ಕುವೈಟ್ ಸಿಟಿ: ಜಗತ್ತು ಕಂಡ ಮಹಾನಾಯಕ ವಿಶ್ವ ಪ್ರವಾದಿ صلي الله عليه وسلم ಜನ್ಮದಿನದ ಅಂಗವಾಗಿ, ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ವತಿಯಿಂದ ಬೃಹತ್ ಮೀಲಾದ್ ಸಮ್ಮೇಳನವು ಸೆ.22 ರಂದು ಸಂಜೆ 5 ಗಂಟೆಗೆ ಅಬ್ಬಾಸಿಯ ಸೆಂಟ್ರಲ್ ಸ್ಕೂಲ್ನಲ್ಲಿ ನಡೆಯಲಿದೆ.
“ಜಗತ್ತಿಗೆ ಕರುಣೆಯ ಪ್ರವಾದಿ” ಎಂಬ ಘೋಷ ವಾಕ್ಯದೊಂದಿಗೆ ನಡೆಸಲ್ಪಡುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮದನೀಯಂ ಖ್ಯಾತಿಯ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಹಾಗೂ ನೆಚ್ಚಿನ ನಾಯಕ ಕರ್ನಾಟಕ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಭಾಗವಹಿಸಲಿರುವರು.
ಸಯ್ಯಿದ್ ಕುಟುಂಬದ ಧ್ರುವತಾರೆ ಸಯ್ಯಿದ್ ಹಬೀಬ್ ಕೋಯ ತಂಙಳ್ ಕುವೈಟ್ ದುವಾ ಆಶಿರ್ವಚನ ನೀಡಲಿರುವರು.