ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿಯಾದ ಬೆಳ್ತಂಗಡಿ ಶಾಸಕ ಪೂಂಜ ಹೇಳಿಕೆಗಳು ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿ,ಗಲಬೆ ಎಬ್ಬಿಸುವ ಹುಣ್ಣಾರ, ಜಾತಿ ಮದ್ಯೆ ವೀಷ ಬೀಜ ಬಿತ್ತುತ್ತಿರುವ ಇವರನ್ನು ಕೇಸು ದಾಖಲಿಸಿ ಕೂಡಲೇ ಬಂದಿಸಬೇಕು ಜಿಲ್ಲಾ ವಕ್ಫ್ ಸಲಹಾ ಕಮಿಷನರ್ ಗೆ ದೂರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಸೀದಿಯೊಳಗೆ ಆಯುಧಗಳು ಶೇಖರಿಸಲಾಗಿದೆ ಎಂಬ ಅಸಂಭದ್ದ ಹೇಳಿಕೆ ವಿರುಧ್ದ
ದ ಕ ಜಿಲ್ಲಾ ವಕ್ಫ್ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖ ಮಸೀದಿಯ ಅಧ್ಯಕ್ಷ ರು ಹಾಗೂ ಕಾರ್ಯದರ್ಶಿ ಗಳು ಕಮಿಷನರ್ ಅನಪಮ್ ಅಗ್ರವಾಲ್ ಬೇಟಿಯಾಗಿ ದೂರು.
ಯಾವುದೇ ಧಾರ್ಮಿಕ ಕ್ಷೇತ್ರದ ಮುಂಭಾಗದಲ್ಲಿ ಹಾಗೂ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧರ್ಮಗಳನ್ನು ನಿಂದಿಸುವ ಕೆಲಸಗಳನ್ನು ಮಾಡಿದವರ ವಿರುದ್ಧ ಪೋಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು.
ಬಕ್ರಿದ್ ಹಬ್ಬ ವಿಧಿ ವಿಧಾನಗಳನ್ನು ಆಚರಿಸುವಲ್ಲಿ ಹಾಗೂ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಸೂಕ್ತ ರಕ್ಷಣೆ ನೀಡಬೇಕು.
ಬೋಳಿಯಾರ್ ನಲ್ಲಿ ನಡೆದ ಘಟನೆಯನ್ನು ಸಂಪೂರ್ಣ ತನಿಖೆ ನಡೆಸಿ ಅಮಾಯಕರನ್ನು ಬಂಧನವಾಗದಂತೆ ಎಚ್ಚರವಹಿಸಬೇಕು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಮಾಜಿ ಅಧ್ಯಕ್ಷ ಎಸ್ ಎಮ್ ರಷೀದ್ ಹಾಜಿ ಮಂಗಳೂರು,ಮಸ್ಜಿದುತ್ತಖ್ವ ಪಂಪ್ ವೆಲ್ ಪ್ರಧಾನ ಕಾರ್ಯದರ್ಶಿ ಬಿ ಎಂ ಮಮ್ತಾಜ್ ಅಲಿ ಕೃಷ್ಣಾಪುರ ,ಉಳ್ಳಾಲ ದರ್ಗಾ ಅಧ್ಯಕ್ಷ ಬಿ ಜಿ ಹನೀಫ್ ಹಾಜಿ ಉಳ್ಳಾಲ, ಜೀನತ್ ಭಕ್ಷ್ ಕೇಂದ್ರ ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಪ್ ಹಾಜಿ ಬಂದರ್ , ಉಪಾಧ್ಯಕ್ಷ ಮಾಜಿ ಮೇಯರ್ ಕೆ ಅಶ್ರಫ್, ಮದೀನ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾರೂನ್, ಅಜಿಲಮೊಗರು ದರ್ಗಾ ಅಧ್ಯಕ್ಷ ಪಿ ಬಿ ಅಬ್ದುಲ್ ಹಮೀದ್, ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು,ಮೊಹ್ದಿನ್ ಪಳ್ಳಿ ಮುತವಲ್ಲಿ ಶಂಸುದ್ದೀನ್ ಎಚ್ ಬಿಟಿ, ಬೋಳಾರ ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೈನ್ ಬೋಳಾರ, ವಕ್ಫ್ ಉಪಾಧ್ಯಕ್ಷ ಅಶ್ರಫ್ ಕಿನಾರ ಮಂಗಳೂರು, ಸದಸ್ಯರಾದ ಸೈದುದ್ದೀನ್ , ಜೀಶಾನ್ ಅಲಿ ವಕೀಲರು, ತಡಂಬೈಲ್ ನೂರುಲ್ ಹುದಾ ಮದರಸ ಅಧ್ಯಕ್ಷ ಅಬ್ದುಸ್ಸಲಾಂ, ಕೇಂದ್ರ ಮೊಹ್ದಿನ್ ಜುಮಾ ಮಸೀದಿ ಸುರತ್ಕಲ್ ಅಧ್ಯಕ್ಷ ಮುಹಮ್ಮದ್ ಮುಸ್ತಫ ಕುದ್ರೋಳಿ ಜಾಮಿಅ ಮಸೀದಿ ಕಾರ್ಯದರ್ಶಿ ಖಲೀಲ್ ಉಪಸ್ಥಿತರಿದ್ದರು.