janadhvani

Kannada Online News Paper

ಯುಎಇ: ಸಂದರ್ಶಕ ವೀಸಾದಲ್ಲಿ ಕೆಲಸ ಮಾಡಲು ಅವಕಾಶ…?- ಅಡ್ವೊಕೇಟ್ ಅಲಿ ಹುಮೈದ್ ಬೇಡಿಕೆಯೇನು?

ನುರಿತ ಕೆಲಸಗಾರರನ್ನು ಪತ್ತೆಹಚ್ಚಲು ಕಂಪನಿಗಳು ಹೆಣಗಾಡುತ್ತಿವೆ. ಅನೇಕ ಸಂದರ್ಶಕರು ಯುಎಇಯಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿದ್ದಾರೆ

ವಲಸಿಗರ ಸ್ವರ್ಗ ಎಂದು ಕರೆಯಲ್ಪಡುವ ದೇಶವಾಗಿದೆ ಯುಎಇ. ಪ್ರಸ್ತುತ ಯುಎಇಯಲ್ಲಿ ಸುಮಾರು ಒಂದು ಕೋಟಿ ವಿದೇಶಿಗರು ಉದ್ಯೋಗದಲ್ಲಿದ್ದಾರೆ. ಅವರಲ್ಲಿ 35 ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯರಾಗಿದ್ದಾರೆ.

ಯುಎಇಯಲ್ಲಿನ ಕಂಪನಿಗಳಲ್ಲಿ ನುರಿತ ಕೆಲಸಗಾರರನ್ನು ಸುರಕ್ಷಿತಗೊಳಿಸಲು ಭೇಟಿ ವೀಸಾದಲ್ಲೂ (ಪ್ರವಾಸಿ/ವಿಸಿಟಿಂಗ್ ವೀಸಾ) ಕೆಲಸ ಮಾಡಲು ಅನುಮತಿಸಬೇಕೆಂದು ಯುಎಇಯ ನ್ಯಾಚುರಲೈಸೇಶನ್ ಮತ್ತು ರೆಸಿಡೆನ್ಸಿ ಪ್ರಾಸಿಕ್ಯೂಷನ್ ಮುಖ್ಯಸ್ಥ ಮತ್ತು ಅಡ್ವೊಕೇಟ್ ಜನರಲ್ ಡಾ. ಅಲಿ ಹುಮೈದ್ ಬಿನ್ ಖಾತಮ್ ಆಗ್ರಹಿಸಿದರು. ಕಳೆದ ವಾರ ದುಬೈನಲ್ಲಿ ನಡೆದ ವಾಣಿಜ್ಯೋದ್ಯಮಿ ಸಮಾವೇಶದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ವಿಸಿಟಿಂಗ್ ವೀಸಾದಲ್ಲಿ ಬರುವವರಿಗೆ ದೇಶದಲ್ಲಿ ಕೆಲಸ ಮಾಡಲು ಅವಕಾಶ ನೀಡಿದಲ್ಲಿ, ಕಂಪನಿಗಳಿಗೆ, ಉದ್ಯೋಗದಾತರಿಗೆ ಮತ್ತು ದೇಶಕ್ಕೆ ಸಮಾನವಾಗಿ ಅನುಕೂಲವಾಗುತ್ತದೆ ಎಂದು ಅವರು ಹೇಳುತ್ತಾರೆ. ನುರಿತ ಕೆಲಸಗಾರರನ್ನು ಪತ್ತೆಹಚ್ಚಲು ಕಂಪನಿಗಳು ಹೆಣಗಾಡುತ್ತಿವೆ. ಅನೇಕ ಸಂದರ್ಶಕರು ಯುಎಇಯಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂದರ್ಶಕ ವೀಸಾದಲ್ಲಿ ಆಗಮಿಸುವವರಿಗೆ ಕೆಲಸ ಮಾಡಲು ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಬೇಕು ಎಂದರು.

ಪ್ರಸ್ತುತ ಅನುಮತಿಯಿಲ್ಲ

ಪ್ರಸ್ತುತ, ಉದ್ಯೋಗ ವೀಸಾದಲ್ಲಿ ಬರುವವರಿಗೆ ಮಾತ್ರ ಯುಎಇಯಲ್ಲಿ ಕೆಲಸ ಮಾಡಲು ಅವಕಾಶವಿದೆ. ಸಂದರ್ಶಕರ ವೀಸಾದಲ್ಲಿ ಉದ್ಯೋಗ ಮಾಡಿದ್ದಲ್ಲಿ, ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರಿಗೂ ಕಾನೂನಿನ ಮೂಲಕ ದಂಡ ವಿಧಿಸಲಾಗುತ್ತದೆ. ದಂಡವು 50,000 ದಿರ್ಹಮ್‌ಗಳವರೆಗೆ ಇರುತ್ತದೆ. ಅಂದರೆ ಸುಮಾರು 11 ಲಕ್ಷ ರೂ.

error: Content is protected !! Not allowed copy content from janadhvani.com