ಮಜೂರು, ಸೆಪ್ಟಂಬರ್ 23: ಲೋಕಾನುಗ್ರಹಿ ಶಾಂತಿ, ಸಮಾನತೆ, ಸಹಬಾಳ್ವೆ, ಸಹಿಷ್ಣುತೆ ಪ್ರತಿಪಾದಕರು ಅಂತ್ಯ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ.) ರವರ ಜನ್ಮಾ ದಿನಾಚರಣೆ ಪ್ರಯುಕ್ತ ಮಲ್ಲಾರು – ಮಜೂರು ಬದ್ರಿಯ ಜುಮುಅ ಮಸ್ಜಿದ್ ಅಧೀನದಲ್ಲಿ ನಾಲ್ಕು ದಿನಗಳ (ಸೆಪ್ಟಂಬರ್ 25, 26, 27 & 28) ಮೆಹ್ಫಿಲೇ ಮೀಲಾದುನ್ನಬಿ ಕಾರ್ಯಕ್ರಮ ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ.
ಸೆಪ್ಟಂಬರ್ 25 ಸೋಮವಾರ ಸಯ್ಯಿದ್ ಕಾಜೂರು ತಂಙಳ್ ನೇತೃತ್ವದಲ್ಲಿ ಸ್ವಲಾತ್ & ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್ ವಾರ್ಷಿಕ ನಡೆಯಲಿದ್ದು, ಚಂದ್ರನಗರ ಖತೀಬರಾದ ಮುಹಮ್ಮದ್ ಮುಸ್ತಫ ಸಖಾಫಿ ಉದ್ಘಾಟಿಸಲಿದ್ದಾರೆ.
ಸೆಪ್ಟಂಬರ್ 26 ಮಂಗಳವಾರ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ವೈವಿಧ್ಯಮಯ ಕಾರ್ಯಕ್ರಮ ಕೊಂಬಗುಡ್ಡೆ ಇಮಾಮ್ ಸಿದ್ದೀಖ್ ಸಅದಿ ಉದ್ಘಾಟಿಸಲಿದ್ದು, ಬದ್ರಿಯ ಜುಮುಅ ಮಸ್ಜಿದ್ ಖತೀಬರಾದ ಎಂ.ಕೆ. ಅಬ್ದುರ್ರಶೀದ್ ಸಖಾಫಿ, ಅಲ್ – ಕಾಮಿಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸೆಪ್ಟಂಬರ್ 27 ಬುಧವಾರ ಮೆಹ್ಫಿಲೇ ಮೀಲಾದುನ್ನಬಿ ಹಾಗೂ ಸಿರಾಜುಲ್ ಹುದಾ ದಫ್ ತಂಡದಿಂದ ದಫ್ ಪ್ರದರ್ಶನ ಜಮಾಅತ್ ಉಪ ಖತೀಬರಾದ ಅಬೂಬಕರ್ ಸಿದ್ದೀಖ್ ಸಅದಿ ಉದ್ಘಾಟಿಸಲಿದ್ದು, ಬದ್ರಿಯ ಜುಮುಅ ಮಸ್ಜಿದ್ ಅಧ್ಯಕ್ಷರಾದ ಶಅಬಾನ್ ಕರಂದಾಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸೆಪ್ಟಂಬರ್ 28 ಗುರುವಾರ ಸುಬುಹಿ ನಮಾಝಿನ ಬಳಿಕ ಮೌಲೀದ್ ಮಜ್ಲಿಸ್, ಬೆಳಿಗ್ಗೆ 07:30ಕ್ಕೆ ಧ್ವಜಾರೋಹಣ 07:45ರಿಂದ ಸ್ನೇಹ ಸಂದೇಶ ಈದ್ ಮಿಲಾದ್ ಜಾಥಾ ಹಾಗೂ ಮಧ್ಯಾಹ್ನ 01 ಗಂಟೆಯಿಂದ ಊಟೋಪಚಾರ ಕಾರ್ಯಕ್ರಮ ನಡೆಯಲಿದ್ದು. ಸರ್ವರನ್ನೂ ಪ್ರೀತಿಯಿಂದ ಆಹ್ವಾನಿಸುತ್ತೇವೆ ಎಂದು ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಲ್ಲಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.