ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ ಖರೀದಿದಾರರಲ್ಲಿ ಎರಡನೇ ಸ್ಥಾನದಲ್ಲಿರುವ ಹೈದರಾಬಾದ್‌ನ ಮೇಘಾ ಇಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಸಿಬಿಐ ಲಂಚ ಪ್ರಕರಣ ದಾಖಲಿಸಿದೆ. ಎನ್.ಐ. ಎಸ್‌ಪಿ ಮತ್ತು ಎನ್‌ಎಂಡಿಸಿಯ ಎಂಟು ಅಧಿಕಾರಿಗಳು ಮತ್ತು ಮೆಕಾನ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜಗದಲ್ಪುರ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಕಾಮಗಾರಿಗೆ ಸಂಬಂಧಿಸಿದಂತೆ ಮೇಘಾ ಇಂಜಿನಿಯರಿಂಗ್ 174 ಕೋಟಿ ಮೌಲ್ಯದ ಬಿಲ್ ಗೆ ಸಂಬಂಧ ಪಟ್ಟು 78 ಲಕ್ಷ ರೂಪಾಯಿ ಲಂಚ ಪಡೆಯಲಾಗಿದೆ ಎಂಬುದು ಪ್ರಕರಣ.
ಯೋಜನೆಯಲ್ಲಿ 315 ಕೋಟಿ ರೂ
ಲಂಚಕ್ಕೆ ಸಂಬಂಧಿಸಿದಂತೆ 2023
ಆಗಸ್ಟ್ 10 ರಂದು ಸಿಬಿಐ ಪ್ರಾಥಮಿಕ ತನಿಖೆ ನಡೆಸಿತ್ತು. ಈ ತನಿಖೆಯ ಫಲಿತಾಂಶದ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮಾರ್ಚ್ 21 ರಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮೇಘಾ ಕಂಪನಿಯು 966 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದೆ. ಬಿಜೆಪಿಗೆ 586 ಕೋಟಿ ದೇಣಿಗೆ ನೀಡಿದೆ ಎಂದು ಇತ್ತೀಚಿಗೆ ಬಹಿರಂಗ ವಾಗಿತ್ತು.