ಮಂಗಳೂರು: ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ರವಿವಾರ ನಡೆದಿದ್ದ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುವಂತೆ DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟನೆ ಹೊರಡಿಸಿರುವ ಅವರು, ” ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಬಿಜೆಪಿ ಪಾಲಿಕೆ ಸದಸ್ಯನ ಸಹೋದರನ ಸಹಿತ ಕೃತ್ಯದಲ್ಲಿ ಭಾಗಿಯಾದವರ ಬಂಧನ ನಡೆದಿದೆ. ಇದು ಯುವ (ನಮೋ) ಬ್ರಿಗೇಡ್ ಕಾರ್ಯಕರ್ತರ ನಡುವಿನ ಸಂಘರ್ಷ ಎಂಬುದು ದಿಟ.
ತನ್ನ ಸಂಘಟನೆಯ ಕಾರ್ಯಕರ್ತರ ಈ ಹೀನ ಕೃತ್ಯಕ್ಕೆ ಹೊಣೆ ಹೊರಬೇಕಾಗಿದ್ದ ಸೂಲಿಬೆಲೆ “ಹಿಂದುವಿನ ಕೊಲೆ ನಡೆದಿದೆ, ಕಾಂಗ್ರೆಸ್ ಆಡಳಿತದಲ್ಲಿ ಹಿಂದುಗಳು ಅಪಾಯಕ್ಕೆ ಗುರಿಯಾಗಿದ್ದಾರೆ” ಎಂದು ಬೊಬ್ಬೆ ಹೊಡೆಯಲು ತೊಡಗಿದ್ದರು.
ಆ ಮೂಲಕ ಕೊಲೆಗೆ ಮತೀಯ ಬಣ್ಣ ಬಳಿಯುವುದು, ಹಿಂದು ವಿರೋಧಿ ಸರಕಾರ ಎಂದು ಬಿಂಬಿಸುವುದು, ಅರಾಜಕತೆ ಸೃಷ್ಟಿಸುವುದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪೂರಕ ವಾತಾವರಣ ನಿರ್ಮಿಸುವುದು ಇವರ ಪ್ರಧಾನ ಉದ್ದೇಶ ಆಗಿತ್ತು” ಎಂದು ಮುನೀರ್ ದೂರಿದ್ದಾರೆ.
ಈಗ ಕೊಲೆಯ ಕಾರಣ ಪತ್ತೆಯಾಗಿದೆ. ಪ್ರಕರಣದ ಸರಿಯಾದ ತನಿಖೆ ನಡೆಯಬೇಕು. ಅದರ ಜೊತೆಗೆ ಕೊಲೆಗೆ ಕೋಮುಬಣ್ಣ ಹಚ್ಚಲು, ಧರ್ಮಗಳ ನಡುವೆ ಅಪನಂಬಿಕೆ ಹುಟ್ಟಿಸಲು, ಸರಕಾರದ ಮೇಲೆ ಧಾರ್ಮಿಕ ತಾರತಮ್ಯ ಕಳಂಕ ಹೊರಿಸಲು ಯತ್ನಿಸಿದ ಸೂಲಿಬೆಲೆಯ ಮೇಲೆ ಪ್ರಕರಣ ಹೂಡಬೇಕು, ಆತನನ್ನು ವಿಚಾರಣೆಗೆ ಒಳಪಡಿಸಬೇಕು. ಆತನ ಆಟಾಟೋಪಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಅನಗತ್ಯ ಗೊಂದಲಗಳಿಗೆ ಸೂಲಿಬೆಲೆ ಪಟಾಲಂ ಕಾರಣವಾಗಲಿದೆ” ಎಂದು ತಿಳಿಸಿದ್ದಾರೆ.
“ಪುನೀತ್ ಕೆರೆಹಳ್ಳಿಯಂತವರನ್ನು ಕೊಲೆಗೆ ಪ್ರಚೋದಿಸಿ, ಜಾಮೀನಿನ ಮೇಲೆ ಅವರು ಹೊರಬಂದ ತಕ್ಷಣ ಕರೆದು ಔತಣ ಕೂಟ ಏರ್ಪಡಿಸಿದ ಸಂದರ್ಭದಲ್ಲೇ ಈತನ ವಿಚಾರಣೆ ನಡೆಯಬೇಕಿತ್ತು. ಈಗಲಾದರು ಸರಕಾರ ಎಚ್ಚೆತ್ತುಕೊಂಡು ಬಿಗಿ ಕ್ರಮಗಳನ್ನು ಜರುಗಿಸಬೇಕು” ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ