janadhvani

Kannada Online News Paper

ಬೇಸಿಗೆಯ ತೀವ್ರತೆ: ಬೆಳಗ್ಗೆ 11 ರಿಂದ ಸಂಜೆ 4 ವರೆಗೆ ಕಾರ್ಮಿಕರಿಗೆ ಬಿಡುವು ಕಡ್ಡಾಯ

ಕುವೈತ್ ಸಿಟಿ: ಮ್ಯಾನ್ಪವರ್ ಸಾರ್ವಜನಿಕ ಪ್ರಾಧಿಕಾರ ಬೇಸಿಗೆಯ ತೀವ್ರತೆಯಲ್ಲಿ ತೆರೆದ ಸ್ಥಳಗಳಲ್ಲಿ ಮದ್ಯಾಹ್ನದ ಕೆಲಸವನ್ನು ನಿಷೇಧಿಸಲು ನಿರ್ಧರಿಸಿದೆ. ಜೂನ್ 1 ರಿಂದ ಆಗಸ್ಟ್ 31ರವರೆಗೆ ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯ ವರೆಗೆ ಕಾರ್ಮಿಕರಿಗೆ ಕಡ್ಡಾಯ ಬಿಡುವಿಗೆ ಅನುಮತಿ ನೀಡಿದೆ.ಬೇಸಿಗೆಯ ಉಷ್ಣತೆ ಏರುವಾಗ ಸೂರ್ಯ ತಾಪವು ನೇರವಾಗಿ ಆಘಾತ ನೀಡುವುದನ್ನು ತಡೆಯುವುದಾಗಿದೆ ಗುರಿ.

ಈ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎನ್ನುವ ಬಗ್ಗೆ ತೀವ್ರ ತಪಾಸಣೆ  ನಡೆಸಲಾಗುವುದು ಎಂದು ಮ್ಯಾನ್ ಪವರ್ ಅಥಾರಿಟಿ ಎಚ್ಚರಿಸಿದೆ.ಅದೇ ಸಮಯದಲ್ಲಿ, ಕಾನೂನು ಉಲ್ಲಂಘನೆಯ ಸೂಚನೆ ಲಭಿಸಿದ್ದಲ್ಲಿ ಮೊದಲ ಬಾರಿಗೆ ನೋಟೀಸು ಹೊರಡಿಸಲಿದೆ. ಪುನರಾವರ್ತಿತ ಅಪರಾಧಕ್ಕೆ ಪ್ರತೀಯೋರ್ವ ಕಾರ್ಮಿಕನಿಗೆ 100 ದಿನಾರ್ ದಂಡವನ್ನು ಮಾಲೀಕರು ನೀಡಬೇಕಾಗುತ್ತದೆ.

ಕಾನೂನಿನ ನಿಯಮಗಳನ್ನು ಉಲ್ಲಂಘಿಸುವರ ಫೈಲ್‌ಗಳನ್ನು ನಿಷ್ಕ್ರಿಯ ಗೊಳಿಸುವುದು ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವಾಲಯದ ವಿಶೇಷ ಸಮಿತಿಯು ಈ ಬಗ್ಗೆ  ಪರಿಶೋಧನೆ ನಡೆಸಲಿದೆ ಎಂದು ಮ್ಯಾನ್ ಪವರ್ ಸಾರ್ವಜನಿಕ ಪ್ರಾಧಿಕಾರ ಎಚ್ಚರಿಸಿದೆ.

error: Content is protected !! Not allowed copy content from janadhvani.com