janadhvani

Kannada Online News Paper

ಸಂತುಷ್ಟ ಕುಟುಂಬ: ಇಸ್ಲಾಮಿಕ್ ಬೋಧನೆಗಳು ವಿಶ್ವಕ್ಕೆ ಮಾದರಿ-ನೌಫಲ್ ಸಖಾಫಿ ಕಳಸ

ದುಬೈ: ಸಂತೃಪ್ತ ಕುಟುಂಬ ನಿರ್ಮಾಣಕ್ಕೆ ಮತ್ತು ಅದರ ಉಳಿವಿಗೆ ಇಸ್ಲಾಂ ಧರ್ಮ ಸೂಚಿಸಿರುವ ನಿರ್ದೇಶನಗಳು ವಿಶ್ವಕ್ಕೆ ಮಾದರಿ ಎಂದು ನೌಫಲ್ ಸಖಾಫಿ ಕಳಸ ಹೇಳಿದ್ದಾರೆ. ಅವರು ಇಪ್ಪತ್ತೆರಡನೇ ಅಂತರರಾಷ್ಟ್ರೀಯ ಹೋಲಿ ಖುರ್‌ಆನ್ ಕಾರ್ಯಕ್ರಮದ ಪ್ರಯುಕ್ತ ಜಾಮಿಆ ಸ‌ಅದಿಯ್ಯಾ ಇಂಡಿಯನ್ ಸೆಂಟರ್ ಆಯೋಜಿಸಿದ ಪ್ರವಚನ ವೇದಿಕೆಯಲ್ಲಿ ಉಪನ್ಯಾಸ ನೀಡುತ್ತಿದ್ದರು.

ಕುಟುಂಬ ಎನ್ನುವುದು ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಮುಖ ಅಂಶವಾಗಿದೆ. ಸ್ನೇಹ, ವಾತ್ಸಲ್ಯ, ದಯೆ, ಕರುಣೆ, ಅನುಕಂಪ, ಸಹಾನುಭೂತಿ, ಔದಾರ್ಯ, ಗೌರವ, ಇಂತಹ ಮಹತ್ವಪೂರ್ಣವಾದ ಮೌಲ್ಯಗಳನ್ನು ಕಂಡು, ಕೇಳಿ ಬೆಳೆಯುತ್ತಿರುವ ಸಂತತಿಗಳು ಶಕ್ತಿಯುತವಾದ ಸಾಮಾಜಿಕ ತಳಹದಿಗೆ ಭದ್ರ ಬುನಾದಿಯಾಗಿ ಮಾರ್ಪಡುತ್ತಾರೆ. ಮಾನವ ಮೌಲ್ಯಗಳ ಎಲ್ಲಾ ಸಿದ್ಧಾಂತಗಳ ಜನನ, ಬೆಳವಣಿಗೆ ಮತ್ತು ಅಭಿವೃದ್ಧಿಯು ಕುಟುಂಬ ಎಂಬ ಬಿಂದುವಿನಿಂದ ಪ್ರಾರಂಭವಾಗುತ್ತದೆ.ಆದ್ದರಿಂದಲೇ ಕುಟುಂಬದ ಭದ್ರವಾದ ರಚನೆಗೆ ಆಧಾರವಾದ ವ್ಯವಸ್ಥೆಗಳು ಇಸ್ಲಾಮೀ ಶರೀಅತ್ತ್‌ನ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ.

ಕುಟುಂಬ, ವ್ಯಕ್ತಿ, ಸಮುದಾಯ, ಸಮಾಜ, ದೇಶ, ಮುಂತಾದ ದಿಶೆಗಳಲ್ಲಿ ಸಮಗ್ರವಾದ ವ್ಯವಸ್ಥೆಯೊಂದಿಗೆ ಜೀವನವನ್ನು ಕಂಡುಕೊಳ್ಳುವ  ಇಸ್ಲಾಂ ಧರ್ಮದ ಬೋಧನೆಗಳು  ಕುಟುಂಬಕ್ಕೆ ಪ್ರಮುಖ ಸ್ಥಾನವನ್ನು ನೀಡಿದೆ.
ಕುಟುಂಬದ ಉದಯ, ಧರ್ಮ, ಸ್ವಭಾವ ಮತ್ತು ಅದರ ರಚನೆಗಳಲ್ಲಿ  ಇಸ್ಲಾಂ ಧರ್ಮದಲ್ಲಿ ವ್ಯಕ್ತವಾದ ದೃಷ್ಟಿಕೋನಗಳಿವೆ.ಖುರ್‌ಆನಿನ  ನೀತಿ ಸಂಹಿತೆಯ ವಿಧಿಗಳಲ್ಲಿ ಮೂರನೇ ಒಂದು ಭಾಗದಷ್ಟು ಕೌಟುಂಬಿಕ ಮತ್ತು ಅದರ ಕ್ರಮೀಕರಣಗಳಿಗೆ ಸಂಬಂಧಿಸಿದೆ. ಉದಾತ್ತ  ವ್ಯಕ್ತಿತ್ವವು ಉತ್ತಮ ಕುಟುಂಬಕ್ಕೆ ಆಧಾರವಾಗಿದೆ. ಕುಟುಂಬವ ರೂಪಿಸುವ ವ್ಯಕ್ತಿಯ ಚಿಂತನೆ ಮತ್ತು ಕರ್ಮಗಳು ಅಲ್ಲಾಹನ ಭಯದಲ್ಲಿ ತಲ್ಲೀನವಾಗಿರಬೇಕು ಎಂಬುದು ಇಸ್ಲಾಮಿನ ಪ್ರಥಮ ಶಾಸನವಾಗಿ. ಸಮಾಜ ನಿರ್ಮಾನದಲ್ಲಿ ಕುಟುಂಬಗಳು ನಿರ್ವಹಿಸುವ ಪ್ರಾಧಾನ್ಯತೆಯನ್ನು ಗ್ರಹಿಸುವ ಕಾರಣಕ್ಕಾಗಿ ಚಿಂತಕರು, ಪಂಡಿತರು, ಅದ್ಯಯನಗಾರರು, ಸಾಮಾಜಿಕ ಶಾಸ್ತ್ರಜ್ಞರು ಕುಟುಂಬದ ಕುರಿತು ಆಳವಾದ ಅದ್ಯಯನ ನಡೆಸಿ ಬೆಳಕು ಚೆಲ್ಲಿದ್ದಾರೆ.

ಇಸ್ಲಾಮೀ ಶರೀಅವು ಸಾಮಾಜಿಕ ಚೌಕಟ್ಟಿನಲ್ಲಿ ಕುಟುಂಬದ ರಚನೆಯ ಮಹತ್ವವನ್ನು ಒತ್ತಿಹೇಳುತ್ತದೆ.ಕುಟುಂಬದ, ನೈತಿಕ ಆಧ್ಯಾತ್ಮಿಕ,ಲೌಕಿಕ , ಸಾಮಾಜಿಕ ನೈತಿಕತೆಗೆ ಬೆಳಕು ಚೆಲ್ಲುವ ನಿಯಮಗನ್ನು ಆವಿಷ್ಕಾರ ಗೊಳಿಸಿದೆ. ಇತರ ಧರ್ಮಗಳಿಂದ ಇಸ್ಲಾಂ ಧರ್ಮವನ್ನು ಪ್ರತ್ಯೇಕಿಸಲು ಕಾರಣವೇನೆಂದರೆ ಇಸ್ಲಾಂ ಧರ್ಮವು ಕುಟುಂಬ ಜೀವನಕ್ಕೆ ಸಂಬಂಧಿಸಿ ಹಲವಾರು ಸಮಸ್ಯೆಗಳನ್ನು ಸಮಗ್ರವಾದ ರೀತಿಯಲ್ಲಿ ನಿಭಾಯಿಸುತ್ತದೆ.ದುಬೈನ ಅಲ್ ವಸ್ಲ್ ಸ್ಪೋರ್ಟ್ಸ್ ಕ್ಲಬ್ ‌ನಲ್ಲಿ ರಾತ್ರಿ ಹತ್ತು ಗಂಟೆಗೆ ಪ್ರಂಭಿಸಿದ ಕಾರ್ಯಕ್ರಮಕ್ಕೆ ವಿವಿಧ ಎಮಿರೇಟ್‌ನ ನೂರಾರು ವಿಶ್ವಾಸಿಗಳು ಭಾಗವಹಿಸಿದ್ದರು.

ಹೋಳಿ ಖುರ್‌ಆನ್ ಅವಾರ್ಡ್ ಸಮಿತಿಯ ಪ್ರತಿನಿಧಿ ಅಹ್ಮದ್ ಅಬ್ದುರ್ರಹ್ಮಾನ್ ಅಲ್ ಮರ್ಝೂಕಿ ಉದ್ಘಾಟಿಸಿದರು. ಸೈಯದ್ ತ್ವಾಹಾ ಬಾಫಖಿ ಸಖಾಫಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಇಷಾಂ ಖಲೀಲ್ ಅಲ್ ಮುತವ್ವ , ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯ, ಸ‌ಅದಿಯ್ಯಾ ಶರೀಅತ್ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಶೈಖುನಾ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಮುಖ್ಯ ಅತಿಥಿಯಾಗಿದ್ದರು.

error: Content is protected !! Not allowed copy content from janadhvani.com