ಶಾರ್ಜಾ ರಾಜಮನೆತನದ ಸದಸ್ಯೆ ಶೈಖಾ ಹಿಂದ್ ಬಿಂತ್ ಫೈಝಲ್ ಅಲ್ ಖಾಸಿಮಿ ಅವರು ಬಾಬಾ ರಾಮ್ದೇವ್ ಅವರ ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಸಮುದಾಯವನ್ನು ಕೊಲ್ಲಲು ಕರೆ ನೀಡುವವರ ಉತ್ಪನ್ನಗಳನ್ನು ಬಹಿಷ್ಕರಿಸಲು ಮತ್ತು ಅವರನ್ನು ದೇಶದಿಂದ ಹೊರಹಾಕುವಂತೆ ಟ್ವೀಟ್ನಲ್ಲಿ ಕರೆ ನೀಡಲಾಗಿದೆ.
ಭಾರತೀಯರಿಗೆ ಏನಾಗಿದೆ ಎಂದು ಅರ್ಥವಾಗುತ್ತಿಲ್ಲ, ಸಮಾಜದ ಸುರಕ್ಷತೆಗೆ ಧಕ್ಕೆ ತರುತ್ತಿರುವ ಈ ಭಯೋತ್ಪಾದಕನ ಉತ್ಪನ್ನಗಳನ್ನು ಬಹಿಷ್ಕರಿಸಲು ದೇಶ ಸಿದ್ಧವಾಗಬೇಕು ಎಂದು ಟ್ವೀಟ್ ನಲ್ಲಿ ಆಗ್ರಹಿಸಿದ್ದಾರೆ.
ಅವರು ಶಾಂತಿಯುತ ಯೋಗ ಶಿಕ್ಷಕರಾಗಿದ್ದಾರೆ, ಆದರೂ ಗೋಮೂತ್ರದಿಂದ ತೊಳೆಯುವ ಅವರ ಉತ್ಪನ್ನಗಳನ್ನು ತಿಳಿಯದೆ ಮುಸ್ಲಿಮರು ಖರೀದಿಸುತ್ತಿದ್ದಾರೆ. ಈ ಮೂಲಕ ಲಕ್ಷಾಂತರ ಹಣ ಸಂಪಾದಿಸುತ್ತಾನೆ.
ಸಾಮೂಹಿಕ ಹತ್ಯೆಗೆ ಕಾರಣವಾಗುವ ದ್ವೇಷ ಭಾಷಣ ಅಥವಾ ಹಿಂಸಾಚಾರವನ್ನು ಯುಎಇ ಸಹಿಸುವುದಿಲ್ಲ. ನಿಮ್ಮ ದ್ವೇಷವನ್ನು ನಿಮ್ಮ ದೇಶದಲ್ಲಿ ಮಾತ್ರ ಇಟ್ಟುಕೊಳ್ಳಿ.ಎಲ್ಲರನ್ನೂ ಬೆಂಬಲಿಸುವ ಮತ್ತು ಪ್ರೀತಿಸುವ ದೇಶವಾಗಿದೆ ನನ್ನದು. ಗುರುವಿನಂತೆ ಕಪಟ ವೇಷದಲ್ಲಿ ಬರುವ ಫ್ಯಾಸಿಸ್ಟ್ ಉದ್ಯಮಿಯನ್ನು ಯುಎಇ ಸ್ವಾಗತಿಸುವುದಿಲ್ಲ ಎಂದು ಶೈಖಾ ಹಿಂದ್ ಅವರ ಟ್ವೀಟ್ ಬಲವಾಗಿ ಟೀಕಿಸಿದೆ.
ಈ ಹಿಂದೆ ಬಿಜೆಪಿ ಆಡಳಿತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶೇಖಾ ಹಿಂದ್ ಕಟುವಾಗಿ ಪ್ರತಿಕ್ರಿಯಿಸಿದ್ದರು.
#Boycott #Patanjali #HateMonger
قاطعوا هذه المنتجات الذي صاحبها خرج متحدثاً يسب الإسلام و المسلمين و المسيحين و يشجع بقتلهم و إخراجهم عن البلاد. لا أدري ماذا حصل عند الهنود و لكني أطالب الدولة بمنع منتجات هذا الإرهابي الذي يهدد سلامتنا و جماعتنا. @moiuae @MoEUAE9 pic.twitter.com/ZRx08oYEuP— Hend F Q (@LadyVelvet_HFQ) February 8, 2023