ಪರಂಪರೆಯ ಪ್ರತಿನಿಧಿಗಳಾಗೋಣ ಎಂಬ ದ್ಯೇಯ ವಾಕ್ಯದಲ್ಲಿ ಕರುನಾಡ ಮಣ್ಣು ಮಂಗಳೂರಲ್ಲಿ ಜನವರಿ 24ರಂದು ನಡೆಯುವ ಸುನ್ನೀ ಯುವಜನ ಸಂಘ (S Y S) ಇದರ 30 ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರ ಸಭೆಯು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಅಲ್ ಖಸೀಂ ಝೋನಿನ ವತಿಯಿಂದ ಬುರೈದಾದ ದಾರುಲ್ ಖ್ಯೆರ್ ನಲ್ಲಿ ಡಿಸೆಂಬರ್ 29 ನೇ ಶುಕ್ರವಾರ ನಡೆಯಿತು
ಎಸ್ ವೈ ಎಸ್ ಕರ್ನಾಟಕ ರಾಜ್ಯ ನೇತಾರ ಸೈಯದ್ ಇಲ್ಯಾಸ್ ತಂಙಲ್ ಎಮ್ಮೆಮಾಡುರವರ ದುವಾದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು ಕೆ, ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಾದ ಯಾಕೂಬ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಕೆ, ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಉದ್ಘಾಟಿಸಿದರು
ಎಸ್ ವೈ ಎಸ್ ನ ಮೂವತ್ತು ವರ್ಷಗಳ ಏಳಿಗೆ ಹಾಗೂ ಸಂಘಟನೆಯ ಬೆಳವಣಿಗೆಗೆ ಹೊಸ ದಾರಿಗಳ ಬಗ್ಗೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ಎಸ್ ವೈ ಎಸ್ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಬಶೀರ್ ಸಅದಿ ಬೆಂಗಳೂರು ಉಸ್ತಾದರವರು ಸವಿವರವಾಗಿ ವಿವರಿಸಿದರು
ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಇಹ್ಸಾನ್ ಇಲಾಖೆ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಕಣ್ಣಂಗಾರ್, ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ನೇತಾರ ಸಿದ್ದೀಕ್ ಸಖಾಫಿ ಪೆರುವಾಯಿ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು
ಬುರೈದ ಸೆಕ್ಟರ್ ಅಧ್ಯಕ್ಷರಾದ ಮುಸ್ತಫಾ ಲತೀಫಿ ಸ್ವಾಗತಿಸಿ ಝೋನ್ ಕಾರ್ಯದರ್ಶಿ ಬಶೀರ್ ಕನ್ಯಾನ ವಂದಿಸಿದರು.