janadhvani

Kannada Online News Paper

ಒಮಾನ್: ‘ಮೆಕುನು’ ಚಂಡಮಾರುತ-ವಿಮಾನ ನಿಲ್ದಾಣ ಬಂದ್,ನಾಗರಿಕರ ಸ್ಥಳಾಂತರ

ಒಮಾನ್: ತೈಲ ಸಮೃದ್ಧಿಯ ಒಮಾನ್ ದೇಶದಲ್ಲಿ ‘ಮೆಕ್ನು’ ಹೆಸರಿನ ಚಂಡಮಾರುತದ ರುದ್ರ ನರ್ತನ ಪ್ರಾರಂಭಗೊಂಡಿದ್ದು ಸಲಲಾಹ್ ಪಟ್ಟಣದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಈ ಪಟ್ಟಣದ ಸಮುದ್ರಬಾಗದಲ್ಲಿಯೇ ಚಂಡಮಾರುತದ ಕೇಂದ್ರಬಿಂದು ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಲಾಲ ಅಂತಾರಾಷ್ಟ್ರ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.

ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು , ಇವರಲ್ಲಿ 40 ಸಾವಿರ ಭಾರತೀಯರೂ ಸೇರಿದ್ದಾರೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳ ವರದಿಗಳನ್ನಾಧರಿಸಿ ಮೂಲಗಳು ತಿಳಿಸಿವೆ.

ಒಮಾನ್ ದೇಶದ ಎರಡನೇ ಅತೀದೊಡ್ಡ ನಗರವಾಗಿರುವ ಸಲಾಲಹ್ ನಲ್ಲಿ ಸುಮಾರು 2ಲಕ್ಷ ಜನರು ವಾಸವಿದ್ದಾರೆ. ಈಗಾಗಲೇ ಈ ಭಾಗದ ಸಮುದ್ರ ಪ್ರಕ್ಷುಬ್ಧವಾಗಿದ್ದು ಸುಮಾರು 13 ರಿಂದ 14 ಮೀಟರ್ ಎತ್ತರದ ಅಲೆಗಳು ಏಳಲಾರಂಭಿಸಿವೆ.

ಸಹಾಯವಾಣಿ: ತುರ್ತು ಸಂದರ್ಭದಲ್ಲಿ ಅವಶ್ಯವಿದ್ದಲ್ಲಿ ಸಲಲಾದಲ್ಲಿರುವ ಭಾರತೀಯ ಪ್ರಜೆಗಳು ಮನ್‌ಪ್ರೀತ್‌ ಸಿಂಗ್‌ (ಮೊಬೈಲ್‌-99498939) ಅವರನ್ನು ಸಂಪರ್ಕಿಸಬಹುದು ಎಂದು ಒಮಾನ್‌ ನ ಭಾರತೀಯ ದೂತವಾಸ ಟ್ವೀಟ್‌ ಮಾಡಿ ತಿಳಿಸಿದೆ.

ತುರ್ತು ಸಂಪರ್ಕಕ್ಕೆ 24 ಗಂಟೆಗಳ Help Line ಕೂಡ ತೆರೆಯಲಾಗಿದೆ. Help Line ಸಂಖ್ಯೆ- 0096824695981, ಟೋಲ್‌ ಫ್ರಿ ಸಂಖ್ಯೆ- 80071234.

error: Content is protected !! Not allowed copy content from janadhvani.com