janadhvani

Kannada Online News Paper

ಹಸ್ಸಾ ಈದ್ ಮುಲಾಖಾತ್ ಹಾಗೂ ಅಹ್ಮದ್ ದೂಘಾನ್(ರ)ಅನುಸ್ಮರಣೆ

ದಮ್ಮಾಮ್: ಕೆಸಿಎಫ್ ಅಲ್ ಹಸ್ಸಾ ಸೆಕ್ಟರ್ ವತಿಯಿಂದ ಕೆಸಿಎಫ್ ಪೂರ್ವ ಜಿಕೆಎಸ್‌ಎಫ್ ಫೌಂಡರ್ ಸದಸ್ಯ ಮರ್ಹೂಮ್ ಅಬ್ದುರ್ರಹ್ಮಾನ್ ಕೈರಂಗಳ ಹಾಗೂ ಅಲ್ ಹಸ್ಸಾದ ಸೂಫಿ ಸಂತ ಶೈಖ್ ಅಹ್ಮದ್ ಅಲ್ ದೂಘಾನ್(ರ) ಅವರ ಖಬರ್ ಝಿಯಾರತ್ ನಡೆಸಲಾಯಿತು.

ಬಳಿಕ ಕಾಜೂರು ಹೌಸ್‌ನಲ್ಲಿ ನಡೆದ ಈದ್ ಮುಲಾಖಾತ್ ಕಾರ್ಯಕ್ರಮವನ್ನು ಉಸ್ತಾದ್ ನೌಶಾದ್ ಅಮಾನಿ ದುಆ ನಡೆಸಿ ಈದ್ ಸಂದೇಶ ನೀಡಿದರು.

ಮುಖ್ಯ ಅತಿಥಿಯಾಗಿ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಹಮೀದ್ ಕೈರಂಗಳ, ಅಸ್ರು ಬಜ್ಪೆ, ಇಕ್ಬಾಲ್ ಗುಲ್ವಾಡಿ, ಹಾರಿಸ್ ಕಾಜೂರು, ಮೂಸಾ ಕಡಂಬಾರು ಭಾಗವಹಿಸಿದರು.

ಕಾರ್ಯಕ್ರಮ ವನ್ನು ಇಸ್ಹಾಕ್ ಫಜೀರ್ ಸ್ವಾಗತಿಸಿ, ಧನ್ಯವಾದಗೈದರು.