ರಿಯಾದ್: ರಸ್ತೆಗೆ ಅಭಿಮುಖವಾಗಿರುವ ಕಟ್ಟಡಗಳ ಬಾಲ್ಕನಿಗಳಲ್ಲಿ ಬಟ್ಟೆಗಳನ್ನು ಒಣಗಿಸಬೇಡಿ ಎಂದು ಸೌದಿ ಮುನ್ಸಿಪಲ್-ಗ್ರಾಮೀಣ ವ್ಯವಹಾರಗಳು ಮತ್ತು ವಸತಿ ಸಚಿವಾಲಯ ಎಚ್ಚರಿಸಿದೆ.
ಇದಲ್ಲದೆ, ಕಟ್ಟಡದ ಗೋಡೆಗಳ ಮೇಲೆ ಟಿವಿ ಆಂಟೆನಾಗಳು, ಜಾಹೀರಾತು ಸ್ಟಿಕ್ಕರ್‌ಗಳು ಮತ್ತು ಬೋರ್ಡ್‌ಗಳನ್ನು ಅಳವಡಿಸಿ ಸೌಂದರ್ಯವನ್ನು ಹಾಳು ಮಾಡದಂತೆ ಸಚಿವಾಲಯವು ದೇಶದ ಕಟ್ಟಡ ಮಾಲೀಕರಿಗೆ ಆದೇಶಿಸಿದೆ. ಈ ರೀತಿ ಕಲ್ಮಶ ಗೊಂಡಿರುವ ಕಟ್ಟಡಗಳನ್ನು ಮುಂದಿನ ವರ್ಷ ಫೆಬ್ರುವರಿ 18ರೊಳಗೆ ಇದೆಲ್ಲವನ್ನು ತೆಗೆದು, ಕಟ್ಟಡಗಳನ್ನು ಸುಂದರಗೊಳಿಸಬೇಕು ಮತ್ತು ಬಿಲ್ಡಿಂಗ್ ಕೋಡ್ ಅನುಸರಣೆ ಪ್ರಮಾಣಪತ್ರವನ್ನು ಪಡೆಯಬೇಕು ಎಂದು ಸಚಿವಾಲಯ ಸೂಚಿಸಿದೆ.
ಇದು, ಸೌದಿ ನಗರಗಳ ದೃಶ್ಯ ಸೌಂದರ್ಯವನ್ನು ಹೆಚ್ಚಿಸಲು, ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಆರೋಗ್ಯಕರ ನಗರ ಪರಿಸರವನ್ನು ಸೃಷ್ಟಿಸಲು ಹೊಸ ವ್ಯವಸ್ಥೆಯಾಗಿದೆ ಎಂದು ಸಚಿವಾಲಯ ವಿವರಿಸಿದೆ. ಸಚಿವಾಲಯದ ‘ಬಲದೀ’ ವೆಬ್‌ಸೈಟ್ ಮೂಲಕ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕು. ಹೊಸ ಕಟ್ಟಡಗಳು ನಿರ್ಮಾಣ ಪೂರ್ಣಗೊಂಡ ನಂತರ ಈ ಪ್ರಮಾಣಪತ್ರವನ್ನು ಪಡೆಯಬಹುದು, ಆದರೆ ಹಳೆಯ ಕಟ್ಟಡಗಳು 19 ಉಲ್ಲಂಘನೆಗಳನ್ನು ತೆರವುಗೊಳಿಸಿದರೆ ಮಾತ್ರ ಪ್ರಮಾಣ ಪತ್ರ ಪಡೆಯಲು ಸಾಧ್ಯ.
- ವಿಕಲಚೇತನರಿಗೆ ಸುಲಭ ಪ್ರವೇಶವಿಲ್ಲದ ಕಟ್ಟಡ.
- ರಸ್ತೆ ಬದಿಯ ಕಟ್ಟಡದ ಮುಂಭಾಗದಲ್ಲಿ ವಿದ್ಯುತ್ ಕೇಬಲ್‌ಗಳು, ಎಸಿ ಘಟಕಗಳು, ಜಾಹೀರಾತು ಪೋಸ್ಟರ್‌ಗಳು ಮತ್ತು ಗೀಚುಬರಹಗಳನ್ನು ಹೊಂದಿರುವುದು.
- ರಸ್ತೆಯ ಬಾಲ್ಕನಿಗಳಲ್ಲಿ ಹ್ಯಾಂಗರ್‌ಗಳು ಮತ್ತು ಆಂಟೆನಾಗಳನ್ನು ಅಳವಡಿಸುವುದು.
- ನೆಲಮಾಳಿಗೆಯಲ್ಲಿ ಅಕ್ರಮವಾಗಿ ವಾಹನ ನಿಲುಗಡೆ ಸೌಲಭ್ಯಗಳನ್ನು ಒದಗಿಸುವುದು.
- ಕಟ್ಟಡ, ಬಾಲ್ಕನಿಗಳಲ್ಲಿ ಬಟ್ಟೆಗಳನ್ನು ಒಣಗಿಸುವುದು.
- ಹೊರಗಿನಿಂದ ಕಾಣದಂತೆ ಬಾಲ್ಕನಿಗೆ ಹೊದಿಕೆ ಹಾಕುವುದು.
- ಗೋಡೆಗಳ ಮೇಲೆ ದೋಷಪೂರಿತ ಹೊದಿಕೆಗಳನ್ನು ಇಡುವುದು.
- ಒಳಚರಂಡಿ ವ್ಯವಸ್ಥೆಯನ್ನು ಅಜಾಗರೂಕತೆಯಿಂದ ತೆರೆದಿರುವುದು.
- ಬಿರುಕು ಬಿಟ್ಟ ಮಹಡಿಗಳು.
- ಬಣ್ಣ ಸಿಪ್ಪೆಸುಲಿಯುವುದು ಅಥವಾ ಕಬ್ಬಿಣದ ಹಾಳೆಗಳಲ್ಲಿ ತುಕ್ಕು.
- ಅಪೂರ್ಣ ಅಥವಾ ಶಿಥಿಲಗೊಂಡ ಗೋಡೆಗಳು.
- ಕಟ್ಟಡದ ಮುಂದೆ ಅಡುಗೆಮನೆಯ ಚಿಮಣಿಗಳನ್ನು ಸ್ಥಾಪಿಸುವುದು ಮುಂತಾದ ಉಲ್ಲಂಘನೆಗಳನ್ನು ತಕ್ಷಣವೇ ತೆರವುಗೊಳಿಸಬೇಕು.