ದುಬೈ: ದುಬೈ ನಾಗರಿಕ ವಾಯುಯಾನ ಪ್ರಾಧಿಕಾರ ಹೊರಡಿಸಿದ ಕರಡುಪ್ರತಿ ಘೋಷಣೆಯು ಅನಿವಾಸಿಗಳಿಗೆ ಅನುಗ್ರಹವಾಗಿ ಪರಿಣಮಿಸಲಿದೆ.
ಟಿಕೆಟ್ ರದ್ದುಗೊಳಿಸುವಿಕೆಯ ಶುಲ್ಕ, ಕನೆಕ್ಟಿಂಗ್ ವಿಮಾನಗಳು ನಷ್ಟ ಪಟ್ಟರೆ ಉಂಟಾಗಲಿರುವ ನಷ್ಟ ಪರಿಹಾರ,ವಿಮಾನಗಳ Wi-Fi ಸೌಲಭ್ಯ ಮುಂತಾದವುಗಳನ್ನು ವ್ಯಕ್ತಪಡಿಸಿ ಮೊದಲನೇ ಕರಡುಪ್ರತಿಯನ್ನು ತಯಾರಿಸಲಾಗಿದೆ. ಸಚಿವ ಸಂಪುಟ ಅನುಮೋದನೆ ನೀಡಿದ ನಂತರ ಅವು ಜಾರಿಗೆ ಬರಲಿವೆ.
ನಿಗದಿತ ಸಮಯಕ್ಕಿಂತ 24 ಗಂಟೆಗಳ ಕಾಲ ವಿಮಾನ ವಿಳಂಬವಾಗುವುದಾಗಿ ತಿಳಿಸಿದರೆ ಅಥವಾ ವಿಮಾನವು ನಾಲ್ಕು ಗಂಟೆಗಳ ಕಾಲ ತಡವಾದರೆ ಸಂಪೂರ್ಣ ಟಿಕೆಟ್ ದರವನ್ನು ಮರುಪಾವತಿಸಬೇಕು.
ಎರಡು ವಾರಗಳ ಮುಂಚಿತವಾಗಿ ಇಲ್ಲವೇ 24 ಗಂಟೆಗಳ ಮುಂಚೆ ವಿಮಾನ ನಿರ್ಗಮನವನ್ನು ರದ್ದು ಮಾಡಿರುವುದಾಗಿ ತಿಳಿಸಿದರೆ, ಕಾದಿರಿಸಿದ ಸಮಯಕ್ಕಿಂತ ಎರಡು ಗಂಟೆಗಳ ಒಳಗಾಗಿ ಇತರ ವಿಮಾನದಲ್ಲಿ ಆಸನ ಒದಗಿಸಿ ಕೊಡಬೇಕು , ಗ್ರಾಹಕ ಸಮ್ಮತಿಸಿದ್ದಲ್ಲಿ ಟಿಕೆಟ್ ದರವನ್ನು ಮರು ಪಾವತಿಸ ಬೇಕು.
ವಿಮಾನವು ಮರುದಿನ ಹೊರಡುವುದಿದ್ದರೆ, ಏರ್ಲೈನ್ಸ್ ಉಚಿತ ಹೊಟೆಲ್ ವ್ಯವಸ್ಥೆಯನ್ನು ಒದಗಿಸಬೇಕು ಮತ್ತು ಕನೆಕ್ಟಿಂಗ್ ವಿಮಾನಗಳ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಕರಡುಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಮೂರು ಗಂಟೆಗಳಿಗಿಂತ ವಿಳಂಬವಾದರೆ ರೂ 5,000, ನಾಲ್ಕು ಗಂಟೆಯಿಂದ 12 ಗಂಟೆಗಳ ವಿಳಂಬಕ್ಕೆ ರೂ 10,000, ರೂ. 12 ಗಂಟೆಗಿಂತಲೂ ಹೆಚ್ಚು ವಿಳಂಬವಾದರೆ 20,000 ರೂ.ಗಳನ್ನು ಕಂಪನಿಯು ಪಾವತಿಸಬೇಕು.
ಅಂಗವಿಕಲ ಪ್ರಯಾಣಿಕರಿಗೆ ತನ್ನ ಮತ್ತು ಎದುರಿನ ಸೀಟ್ ನಡುವೆ ಹೆಚ್ಚು ಅಗಲ ಇರುವ ಆಸನ ನೀಡಬೇಕು ಎಂಬುದನ್ನು ಕರಡಿನಲ್ಲಿ ಉಲ್ಲೇಖಿಸಲಾಗಿದೆ.
ಟಿಕೆಟ್ ಖರೀದಿಸಿ 24 ಗಂಟೆಗಳ ಒಳಗೆ ಹೆಸರು ಬದಲಾಯಿಸಲು ಹೆಚ್ಚುವರಿ ಶುಲ್ಕ ವಸೂಲು ಮಾಡುವಂತಿಲ್ಲ.
ಕರಡುಪ್ರತಿಗೆ ಮುಂದಿನ ಮಂತ್ರಿಮಂಡಲದ ಸಭೆಯಲ್ಲಿ ಅನುಮೋದನೆ ದೊರೆಯಲಿದೆ ಎನ್ನಲಾಗಿದೆ .ಒಟ್ಟಿನಲ್ಲಿ ಅನಿವಾಸಿಗಳ ಸಮೇತ ವಿಮಾನಯಾತ್ರಿಕರಿಗೆ ಉತ್ತಮವಾದ ನಿರ್ದೇಶಗಳು ಕರಡಿನಲ್ಲಿ ಅಡಕವಾಗಿದೆ ಎನ್ನಲಾಗಿದೆ.