ಯುನೈಟೆಡ್ ಸ್ಟೇಟ್ಸ್ ಇರಾನ್ ಜೊತೆ ಯಾವುದೇ ಸಂಘರ್ಷ ಕ್ಕೆ ನಾವಿಲ್ಲ ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಕೂಡ ಇರಾನ್ ಜೊತೆ ಯಾವುದೇ ಮುಖಾಮುಖಿಗೆ ಅಮೇರಿಕ ಇಲ್ಲ ಎಂದು ಹೇಳಿದ್ದಾರೆ.
ಪಶ್ಚಿಮದಲ್ಲಿ ಉದ್ವಿಗ್ನತೆಯ ಪರಿಸ್ಥಿತಿಯಲ್ಲಿ, ಬಿಡೆನ್ ಚುನಾವಣಾ ಪ್ರಚಾರವನ್ನು ನಿಲ್ಲಿಸಿ ಶ್ವೇತಭವನಕ್ಕೆ ಬಂದ ನಂತರ ಈ ಘೋಷಣೆ ಹೊರಬಿತ್ತು.
ಯುಎನ್ ಸೆಕ್ಯುರಿಟಿ ಕೌನ್ಸಿಲ್ ಇಂದು ಸಭೆ ಸೇರಿ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಣಯ ಕೈಗೊಳ್ಳಲಿದೆ ಎಂದು ವರದಿ ತಿಳಿಸಿದೆ. ಇದೆ ಸಂದರ್ಭ ಇರಾನ್ ಮತ್ತು ಇಸ್ರೇಲ್ ಸಂಯಮದಿಂದ ವರ್ತಿಸುವಂತೆ ಗಲ್ಫ್ ರಾಷ್ಟ್ರಗಳು ಆಗ್ರಹಿಸಿವೆ.