ಪುತ್ತೂರು:(ಜನಧ್ವನಿ ವಾರ್ತೆ) ಜೂನ್ 5 ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ “ಎಸ್ಸೆಸ್ಸೆಫ್ ನಾಳೆಗೊಂದು ನೆರಳು”ಎಂಬ ಘೋಷ ವಾಕ್ಯದೊಂದಿಗೆ ಎಸ್ಸೆಸ್ಸೆಫ್ ಬನ್ನೂರು ಶಾಖೆ ಇದರ ಆಶ್ರಯದಲ್ಲಿ ಬನ್ನೂರು ವಾಪ್ತಿಯಲ್ಲಿ ಸಸಿ ವಿತರಣೆ ಹಾಗೂ ಹಲವಾರು ಮನೆಗಳಿಗೆ ತೆರಳಿ ಸಸಿ ನೆಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸುನ್ನೀ ಸೆಂಟರ್ ಪ್ರಮುಖರಾದ ರಿಯಾಝ್ ಪಾಪ್ಲಿರವರ ನೇತೃತ್ವದಲ್ಲಿ ನಡೆಸಲಾಯಿತು
ಕಾರ್ಯಕ್ರಮದಲ್ಲಿ ” ನಾವೂ ನೆಡುವ ಸಸಿಯೂ ಮುಂದಿನ ಪೀಳಿಗೆಗೆ ನೆರಳಾಗಿರುತ್ತದೆ ” ಎಂದು ಎಸ್ಸೆಸ್ಸೆಫ್ ಬನ್ನೂರು ಶಾಖೆ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಉಸ್ತುವಾರಿಯಾದ ಇಬ್ರಾಹಿಂ ಖಲೀಲ್ ಪುತ್ತೂರು ರವರು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ KCF ಅಲ್ಖೋಬರ್ ಸೆಕ್ಟರ್ ಸದಸ್ಯರಾದ ಆಸೀಫ್ ಅಜಿಲಮೊಗರು ಅವರು ಕಾರ್ಯಕ್ರಮದಲ್ಲಿ ಸಸಿ ವಿತರಿಸುವ ಮೂಲಕ ಚಾಲನೆ ನೀಡಿದರು.
ಬನ್ನೂರು ವ್ಯಾಪ್ತಿಗಳಲ್ಲಿ ಗಿಡ ನೆಡುವ ಮೂಲಕ ಬನ್ನೂರು ಬ್ರಾಂಚ್ ಎಸ್ಸ್.ವೈ.ಎಸ್ಸ್ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ರವರು ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಎಸ್ಸೆಸ್ಸೆಫ್ ಬನ್ನೂರು ಶಾಖೆ ಉಪಾಧ್ಯಕ್ಷ ಶಮೀರ್ ಬನ್ನೂರು, GCC ಸದಸ್ಯ ಬಸೀರ್ ಬನ್ನೂರು , ಎಸ್ಸೆಸ್ಸೆಫ್ ಕಾರ್ಯಕರ್ತರಾದ ಉಮ್ಮರ್ ಬೆಂಗಳೂರು ,ಆಸೀಫ್ ಬನ್ನೂರು , ನಾಸೀರ್ ಬನ್ನೂರು ಉಪಸ್ಥಿತರಿದರು.
Masha allah