janadhvani

Kannada Online News Paper

1

ಉಳ್ಳಾಲ ದರ್ಗಾ ಸಮಿತಿ ಚುನಾವಣೆ: ಶೇ.86 ಮತದಾನ- 55 ಮಂದಿ ಸದಸ್ಯರ ಆಯ್ಕೆ

ಉಳ್ಳಾಲ, ಫೆ.25: ಇಲ್ಲಿನ ಇತಿಹಾಸ ಪ್ರಸಿದ್ಧ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ದರ್ಗಾ ಮತ್ತು ಕೇಂದ್ರ ಜುಮಾ ಮಸೀದಿ(402) ಆಡಳಿತ ಸಮಿತಿಗೆ ಶನಿವಾರ ಶಾಂತಿಯುತ ಚುನಾವಣೆ ನಡೆಯಿತು.

ನೋಂದಾಯಿತ 3,512 ಮತದಾರರ ಪೈಕಿ 2,935 ಮಂದಿ ಮತ ಚಲಾಯಿಸಿದರು. ಒಟ್ಟು ಶೇ.86.6 ಮತದಾನವಾಗಿದೆ ಎಂದು ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಸೈಯದ್ ಮೊಹಝಂ ಪಾಶಾ ತಿಳಿಸಿದ್ದಾರೆ.

ಕೋಟೆಪುರ, ಮೇಲಂಗಡಿ, ಮುಕ್ಕಚೇರಿ, ಅಳೇಕಲ, ಕಲ್ಲಾಪು ಹೀಗೆ 5 ಕರಿಯ (ವಲಯ)ಗಳಿಂದ ತಲಾ 11 ಮಂದಿಯಂತೆ 55 ಮಂದಿ ಸದಸ್ಯರ ಆಯ್ಕೆಗೆ 80 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತದಾನವು ಮುಕ್ಕಚೇರಿ- ಒಂಭತ್ತುಕೆರೆಯ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ಬೆಳಗ್ಗೆ 8ರಿಂದ ಅಪರಾಹ್ನ 3ರವರೆಗೆ ನಡೆಯಿತು. ಸಂಜೆ 4ಕ್ಕೆ ಮತ ಎಣಿಕೆ ಆರಂಭಿಸಲಾಗಿದ್ದು, ರಾತ್ರಿ ಫಲಿತಾಂಶ ಪ್ರಕಟಿಸಲಾಯಿತು. ಮತದಾನ ಕೇಂದ್ರದ ವ್ಯಾಪ್ತಿಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಚುನಾಯಿತರಾದ ನೂತನ ಸದಸ್ಯರ ವಿವರ:

ಮೇಲಂಗಡಿ ಕರಿಯ: ಜಬ್ಬಾರ್ ಯು.ಎಂ., ನಝೀರ್, ಉಳ್ಳಾಲ ಬಾವಾ, ಮುಹಮ್ಮದ್ ಇಸಾಕ್, ಮೊಯಿದಿನಬ್ಬ, ಅಶ್ರಫ್, ಅಬ್ದುಲ್ ಸಮದ್, ಇಬ್ರಾಹಿಂ ಶೌಕತ್ ಝೈನುದ್ದೀನ್, ಮುಹಮ್ಮದ್ ಬಾವಾ ಉಳ್ಳಾಲ, ಮುಹಮ್ಮದ್ ರಫೀಕ್, ಬಾವಾ ಗುಲಾಂ ಹನೀಫ್.

ಅಲೇಕಳ ಕರಿಯ: ಮುಹಮ್ಮದ್ ಹನೀಫಾ, ಮುಹಮ್ಮದ್ ಫಾರೂಕ್ ಯು, ಅಶ್ರಫ್ ಅಹ್ಮದ್ ಯು.ಎಂ, ಅಬ್ದುಲ್ ಖಾದರ್ ಯು.ಎಂ, ಅಬ್ದುಲ್ ಹಮೀದ್ ಯು.ಡಿ., ಇಬ್ರಾಹಿಂ ಸಯ್ಯದ್, ಇರ್ಫಾನ್, ಮುಹಮ್ಮದ್ ಶಿಹಾಬುದ್ದೀನ್ ಪಿ., ಮುಹಮ್ಮದ್ ರಿಯಾಝ್, ಮುಸ್ತಫಾ, ಸಯ್ಯದ್ ಅಬ್ದುಲ್ ಝಿಯಾದ್.

ಮುಕ್ಕಚ್ಚೇರಿ ಕರಿಯ: ಅಬೂಬಕ್ಕರ್, ಅಯ್ಯಬ್ ಯು.ಕೆ., ಖಲೀಲ್, ಅಹ್ಮದ್ ತಂಝೀಲ್ ಎಸ್, ಇಸ್ಮಾಯಿಲ್, ಖಲೀಲ್, ಫಾರೂಕ್ ಅಬೂಬಕ್ಕರ್ ಉಳ್ಳಾಲ, ಆಝಾದ್ ಇಸ್ಮಾಯಿಲ್, ನಾಝಿಂ ರಹ್ಮಾನ್ ಉಳ್ಳಾಲ, ಮಯ್ಯದ್ದಿ ಉಳ್ಳಾಲ ಬಸ್ತಿಪಡ್ಪು, ಉಳ್ಳಾಲ ನಾಸಿರ್.

ಕಲ್ಲಾಪು ಕರಿಯ: ಮುಹಮ್ಮದ್ ಕೆ., ಫಾರೂಕ್ ಯು.ಎಚ್., ಮುಹಮ್ಮದ್ ಅರೀಫ್ ಯು., ಅಮೀರ್ ಅಹ್ಮದ್, ಮುಹಮ್ಮದ್ ಇಮ್ತಿಯಾಝ್ ಹುಸೇನ್, ಮುಹಮ್ಮದ್ ಇಜಾಝ್, ಮುಹಮ್ಮದ್ ಮುಸ್ತಫ, ಮುಹಮ್ಮದ್ ಪಿ.ಎಚ್., ಮುಹಮ್ಮದ್ ಮುಸ್ತಫ, ಮೊಯ್ದಿನ್, ಪೊಸಹಿತ್ಲು ಹಮೀದ್.

ಕೋಟೆಪುರ ಕರಿಯ: ಅಬ್ದುಲ್ ಅಝೀಝ್, ಅಬ್ದುಲ್ ಖಾದರ್, ಬಶೀರ್ ಯುಬಿಎಂ, ಮುಹಮ್ಮದ್ ರಫೀಕ್, ಹಸೈನಾರ್ ಯುಕೆ, ಹಸೈನಾರ್ ಯು, ಅಬೂಬಕ್ಕರ್, ಅಶ್ರಫ್ ಮುಹಮ್ಮದ್, ಮುಹಮ್ಮದ್ ಅಬ್ದುಲ್ ಖಾದರ್, ರಫೀಕ್ ಯುಎಂ, ತಹಸೀನ್ ಯುಟಿ.

ಉಳ್ಳಾಲ SMO ಬೆಂಬಲಿತ ಅಭ್ಯರ್ಥಿಗಳ ಜಯಭೇರಿ

2016-17 ನೇ ಸಾಲಿನಲ್ಲಿ ನ್ಯಾಯಯುತವಾದ ಚುನಾವಣೆ ನಡೆಯದೆ ಅನಧಿಕೃತವಾಗಿ ಆಡಳಿತವನ್ನು ವಶಪಡಿಸಿಕೊಂಡು ಸ್ವಯಂ ಘೋಷಿತವಾಗಿ ಪದಾಧಿಕಾರಿಗಳನ್ನು ನೇಮಿಸಿ ಪ್ರಸ್ತುತ ವಜಾಗೊಂಡಿರುವ ಅಬ್ದುಲ್‌ ರಶೀದ್ ಮತ್ತು ಸಹವರ್ತಿಗಳು ಕಳೆದ 7ವರೆ ವರ್ಷದಿಂದ ಕಾನೂನು ಉಲ್ಲಂಘನೆ, ಅವ್ಯವಹಾರ, ಭ್ರಷ್ಟಾಚಾರ, ದಬ್ಬಾಳಿಕೆ, ಸರ್ವಾಧಿಕಾರ ಮತ್ತು ಸಮಾಜಘಾತುಕ ಶಕ್ತಿಗಳ ಪೋಷಣೆಯನ್ನು ನಡೆಸುತ್ತಾ ಬಂದಿತ್ತು.

ಕರ್ನಾಟಕ ಸರಕಾರದ 2011 ರ ಸುತ್ತೋಲೆ ಮತ್ತು ಕರ್ನಾಟಕ ವಕ್ಫ್ ಮಂಡಳಿಯ ನಿರ್ಣಯ ಮತ್ತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಇವುಗಳಿಗೆ ವಿರುದ್ಧವಾಗಿ ಮದ್ರಸಾ ಪಠ್ಯ ಪುಸ್ತಕಗಳನ್ನು ಬದಲಸಿ, ಊರಿನಲ್ಲಿ ಗೊಂದಲ ಗಲಾಟೆಗಳಿಗೆ ಹಾಲಿ ಸ್ವಯಂಘೋಷಿತ ಸಮಿತಿ ಕಾರಣವಾಗಿತ್ತು.

ಇದರ ವಿರುದ್ಧ ಸಮರ ಸಾರಿದ ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ(SMO) ಬೆಂಬಲಿತ ಅಭ್ಯರ್ಥಿಗಳು ಪ್ರಸ್ತುತ ಚುನಾವಣೆಯಲ್ಲಿ ಜಯಭೇರಿಯನ್ನು ಸಾಧಿಸಿದ್ದಾರೆಂದು ತಿಳಿದುಬಂದಿದೆ.

ಭ್ರಷ್ಟಾಚಾರ ವಿರುದ್ಧ ತನಿಖೆಗೆ ಆಗ್ರಹ

ಉಳ್ಳಾಲ ದರ್ಗಾ ಮತ್ತು ಅಧೀನ ಸಂಸ್ಥೆಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿಯೂ, ಮೊಹಲ್ಲಾ-ವಿವಿಧ ಮದ್ರಸ, ಶಾಲಾ ಕಾಲೇಜುಗಳ ಅಧ್ಯಾಪಕರಿಗೆ ಬಾಕಿಯಿರಿಸಿರುವ ವೇತನವನ್ನು ಶೀಘ್ರ ಪಾವತಿಯಾಗುವಂತೆ ನೋಡಿಕೊಳ್ಳಬೇಕಾಗಿಯೂ ಮಾನ್ಯ ವಖ್ಫ್ ಮಂಡಳಿಗೆ ಉಳ್ಳಾಲದ ಜನತೆ ಕೇಳಿಕೊಂಡಿದ್ದಾರೆ.

1
1
1

error: Content is protected !! Not allowed copy content from janadhvani.com