ದುಬೈ: ನಿಪ್ಪಾ ವೈರಸ್ ಪರಿಣಾಮವಾಗಿ ಕೇರಳೀಯರು ಸಮೇತ ಪ್ರಯಾಣಿಕರನ್ನು ಎಚ್ಚರಿಕೆಯಿಂದ ನಿರೀಕ್ಷಿಸಲು ಯುಎಇ ಆರೋಗ್ಯ ಸಚಿವಾಲಯವು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಆದೇಶ ನೀಡಿದೆ.
ನಿಪ್ಹಾ ವೈರಸ್ ಸಂಶಯಾಸ್ಪದವಾಗಿ ಕಂಡುಬಂದರೆ ಅಂತಹ ಪ್ರಯಾಣಿಕರನ್ನು ತಕ್ಷಣವೇ ಪ್ರತ್ಯೇಕಿಸಬೇಕು. ಮತ್ತು ಅಧಿಕಾರಿಗಳಿಗೆ ತಕ್ಷಣವೇ ತಿಳಿಸಬೇಕು ಎಂದು ಸಚಿವಾಲಯ ತಿಳಿಸಿದೆ.ಸಂಬಂಧಪಟ್ಟ ಪ್ರದೇಶಗಳ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ವಿಮಾನನಿಲ್ದಾಣ ಅಧಿಕಾರಿಗಳಿಗೆ ನೀಡಲಾದ ಆದೇಶದಲ್ಲಿ ಸೂಚಿಸಿದೆ.
ಕೇರಳದ ಹಣ್ಣು ಮತ್ತು ತರಕಾರಿಗಳನ್ನು ಆಮದು ಮಾಡಿಕೊಳ್ಳುವುದನ್ನು ಯುಎಇ ಮತ್ತು ಬಹ್ರೈನ್ ಇತ್ತೀಚೆಗೆ ನಿಷೇಧಿಸಿತ್ತು.