janadhvani

Kannada Online News Paper

ಆಯಿಷಾ – ಕರಾವಳಿಯ ಪ್ರಥಮ ಮುಸ್ಲಿಂ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್

ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಮುಸ್ಲಿಮ್ ಆರೋಗ್ಯ ನಿರೀಕ್ಷಕಿ (Health Inspector) ಎಂಬ ಹೆಗ್ಗಳಿಕೆಗೆ ಕರಾವಳಿಯ ಪ್ರತಿಭಾನ್ವಿತ ಯುವತಿಯಾದ ಆಯಿಷಾ ಪಾತ್ರರಾಗಿದ್ದಾರೆ.

ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ ವಾಸವಿರುವ  ಅಬ್ದುಲ್ ರಝಾಕ್ ಮತ್ತು ರುಕ್ಯಾರವರ ಪುತ್ರಿಯಾಗಿರುವ ಆಯಿಷಾ, ಚಿಕ್ಕಂದಿನಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಬೆಳೆದು ತನ್ನ ಹೈಸ್ಕೂಲ್ ಮತ್ತು ಪಿಯುಸಿ ಯನ್ನು  ಶ್ರೀ ರಾಮಚಂದ್ರ ಪದವಿಪೂರ್ವ ಕಾಲೇಜು ಪೆರ್ನೆಯಲ್ಲಿ ವ್ಯಾಸಾಂಗ ಮಾಡಿ. BA POLITICAL SCIENCE ನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯಲ್ಲಿ ಪೂರ್ತೀಕರಿಸಿದರು .ನಂತರ  ಮಂಗಳಾ ಕಾಲೇಜು ಆಫ್ ಪ್ಯಾರಾ ಮೆಡಿಕಲ್ ಸಯನ್ಸಸ್ , ಮಂಗಳೂರು ಈ ಸಂಸ್ಥೆಯಲ್ಲಿ’ DIPLOMA IN HEALTH INSPECTOR ‘ ಕೋರ್ಸ್‌ನ್ನು 2016 ರಲ್ಲಿ ಪೂರ್ತಿಗೊಳಿಸಿದರು. ಮತ್ತೆ 2017 ರಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜು ಕಮ್ಯುನಿಟಿ ಮೆಡಿಸಿನ್ ಡಿಪಾರ್ಟ್ಮೆಂಟ್ ನಲ್ಲಿ  ಹೆಲ್ತ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡರು.

ಇದೀಗ ಒಂದು ವರ್ಷದಿಂದ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಈ ಸಾಧನೆಯು ನಮ್ಮ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ  ಪ್ರೇರಣೆಯಾಗಿದೆ. ಅಲ್ಲದೆ ಊರಿಗೆ ಉತ್ತಮ ಹೆಸರು ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಾಧನೆಯನ್ನು ಮೆಚ್ಚಿ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !! Not allowed copy content from janadhvani.com