janadhvani

Kannada Online News Paper

ನಗರದ ಕಂಜೂಲ್ ಇಮಾನ್ ನಲ್ಲಿ ಮಿಲಾದ್ ಆಚರಣೆ

ಚಿಕ್ಕಮಗಳೂರು ನಗರದ ಉಪ್ಪಳ್ಳಿಯಲ್ಲಿರುವ ಜಿಲ್ಲೆಯ ಪ್ರತಿಷ್ಠಿತ ಶೈಕ್ಷಣಿಕ ಮತ್ತು ಧಾರ್ಮಿಕ ಸುನ್ನಿ ಸಂಸ್ಥೆಯಾದ ಜಾಮಿಯಾ ಅರೇಬಿಯಾ ಕಂಜುಲ್ ಇಮಾನ್ ನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹಾಗು ಚಿಕ್ಕಮಗಳೂರು ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷರೂ ಅಲ್ ಹಾಜ್ ಮೊಹಮ್ಮದ್ ಶಾಹಿದ್ ರಜ್ವಿ ರವರ ಅಧ್ಯಕ್ಷತೆಯಲ್ಲಿ ಈದ್ ಮಿಲಾದ್ ಪ್ರಯುಕ್ತ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮ ದಿನೋತ್ಸವದ ಅಂಗವಾಗಿ ದಿನಾಂಕ 25/09/2023 ರಿಂದ 27/09/2023 ರವರೆಗೆ 3 ದಿನಗಳ ಮೀಲಾದ್ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ *ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ* ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಈ ಕಾರ್ಯಕ್ರಮದಲ್ಲಿ ಸುನ್ನಿ ವಿದ್ವಾಂಸರು ಧಾರ್ಮಿಕ ಮುಖಂಡರು ಸಾಮಾಜಿಕ ಕಾರ್ಯಕರ್ತರು ಮತ್ತು ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ ಹಾಗು ಧಾರ್ಮಿಕ ಗುರುಗಳು ಪ್ರವಚನ ಮಾಡಲಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಜ್ವಿ ರವರು ಸಂಸ್ಥೆಯ ಅಧೀನದಲ್ಲಿರುವ ಮಸೀದಿಯನ್ನು ಸುಂದರವಾದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ಆಗಮಿಸುವ ಭಕ್ತಾದಗಳಿಗೆ ಸಕಲ ಸೌಲಭ್ಯಗಳನ್ನು ಒದಗಿಸಲು ಭರದಿಂದ ಸಿದ್ದತೆ ನಡಸಲಾಗಿದೆ ಎನ್ನಲಾಗಿದೆ ಪ್ರತಿ ದಿನದ ಕಾರ್ಯಕ್ರಮದ ನಂತರ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಲಾಗಿದೆ.

ಧಾರ್ಮಿಕ ವಿದ್ವಾಂಸರಿಂದ ಪ್ರವಾದಿಯವರ ಆದರ್ಶಗಳೊಂದಿಗೆ ವಿಶ್ವಶಾಂತಿಗಾಗಿ ಮನುಕುಲದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಶಾಂತಿ ನೆಲೆಸಲು ವಿಶೇಷ ಪ್ರಾರ್ಥನೆ ಮಾಡಲಾಗುವುದು ಹಾಗು ದಿನಾಂಕ 29/09/2023 ರ ಶುಕ್ರವಾರ ನಮಾಜಿನ ನಂತರ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಪವಿತ್ರ ಕೇಶ ಮತ್ತು ಮಕ್ಕಾದಿಂದ ಲಭಿಸಿರುವ ಪವಿತ್ರ ಕಾಬಾದ ಪವಿತ್ರ ಚಾದರವನ್ನು ಸಾರ್ವಜನಿಕವಾಗಿ ಪ್ರದರ್ಶನದ ಮೂಲಕ ಭಕ್ತಿಪೂರವಕವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ ಅದೇ ದಿನ ಮಹಿಳೆಯರಿಗೆ ವಿಶೇಷವಾಗಿ ದರ್ಶನ ಮಾಡಲು ಪ್ರತ್ಯೇಕ
ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.

error: Content is protected !! Not allowed copy content from janadhvani.com