janadhvani

Kannada Online News Paper

ಶಾರ್ಜಾದ ಅಲ್ ಮುಸಲ್ಲಾದಲ್ಲಿ ಏರ್ ಅರೇಬಿಯಾದ ಹೊಸ ಸಿಟಿ ಚೆಕ್-ಇನ್ ಕೌಂಟರ್ ಆರಂಭ

ಶಾರ್ಜಾದ ಸಫೀರ್ ಮಾಲ್‌ ಮತ್ತು ಮುವೈಲಾ ಅಲ್ ಮದೀನಾ ಶಾಪಿಂಗ್ ಸೆಂಟರ್ ಎದುರು ಈಗಾಗಲೇ ಸಿಟಿ ಚೆಕ್-ಇನ್ ವ್ಯವಸ್ಥೆ ಆರಂಭಿಸಲಾಗಿದೆ

ಶಾರ್ಜಾ: ಏರ್ ಅರೇಬಿಯಾ ಪ್ರಯಾಣಿಕರಿಗಾಗಿ ಶಾರ್ಜಾದಲ್ಲಿ ಹೊಸ ಸಿಟಿ ಚೆಕ್-ಇನ್ ವ್ಯವಸ್ಥೆಯನ್ನು ಪ್ರಾರಂಭಿಸಿದೆ.ಇಂದಿನಿಂದ ಅಲ್ ಮುಸಲ್ಲಾ ದ ಮತಾಜಿರ್ ಶಾಪಿಂಗ್ ಸೆಂಟರ್ ನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಲಗೇಜ್ ನೀಡಿ ಬೋರ್ಡಿಂಗ್ ಪಾಸ್ ಪಡೆದುಕೊಳ್ಳುವ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಇದು, ಶಾರ್ಜಾದಲ್ಲಿ ಏರ್ ಅರೇಬಿಯಾ ಪರಿಚಯಿಸಿದ ಮೂರನೇ ಸಿಟಿ ಚೆಕ್-ಇನ್ ವ್ಯವಸ್ಥೆಯಾಗಿದೆ.ಇಲ್ಲಿ ಬೆಳಗ್ಗೆ 10ರಿಂದ ರಾತ್ರಿ 11ರವರೆಗೆ ಪ್ರಯಾಣಿಕರು ಲಗೇಜ್ ನೀಡಿ ಬೋರ್ಡಿಂಗ್ ಪಾಸ್ ಪಡೆಯಬಹುದು. ವಿಮಾನ ನಿಲ್ದಾಣಕ್ಕೆ ಪ್ರಯಾಣವನ್ನು ಸುಲಭಗೊಳಿಸಲು ಮತ್ತು ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ಗಳಲ್ಲಿನ ದೀರ್ಘ ಸರತಿ ಸಾಲುಗಳನ್ನು ತಪ್ಪಿಸಲು ಸಿಟಿ ಚೆಕ್-ಇನ್ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.

ವಿಮಾನ ಹೊರಡುವ 24 ಗಂಟೆಗಳಿಂದ ಎಂಟು ಗಂಟೆಗಳ ಮೊದಲು ಚೆಕ್-ಇನ್ ಪ್ರಕ್ರಿಯೆಯನ್ನು ಇಲ್ಲಿ ಪೂರ್ಣಗೊಳಿಸಬಹುದು. ಶಾರ್ಜಾದಲ್ಲಿ, ಸಫೀರ್ ಮಾಲ್‌ನಲ್ಲಿ ಮತ್ತು ಮುವೈಲಾ ಅಲ್ ಮದೀನಾ ಶಾಪಿಂಗ್ ಸೆಂಟರ್ ಎದುರು ಈಗಾಗಲೇ ಸಿಟಿ ಚೆಕ್-ಇನ್ ವ್ಯವಸ್ಥೆ ಆರಂಭಿಸಲಾಗಿದೆ. ಅಜ್ಮಾನ್, ಅಲ್ ಐನ್ ಮತ್ತು ರಾಸ್ ಅಲ್ ಖೈಮಾದಲ್ಲೂ ಇದೇ ರೀತಿಯ ಸಿಟಿ ಚೆಕ್ ಇನ್ ಸೌಲಭ್ಯವನ್ನು ಸ್ಥಾಪಿಸಲಾಗಿದೆ.

error: Content is protected !! Not allowed copy content from janadhvani.com