ಮಂಗಳೂರು: ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ 55 ನೇ ವಾರ್ಷಿಕ ಮಹಾ ಸಮ್ಮೇಳನವು ನವೆಂಬರ್ 22,23,24 ರಂದು ನಡೆಯಲಿದ್ದು ಇದರ ಘೋಷಣಾ ಸಮಾವೇಶ ಹಾಗೂ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ಸಂಸ್ಮರಣಾ ಕಾರ್ಯ ಕ್ರಮ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಪಂಪ್ ವೆಲ್ ನಲ್ಲಿರುವ ಗೋಲ್ಡ್ ಪಾಲಸ್ ಒನಿಕ್ಸ್ ಆಡಿಟೋರಿಯಂ ನಲ್ಲಿ ನಡೆ ಯಿತು.
ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹುಸೈನ್ ಸಅದಿ ಕೆ ಸಿ ರೋಡು ರವರ ಅಧ್ಯಕ್ಷತೆಯಲ್ಲಿ ಸಅದಿಯ್ಯ
ಸಮ್ಮೇಳನದ ಕೇಂದ್ರ ಸ್ವಾಗತ ಸಮಿತಿಯ ಅಧ್ಯಕ್ಷ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಕಾರ್ಯ ಕ್ರಮ ಉದ್ಘಾಟಿಸಿದರು.
ಸಯ್ಯಿದ್ ತ್ವಾಹಾ ಬಾಫಕೀ ತಂಙಳ್
ಸಮ್ಮೇಳನ ದಿನಾಂಕವನ್ನು ಘೋಷಿಸಿದರು.
ಸಮಾವೇಶದಲ್ಲಿ ಜಾಮಿಅ ಸಅದಿಯ್ಯ ಅರಬಿಕ್ ವಿಭಾಗದ ಮುಖ್ಯಸ್ಥ ಶೈಖುನಾ ಪಿ ಎ ಉಬೈದುಲ್ಲಾಹಿ ನದವಿ ಸಅದಿ
ಸಅದಿಯ್ಯ ಕೋಶಾಧಿಕಾರಿ ಕಲ್ಲಟ್ರ ಮಾಹಿನ್ ಹಾಜಿ, ಸಅದಿಯ್ಯ ವೈಸ್ ಪ್ರಾಂಶುಪಾಲ ಮುಹಮ್ಮದ್ ಅಲಿ ಸಖಾಫಿ ತೃಕರಿಪುರ, ಕರ್ನಾಟಕ ಮುಸ್ಲಿಂ ಜಮಾತ್ ಪ್ರಧಾನ ಕಾರ್ಯದರ್ಶಿ ಅಬೂ ಸುಫ್ಯಾನ್ ಇಬ್ರಾಹಿಂ ಮದನಿ ಸಅದೀಸ್ ಕೇಂದ್ರ ಸಮಿತಿಯ ಅಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ, ಎಂಎಸ್ ಎಂ ಅಬ್ದುಲ್ ರಶೀದ್ ಝೈನಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ,ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು, ಕೊಲ್ಲಂಪಾಡಿ ಅಬ್ದುಲ್ ಖಾದರ್ ಸಅದಿ, ಎಸ್ ವೈ ಎಸ್ ರಾಜ್ಯಾಧ್ಯಕ್ಷ ಎಂ ವೈ ಹಫೀಳ್ ಸಅದಿ ಕೊಡಗು ಭಾಷಣ ಮಾಡಿದರು. ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಗಳಾದ, ಇಬ್ರಾಹಿಂ ಖಲೀಲ್ ಮಾಲಿಕೀ, ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ, ಕೆ ಎಂ ಸಿದ್ದೀಕ್ ಮೋಂಟುಗೋಳಿ,
ಎಸ್ ವೈ ಎಸ್ ಜಿಲ್ಲಾಧ್ಯಕ್ಷ
ಇಸ್ಹಾಕ್ ಝುಹ್ರಿ ಸೂರಿಂಜೆ, ಹನೀಫ್ ಸಅದಿ ಬದ್ಯಾರ್ ,
ಎಸ್ ಎಂ ಎ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಅಡ್ಯಾರ್ ಪದವು, ಯೂಸುಫ್ ಸಾಜಾ ಪುತ್ತೂರು, ಅಬ್ದುಲ್ ರಹಿಮಾನ್ ಸಅದಿ ಕಂಕನಾಡಿ
ಮುಸ್ಲಿಂ ಜಮಾತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಂ ಸಅದಿ ಗಾಣೆಮಾರ್,ಮುಫತ್ತಿಶ್ ಹಾಫಿಳ್ ಹನೀಫ್ ಮಿಸ್ಬಾಹಿ,
ಮುಸ್ತಫಾ ಸಅದಿ ಶಿರ್ವ, ಇಸ್ಮಾಯಿಲ್ ಸಅದಿ ಉರುಮನೆ,ಅಬ್ದುಲ್ ರಹಿಮಾನ್ ಪ್ರಿಂಟೆಕ್, ಇಬ್ರಾಹಿಂ ನಯೀಮಿ,
ಸಹಿತ ಹಲವಾರು ಉಲಮಾ ಉಮರಾ ನಾಯಕರು ಉಪಸ್ಥಿತರಿದ್ದರು.
ಸಅದಿಯ್ಯ ಸಮ್ಮೇಳನದ ಮಲಯಾಳಂ ಬ್ರೌಷರ್ ಎಸ್ ಮುಹಮ್ಮದ್ ಹಾಜಿ ಸಾಗರ ಅಬ್ದುಲ್ ಜಲೀಲ್ ಬ್ರೈಟ್ ರವರಿಗೆ ನೀಡುವ ಮೂಲಕ ಮತ್ತು ಕನ್ನಡ ಬ್ರೌಷರನ್ನು ಎಸ್ ಕೆ ಕಾದರ್ ಹಾಜಿಯವರು ಎಚ್ ಎಚ್ ಅಮೀನ್ ಹಾಜಿಯವರಿಗೆ ನೀಡುವ ಮೂಲಕ ಬಿಡುಗಡೆ ಗೊಳಿಸಿದರು.ನಂತರ ಕರ್ನಾಟಕ ರಾಜ್ಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಪ್ರಾರಂಭದಲ್ಲಿ ಹಾಫಿಳ್ ಯಾಕೂಬ್ ಸಅದಿ ನಾವೂರು ಸ್ವಾಗತಿಸಿ ಮನ್ಸೂರ್ ಸಅದಿ ಬಜಪೆ ವಂದಿಸಿದರು.