ಅಬುಧಾಬಿ: ವಾರಗಳ ಹಿಂದೆ ನಾಪತ್ತೆಯಾಗಿದ್ದ ಮಲಯಾಳಿ ಯುವಕ ಅಬುಧಾಬಿಯಲ್ಲಿ ಮೃತಪಟ್ಟ ನೆಲೆಯಲ್ಲಿ ಪತ್ತೆಯಾಗಿದ್ದಾರೆ. ತ್ರಿಶೂರ್ ನ ಒರುಮನಯೂರ್ ನಿವಾಸಿ ಶೆಮೀಲ್ (28) ಮೃತಪಟ್ಟವರು. ಅವರು ಮಾರ್ಚ್ 31 ರಿಂದ ನಾಪತ್ತೆಯಾಗಿದ್ದರು.
ಪೊಲೀಸರ ತನಿಖೆಯ ವೇಳೆ ನಿನ್ನೆ ಅಬುಧಾಬಿ ಮುಸಫ್ಫಾದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮೃತದೇಹ ಪತ್ತೆಯಾಗಿದೆ. ದಿನಗಟ್ಟಲೆ ಹಳೆಯದಾದ ಮೃತದೇಹವನ್ನು ಬನಿಯಾಸ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಸಂಸ್ಥೆಯ ಮಾಲೀಕರಿಗೆ ಮಾಹಿತಿ ನೀಡಿದರು. ಶೆಮೀಲ್ ಅಬುಧಾಬಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಇವರು ಅಬುಧಾಬಿ ಕೆಎಂಸಿಸಿ ಒರುಮನಯೂರು ಪಂಚಾಯತ್ ಸಮಿತಿ ಸದಸ್ಯ ಕಾಳತ್ ಸಲೀಂ ಅವರ ಪುತ್ರ.
ನಾಪತ್ತೆಯಾಗಿದ್ದ ಪಾಕಿಸ್ತಾನಿ ಬಾಲಕ ಮೃತ್ಯು
ಅಜ್ಮಾನ್: ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ವಲಸಿಗ ಬಾಲಕ ಯುಎಇಯಲ್ಲಿ ಮೃತಪಟ್ಟ ನೆಲೆಯಲ್ಲಿ ಪತ್ತೆಯಾಗಿದ್ದಾನೆ. ಪಾಕಿಸ್ತಾನ ಮೂಲದ 17 ವರ್ಷದ ಇಬ್ರಾಹಿಂ ಮುಹಮ್ಮದ್ ಮೃತ ಬಾಲಕ. ವರದಿಗಳ ಪ್ರಕಾರ, ಬಾಲಕ ತನ್ನ ತಾಯಿಯೊಂದಿಗೆ ಜಗಳವಾಡಿದ ನಂತರ ಮನೆಯಿಂದ ಹೊರಟಿದ್ದಾನೆ. ಬಾಲಕನ ಮೃತದೇಹ ಪತ್ತೆಯಾದ ಬಗ್ಗೆ ಅಜ್ಮಾನ್ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಮನೆಯವರು ಬಂದು ಮೃತದೇಹವನ್ನು ಗುರುತಿಸಿದ್ದಾರೆ.
ಮೃತ ಇಬ್ರಾಹಿಂ ಮುಹಮ್ಮದ್ ಪಾಕಿಸ್ತಾನಿ ದಂಪತಿಯ ಇಬ್ಬರು ಪುತ್ರರಲ್ಲಿ ಹಿರಿಯವನಾಗಿದ್ದ. ಅಜ್ಮಾನ್‌ನ ಅಲ್ ಖೋರ್ ಟವರ್ ಬಳಿ ಮೃತದೇಹ ಪತ್ತೆಯಾಗಿದ್ದು, ಪೊಲೀಸರಿಂದ ಹೃದಯವಿದ್ರಾವಕ ಸುದ್ದಿ ಬಂದಿದೆ ಎಂದು ಮಗುವಿನ ತಾಯಿ ಹೇಳಿದ್ದಾರೆ. ಇದಕ್ಕೂ ಮುನ್ನ ಬಾಲಕ ಕಾಣೆಯಾದ ಹಿನ್ನೆಲೆಯಲ್ಲಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಮಗುವಿನ ತಂದೆ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ.
ಮಗ ಹಿಂತಿರುಗುತ್ತಾನೆ ಎಂದು ಆಶಿಸಿದ್ದೆ ಎಂದು ತಾಯಿ ಹೇಳಿದರು. ಕೆಲವು ದಿನಗಳ ಹಿಂದೆ ಶಾರ್ಜಾದಲ್ಲಿ ಕಾಣಿಸಿಕೊಂಡಿದ್ದಾನೆ ಎಂಬ ಮಾಹಿತಿ ಆಧಾರದಲ್ಲಿ ತೆರಳಿ ಪರಿಶೀಲಿಸಿದಾಗ ಲಭಿಸಿದ ಮಾಹಿತಿ ತಪ್ಪಾಗಿತ್ತು. ತನ್ನ ಮಗ ಹಿಂತಿರುಗುತ್ತಾನೆ ಎಂಬ ಭರವಸೆಯೊಂದಿಗೆ ಪ್ರತಿ ದಿನವನ್ನು ಮುಂದೂಡುತ್ತಿದ್ದೆ.ಆದರೆ, ಇಂದು ನನಗೆ ಅತ್ಯಂತ ಭಯಾನಕ ಸುದ್ದಿ ಲಭಿಸಿದೆ. ತನ್ನ ಪರಿಸ್ಥಿತಿಯನ್ನು ಯಾವ ತಾಯಿಯೂ ಎದುರಿಸಬಾರದು ಎಂದು ಮಾಧ್ಯಮಗಳಿಗೆ ತಾಯಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ