ಶಿವಮೊಗ್ಗ ಆರ್ ಎಂ. ಎಲ್. ನಗರದಲ್ಲಿ, ಮಂಗಳೂರಿನ ಮಸ್ನವಿ ಗ್ಲೋಬಲ್ ಅಕಾಡೆಮಿ (ರಿ) ವತಿಯಿಂದ ನಡೆಯುತ್ತಿರುವ ‘ಮಸ್ನವಿ ಶೈಬಾನಿಯಾ ಮದ್ರಸ’ದಲ್ಲಿ ಆಗಸ್ಟ್ 14 ಬುಧವಾರ ಬೆಳಗ್ಗೆ 10.ಗಂಟೆಗೆ ಮೆಹಫಿಲೇ ರಬ್ಬಾನಿ ಪ್ರಾರ್ಥನಾ ಸಂಗಮ ನಡೆಯಲಿರುವುದು.
ಮದ್ರಸಕ್ಕೆ ಸ್ಥಳವಕಾಶ ನೀಡಿದ ನಗರದ ಪ್ರಮುಖ ಉದ್ಯಮಿ ಹಾಗೂ ಧರ್ಮಾಭಿಮಾನಿಯಾದ ಹಾಜಿ ನಈಮ್ ಸೇಟ್ ಅವರ ಧರ್ಮಪತ್ನಿ ಶಬಾನಾ ಯಾಸ್ಮಿನ್ ಅವರು ಇತೀಚೆಗೆ ಅಗಲಿದ್ದು ಅವರ ಹೆಸರಲ್ಲಿ ವಿಶೇಷ ದುಆ ಮಜ್ಲಿಸ್ ಕೂಡ ಇದರ ಅಂಗವಾಗಿ ನಡೆಯಲಿರುವುದು.
ಕಾರ್ಯಕ್ರಮಕ್ಕೆ ಮಂಗಳೂರು ಮಸ್ನವಿ ಗ್ಲೋಬಲ್ ಅಕಾಡೆಮಿ(ರಿ) ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೖನೀ ಕಾಮಿಲ್ ನೇತೃತ್ವ ಕೊಡಲಿದ್ದು ಜನರಲ್ ಮೆನೇಜರ್ ನೌಫಲ್ ಮದನಿ ನೇಜಾರ್ ಸಂದೇಶ ಭಾಷಣ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಎಲ್ಲ ಸಹೋದರ ಸಹೋದರಿಯರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ