ಅಬುಧಾಬಿ: ಸಂಯುಕ್ತ ಅರಬ್ ಎಮಿರೇಟ್ಸ್ ಸರ್ಕಾರದ ಅಧೀನದಲ್ಲಿ ಅಬುಧಾಬಿಯಲ್ಲಿ ನಡೆದ ಅಂತರಾಷ್ಟ್ರೀಯ ಅಲ್ಪಸಂಖ್ಯಾತ ಸಮ್ಮೇಳನಕ್ಕೆ ಪ್ರೌಡೋಜ್ವಲ ಸಮಾಪ್ತಿ.
ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸಹಿಷ್ಣುತಾ ಖಾತೆಯ ಸಚಿವರಾದ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರ ನೇತೃತ್ವದಲ್ಲಿ ನಡೆದ ಕಾನ್ಫರೆನ್ಸ್, ಹನ್ನೊಂದು ಸೆಷನ್ಸ್ ಗಳಲ್ಲಿ ಆಯೋಜಿಸಿಲಾಗಿತ್ತು. 140 ದೇಶಗಳ 550 ಪ್ರಮುಖ ವ್ಯಕ್ತಿಗಳನ್ನು ಹಾಜರಿದ್ದರು.
ವೆನಿಜುಲಾ, ವಿಯೆಟ್ನಾಂ ಮುಂತಾದ ಮುಸ್ಲಿಮರು ತೀರಾ ಸಣ್ಣ ಸಣ್ಣಪ್ರಮಾನದಲ್ಲಿರುವ ದೇಶಗಳ ಪ್ರತಿನಿಧಿಗಳಿಂದ ಹಿಡಿದು. ವಿಶ್ವಸಂಸ್ಥೆಯ ಉನ್ನತ ಹುದ್ದೆಗಳ ಸಾರಥ್ಯ ವಹಿಸುವವರು, ಅಂತಾರಾಷ್ಟ್ರೀಯ ಮುಸ್ಲಿಂ ವಿದ್ವಾಂಸರು, ಬುದ್ಧಿಜೀವಿಗಳು ಬೌದ್ಧ, ಕ್ರಿಶ್ಚಿಯನ್ ಧರ್ಮ ನಾಯಕರು, ವಿವಿಧ ಸರಕಾರೀ ಅಧಿಕೃತ ವಕ್ತಾರರ ಸಹಭಾಗಿತ್ವದಿಂದಾಗಿ ಹಲವು ರೀತಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕಾರ್ಯಾಚರಿಸುವವರ ಒಕ್ಕೂಟವಾಗಿ ಕಾನ್ಫರನ್ಸ್ ಪರಿಣಮಿಸಿತು.
ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಗಾಗಿ ವಿಶೇಷ ಅಂತಾರಾಷ್ಟ್ರೀಯ ಚಾರ್ಟರ್ ನ್ನು ಸಮ್ಮೇಳನದಲ್ಲಿ ರಚಿಸಲಾಯ್ತು.ಅಲ್ಪಸಂಖ್ಯಾತರು ವಿಶ್ವದಾದ್ಯಂತ ವಿವಿಧ ಭಾಗಗಳಲ್ಲಿ ಹಲವು ರೀತಿಯ ಹಿಂಸೆಗಳನ್ನು ಎದುರಿಸುತ್ತಿದ್ದು ವಿಶ್ವ ಸಂಸ್ಥೆಯು ವಿಶೇಷವಾಗಿ ಪರಿಗಣಿಸುವಂತೆ ಚಾರ್ಟರ್ ಕೇಳಿಕೊಂಡಿದೆ.
14 ಅಧ್ಯಾಯಗಳನ್ನು ಪ್ರಕಟಿಸಲಾದ ಚಾರ್ಟರ್ ನಲ್ಲಿ ಅಬುಧಾಬಿ ಕೇಂದ್ರೀಕರಿಸಿ ಅಲ್ಪಸಂಖ್ಯಾತರ ಸಂರಕ್ಷಣೆಗಾಗಿ ರೂಪೀಕರಿಸಲ್ಪಟ್ಟ ವರ್ಲ್ಡ್ ಕೌನ್ಸಿಲ್ ಆಫ್ ಮುಸ್ಲಿಂ ಮೈನಾರಿಟಿ ಯ ಅಧೀನದಲ್ಲಿ ಈ ಸಮ್ಮೇಳನದ ಅಂಗವಾಗಿ ನಡೆಸಲಾಗುವ ವಿವಿಧ ಯೋಜನೆಗಳನ್ನು ವಿವರಿಸಲಾಗಿದೆ.ಮುಸ್ಲಿಮ್ ಅಲ್ಪಸಂಖ್ಯಾತರ ದೇಶಗಳಲ್ಲಿ ಅವರ ಸಮಸ್ಯೆ ಪರಿಹರಿಸಲು ಕೌನ್ಸಿಲ್ ಅಂತರರಾಷ್ಟ್ರೀಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎಲ್ಲ ರೀತಿಯ ಉಗ್ರಗಾಮಿ ಭಯೋತ್ಪಾದನೆಯನ್ನು ವಿರೋಧಿಸುತ್ತದೆ ಎಂದು ಚಾರ್ಟರ್ ಸೂಚಿಸುತ್ತವೆ.
ಇದರ ಜೊತೆಗೆ, ಅಲ್ಪಸಂಖ್ಯಾತ ಮುಸ್ಲಿಮರ ಬೌದ್ಧಿಕ ಮತ್ತು ಶೈಕ್ಷಣಿಕ ಉನ್ನತಿಯನ್ನು ಬಲಗೊಳಿಸಲು ಮತ್ತು ಇತರ ಸಮುದಾಯ ಸಂಘಟನೆಗಳೊಂದಿಗೆ ಸ್ನೇಹ ಬೆಳೆಸುವಂತೆ ಕ್ರಮ ಕೈಗೊಳ್ಳಲಾಗುವುದು.ಸಮ್ಮೇಳನದ ಮುಂದಿನ ನಡೆಯಾಗಿ ಕಾರ್ಯಾಗಾರಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಸಮಾರೋಪ ಸಮ್ಮೇಳನಕ್ಕೆ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ಡಾ. ಅಲಿ ರಾಶಿದ್ ಅಲ್ ನುಐಮಿ, ಡಾ. ಮುಹಮ್ಮದ್ ಬಚಾರಿ ನೇತೃತ್ವ ವಹಿಸಿದರು.