ರಿಯಾದ್: ಪೈಲೆಟ್ ರಹಿತ ವಿಮಾನದ ಮೂಲಕ ಸೌದಿ ಅರೇಬಿಯಾದ ಅಬಹ ದೇಶೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಯತ್ನಿಸಲಾಗಿದೆ.
ಯೆಮೆನ್‌ನ ಹೂತಿ ಬಂಡುಕೋರರ ನಿಯಂತ್ರಣದ ಡ್ರೋನ್ ವಿರುದ್ಧ ಸೌದಿ ಪ್ರತಿ ದಾಳಿ ನಡೆಸಿದೆ.ನಿಯಂತ್ರಣ ಕಳೆದುಕೊಂಡ ಡ್ರೋನ್ ವಿಮಾನ ನಿಲ್ದಾಣದ ಸಮೀಪ ನೆಲಕ್ಕೆ ಅಪ್ಪಳಿಸಿದೆ.
ಮಧ್ಯಾಹ್ನ ಹೊತ್ತಲ್ಲಿ ಡ್ರೊನ್ ಅಬಹ ವಿಮಾನನಿಲ್ದಾಣದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ.ತಕ್ಷಣ, ಡ್ರೋನ್‌ನ ವಿರುದ್ದ ಸೌದಿ ರಕ್ಷಣಾ ಪಡೆಯು ದಾಳಿ ನಡೆಸಿ,ಸೆಕೆಂಡುಗಳ ಒಳಗಾಗಿ ಡ್ರೋನ್ ನ್ನು ನೆಲಕ್ಕೆ ಉರುಳಿಸಿದೆ.ಅಬಹದಲ್ಲಿ ಇದು ಎರಡನೇ ಬಾರಿಗೆ ಡ್ರೋನ್ ದಾಳಿ ನಡೆದಿದೆ.ಖಾಸಿಫ್ ಅಬಾಬೀಲ್ ವಿಭಾಗಕ್ಕೆ ಸೇರಿದ ಡ್ರೋನ್ ಇದಾಗಿದೆ ಎಂದು ಅವಶೇಷಗಳನ್ನು ಪರಿಶೋಧನೆ ನಡೆಸಿದ ಮೈತ್ರಿಸೇನೆ ಹೇಳಿಕೊಂಡಿದೆ.
ಮೈತ್ರಿಸೇನೆಯ ವಕ್ತಾರರಾದ ಕರ್ನಲ್ ತುರ್ಕಿ ಅಲ್-ಮಾಲಿಕಿ ಮಾತನಾಡಿ, ಇರಾನ್ ನಿರ್ಮಿತ ಡ್ರೋನ್ ಅನ್ನು ಹೂತಿಗಳು ಬಳಸಿದ್ದಾನೆ ಎಂದು ದೃಢಪಡಿಸಿದ್ದಾರೆ.ಇರಾನ್ ನಿಂದ ತಂದ ಡ್ರೋನ್ ನಿನ ಬಿಡಿಭಾಗಗಳನ್ನು ಯಮನ್ ನಲ್ಲಿರುವ ಹೂತಿ ಗಳ ಭದ್ರಕೋಟೆಯಾದ ಸಅದಾದಲ್ಲಿ ಜೋಡಿಸಲಾಗುತ್ತದೆ.
ಹೂತಿ ಭಯೋತ್ಪಾದಕರು ಸೌದಿ ಅರೇಬಿಯಾದ ನಿವಾಸಿಗಳು ಮತ್ತು ವಿದೇಶಿಯರಿಗೆ ಗಂಭೀರ ಬೆದರಿಕೆಯನ್ನು ಸೃಷ್ಟಿಸುತ್ತಿದ್ದಾರೆ.ದೇಶದ ಸಂಪನ್ಮೂಲಗಳು ಮತ್ತು ಸೌಲಭ್ಯಗಳನ್ನು ನಾಶ ಮಾಡುವುದು ಹೂತಿಗಳ ಗುರಿಯಾಗಿದೆ.
ಇದರ ವಿರುದ್ದ ತಕ್ಕ ಉತ್ತರವನ್ನು ನೀಡಲಾಗುವುದು ಎಂದು ಕರ್ನಲ್ ತುರ್ಕಿ ಅಲ್ ಮಾಲಿಕಿ ಎಚ್ಚರಿಸಿದ್ದಾರೆ.