮ್ರಾನ್ ಮುಹಮ್ಮದ್, ಅಬೂಸ್ವಾಲಿಹ್ (ನಫೀಸ್ ಗ್ರೂಪ್), ನವೀದ್ ಮೂಡಬಿದ್ರೆ, ಇಕ್ಬಾಲ್ ಸಿದ್ದಕಟ್ಟೆ, ಶೈಖ್ ಮಕ್ಧೂಮ್ ಸೇರಿದಂತೆ ದುಬೈಯಲ್ಲಿರುವ ಪ್ರಮುಖ ಉದ್ಯಮಿಗಳು ಭಾಗವಹಿಸಲಿದ್ದರು.
ಕೆಸಿಎಫ್ ಯುಎಇ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರ, ಕೆಸಿಎಫ್ ದುಬೈ ನಾರ್ತ್ಶ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ, ಅಶ್ರಫ್ ಹಾಜಿ ಅಡ್ಯಾರ್, ಜನಾಬ್ ರಶೀದ್ ಕೈಕಂಬ ಸೇರಿದಂತೆ ಕೆಸಿಎಫ್ ನ ಅಂತರರಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ವಿವಿಧ ಝೋನ್ ಪಧಾಧಿಕಾರಿಗಳು, ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು
ಖ್ಯಾತ ಗಾಯಕರಾದ ಉಮರುಲ್ ಫಾರೂಕ್ ಶ್ರೀಕಂಠಾಪುರಂ, ಸಲೀಂ ಜೌಹರಿ ಕೊಲ್ಲಂ ಮತ್ತು ಅಮೀನ್ ಸಅದಿ ಪೇರಾಲ್, ಶರೀಫ್ ಶಿಹಾನ್ ಉಳ್ಳಾಲ ನೇತೃತ್ವದಲ್ಲಿ ಪ್ರವಾದಿ ಕೀರ್ತನೆಗಳ ಮಧುರ ಕಾವ್ಯ ಬುರ್ದಾ ಮತ್ತು ನಾತ್ ಆಲಾಪನೆಯು ನಡೆಯಿತು.
ಸಮಾರಂಭದ ಯಶಸ್ಸಿಗೆ ಶ್ರಮಿಸಿದ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿದ ಎಲ್ಲರಿಗೂ ಸ್ವಾಗತ ಸಮಿತಿಯ
ಜನರಲ್ ಕನ್ವೀನರ್ ಅಬ್ದುಲ್ ರಶೀದ್ ಕೈಕಂಬ ರವರು ಕೃತಜ್ಞತೆ ಸಲ್ಲಿಸಿದರು.