janadhvani

Kannada Online News Paper

ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ವತಿಯಿಂದ ತಅಝಿಯತ್

ಆಗಸ್ಟ್ 25 ರಂದು ನಮ್ಮನ್ನಗಲಿದ ಮುಹಮ್ಮದ್ ಹನೀಫ್ ರವರ ಮನೆಗೆ ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ನಿಯೋಗ ಭೇಟಿ ನೀಡಿ ಸಂತಾಪ ಸೂಚಿಸಿ ದುಆ ಮಾಡಿದರು. ಮ್ರತರು ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಸದಸ್ಯರಾದ ಸಾಜಿದ್ ಸಖಾಫಿ ದೇರಳಕಟ್ಟೆ ಇವರ ತಂದೆಯಾಗಿದ್ದರು.
ಸುನ್ನೀ ಸಂಘಟನೆಗಳಲ್ಲಿ ಸಕ್ರಿಯ ಸೇವೆ ನೀಡಿ ಇತ್ತೀಚೆಗೆ ನಮ್ಮಿಂದ ಅಗಲಿದ ಹಸನ್ ಹಾಜಿ ಸಾಂಬಾರ್ ತೋಟ ಇವರ ಮನೆಗೂ ಸಖಾಫಿಗಳ ನಿಯೋಗ ಭೇಟಿ ನೀಡಿ ಸಂತಾಪ ಸೂಚಿಸಿ ದುಆ ಮಾಡಿದರು.

ಸಖಾಫಿ ಕೌನ್ಸಿಲ್ ರಾಜ್ಯಾಧ್ಯಕ್ಷರಾದ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯಃ ಉಸ್ತಾದರ ನೇತೃತ್ವ ದಲ್ಲಿ ಭೇಟಿ ನೀಡಲಾಯಿತು.

ಈ ಸಂದರ್ಭ ರಾಜ್ಯ ನಾಯಕ ಪರಪ್ಪು ಅಬ್ದುಲ್ ಅಝೀಝ್ ಸಖಾಫಿ, ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಫಾರೂಕ್ ಸಖಾಫಿ ಮದನಿನಗರ, ಉಪಾಧ್ಯಕ್ಷರಾದ ಅಬ್ದುಲ್ ಕರೀಂ ಸಖಾಫಿ ದೇರಳಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಮುತ್ತಲಿಬ್ ಸಖಾಫಿ ಬೆಳ್ಮ, ಸಿದ್ದೀಕ್ ಸಖಾಫಿ ತಿಬ್ಲೆಪದವು ಉಪಸ್ಥಿತರಿದ್ದರು.