janadhvani

Kannada Online News Paper

ಎ.ಪಿ.ಉಸ್ತಾದರ ಬೇಡಿಕೆ- ಈದುಲ್ ಅದ್’ಹಾ ಪ್ರಯುಕ್ತ ಕೇರಳದಲ್ಲಿ ಎರಡು ದಿನ ಸಾರ್ವಜನಿಕ ರಜೆ

ಕ್ಯಾಲೆಂಡರ್ ಪ್ರಕಾರ, ಬುಧವಾರ ರಜಾದಿನವಾಗಿತ್ತು

ತಿರುವನಂತಪುರಂ,ಜೂನ್.27: ತ್ಯಾಗ, ಬಲಿದಾನಗಳ ಹಬ್ಬವಾದ ಈದುಲ್ ಅದ್’ಹಾ ಅಥವಾ ಬಕ್ರೀದ್ ಗೆ ಕೇರಳದಲ್ಲಿ ಎರಡು ದಿನಗಳ ಸಾರ್ವಜನಿಕ ರಜೆ ಘೋಷಿಸಲಾಗಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುರುವಾರವೂ ಬಕ್ರೀದ್ ಹಬ್ಬ ಪ್ರಯುಕ್ತ ಸಾರ್ವಜನಿಕ ರಜೆ ನೀಡಲು ತೀರ್ಮಾನಿಸಲಾಗಿದೆ.

ಕ್ಯಾಲೆಂಡರ್ ಪ್ರಕಾರ, ಬುಧವಾರ ರಜಾದಿನವಾಗಿತ್ತು.ಆದರೆ, ಕೇರಳದಲ್ಲಿ ಗುರುವಾರ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಬಕ್ರೀದ್ ಹಬ್ಬಕ್ಕೆ ಎರಡು ದಿನ ರಜೆ ನೀಡುವಂತೆ ಸರ್ಕಾರವನ್ನು ಕೋರಿದ್ದರು.