janadhvani

Kannada Online News Paper

ಸಾಮಾಜಿಕ ತಾಣಗಳಲ್ಲಿ ಇನ್ಮುಂದೆ ‘ಮೋದಿ ಕಾ ಪರಿವಾ‌ರ್’ ಟ್ಯಾಗ್ ಬಳಸಬೇಡಿ- ಪ್ರಧಾನಿ ಮನವಿ

ಸತತ 3ನೇ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿಯವರು ಹಳದಿ ಬಣ್ಣದ ಕೋಟ್‌ನಲ್ಲಿ ಇರುವ ಫೋಟೋವನ್ನ ಪ್ರೊಫೈಲ್‌ಗೆ ಹಾಕಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿಯವರಿಗೆ ಬೆಂಬಲ ಸೂಚಿಸಿ ಮೋದಿಯವರ ನಿರ್ದೇಶನದ ಮೇರೆಗೆ ಪ್ರಚಾರ ಪಡಿಸಲಾಗಿದ್ದ ‘ಮೋದಿಕಾ ಪರಿವಾ‌ರ್’ ಎಂಬ ಟ್ಯಾಗ್‌ಲೈನ್‌ನ್ನು ಬಳಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಎಕ್ಸ್ ಖಾತೆ ಮೂಲಕ ವಿಶೇಷ ಮನವಿಯನ್ನ ಮಾಡಿದ್ದಾರೆ.

ಸೋಷಿಯಲ್‌ ಮೀಡಿಯಾಗಳಲ್ಲಿ ನಿಮ್ಮ ಹೆಸರಿನ ಎದುರು ಹಾಕಿಕೊಂಡಿರುವ ‘ಮೋದಿಕಾ ಪರಿವಾರ್’ (ನಾನೂ ಮೋದಿ ಪರಿವಾರ) ಎಂಬ ಟ್ಯಾಗ್‌ಲೈನ್‌ನ್ನ ತೆಗೆಯುವಂತೆ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೂ ಪೂರ್ವ ಬಿಜೆಪಿಯ ಎಲ್ಲ ನಾಯಕರೂ, ಮೋದಿ ಅಭಿಮಾನಿಗಳು ತಮ್ಮ ಪ್ರೊಫೈಲ್‌ನಲ್ಲಿ ಹೆಸರಿನ ಮುಂದೆ ‘ಮೋದಿ ಕಾ ಪರಿವಾರ್’ ಎಂಬ ಸ್ಲೋಗನ್ ಹಾಕಿಕೊಂಡಿದ್ದರು. ಅದನ್ನಿನ್ನು ಅಲ್ಲಿಂದ ತೆಗೆದುಬಿಡಿ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಅಷ್ಟೇ ಅಲ್ಲ, ಅವರಿಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋವನ್ನೂ ಬದಲಿಸಿಕೊಂಡಿದ್ದಾರೆ.

ಸತತ 3ನೇ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿಯವರು ಹಳದಿ ಬಣ್ಣದ ಕೋಟ್‌ನಲ್ಲಿ ಇರುವ ಫೋಟೋವನ್ನ ಪ್ರೊಫೈಲ್‌ಗೆ ಹಾಕಿಕೊಂಡಿದ್ದಾರೆ.

ಇಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ನರೇಂದ್ರ ಮೋದಿ ‘ ಲೋಕಸಭೆ ಚುನಾವಣೆ ಪ್ರಚಾರದ ಹೊತ್ತಲ್ಲಿ ದೇಶಾದ್ಯಂತ ಅನೇಕ ಜನರು ಅವರ ಸೋಷಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ಮೋದಿಕಾ ಪರಿವಾ‌ರ್ ಟ್ಯಾಗ್‌ಲೈನ್‌ಗಳನ್ನ ಹಾಕಿಕೊಂಡಿದ್ದಾರೆ. ನನ್ನ ಮೇಲಿನ ಅಭಿಮಾನ-ಅಕ್ಕರೆಯಿಂದ ಅವರೆಲ್ಲ ಹೀಗೆ ನಾನೂ ಮೋದಿ ಪರಿವಾರ ಎಂಬ ಸ್ಲೋಗನ್ ಹಾಕಿಕೊಂಡಿದ್ದರು. ಇದರಿಂದ ನನಗೆ ದೊಡ್ಡ ಬಲವೇ ಸಿಕ್ಕಂತಾಗಿತ್ತು. ದೇಶದ ಜನರು 3ನೇ ಬಾರಿಗೆ ಎನ್‌ಡಿಎ ಒಕ್ಕೂಟಕ್ಕೆ ಸರ್ಕಾರ ರಚನೆ ಮಾಡುವ ಅಧಿಕಾರ ಕೊಟ್ಟರು. ಇದೊಂದು ದಾಖಲೆ. ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ನಮಗೆ ಅವರು ಈ ಆದೇಶ ನೀಡಿದ್ದಾರೆ’ ಎಂದು ಹೇಳಿದ್ದಾರೆ.

ಮೋದಿ ಕಾ ಪರಿವಾರ್’ ಎಂದು ಹೇಳಿಕೊಳ್ಳುವ ಮೂಲಕ ನಾವೆಲ್ಲರೂ ಒಂದೇ ಕುಟುಂಬ ಸಂದೇಶವನ್ನ ನಾವು ರವಾನಿಸಲಾಗಿದೆ. ಇದಕ್ಕಾಗಿ ದೇಶದ ಜನರಿಗೆ ನಾನು ಅನಂತ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ಹಾಗೇ, ಇನ್ನು ಸೋಷಿಯಲ್‌ ಮೀಡಿಯಾ ಪ್ರೊಫೈಲ್‌ನಿಂದ ಮೋದಿ ಕಾ ಪರಿವಾ‌ರ್ ಎಂಬ ಸಾಲನ್ನು ತೆಗೆದುಬಿಡಿ ಎಂದು ಮನವಿ ಮಾಡುತ್ತೇನೆ. ಅದನ್ನ ಅಲ್ಲಿಂದ ತೆಗೆದರೂ ನಮ್ಮ ನಡುವಿನ ಬಾಂಧವ್ಯ ಗಟ್ಟಿಯಾಗಿಯೇ ಇರುತ್ತೆ. ನಾವೆಲ್ಲರೂ ಒಂದೇ ಕುಟುಂಬದಂತೆ ಇರುತ್ತೇವೆ. ಎಲ್ಲರೂ ಒಟ್ಟಾಗಿ ಭಾರತದ ಅಭಿವೃದ್ಧಿಗೆ ಶ್ರಮಿಸೋಣ’ ಎಂದು ಹೇಳಿದ್ದಾರೆ.

error: Content is protected !! Not allowed copy content from janadhvani.com